CONNECT WITH US  

50 ದಿನದತ್ತ "ದಿ ವಿಲನ್': ಸುದೀಪ ಸಂತಸ

ಸುದೀಪ್ ಹಾಗೂ ಶಿವಣ್ಣ ಅಭಿನಯದ "ದಿ ವಿಲನ್' ಚಿತ್ರ 50 ದಿನ ಪೂರೈಸಿ, ಅದ್ಭುತ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಯಶಸ್ವಿಗೆ ಕಾರಣವಾದ ಎಲ್ಲ ಅಭಿಮಾನಿಗಳಿಗೆ ಸುದೀಪ್ ಇಂದು ಟ್ವೀಟರ್ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಹೌದು, ತೆರೆಕಂಡ ಮೊದಲ ವಾರದಲ್ಲೇ ₹70 ಕೋಟಿ ಕಲೆಕ್ಷನ್​​ ಮಾಡಿ ದಾಖಲೆ ಬರೆದಂತ ಪ್ರೇಮ್ ನಿರ್ದೇಶನದ "ದಿ ವಿಲನ್' ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಭಾರೀ ನಿರೀಕ್ಷೆ ಮೂಡಿಸಿ ಅಕ್ಟೋಬರ್ 18 ರಂದು ವಿಶ್ವಾದ್ಯಂತ ತೆರೆ ಕಂಡಿತ್ತು. ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ ಬೆನ್ನಲ್ಲೆ ಈ ಚಿತ್ರಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಕಾಂಟ್ರವರ್ಸಿಗೆ ತುತ್ತಾಗಿದ್ದ ಈ ಚಿತ್ರ ಸದ್ಯ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.

ಸುದೀಪ್​​, ತಮ್ಮ ಚಿತ್ರ ಯಶಸ್ವಿಗೆ ಕಾರಣವಾಗಿರುವ ಎಲ್ಲ ಅಭಿಮಾನಿಗಳಿಗೆ ಟ್ವಿಟ್ಟರ್​ನಲ್ಲಿ ಥ್ಯಾಂಕ್ಸ್​​ ಹೇಳಿದ್ದು, "ಪ್ರೀತಿಯಿಂದ ಸ್ವಾಗತಿಸಿದ ನನ್ನ ಎಲ್ಲಾ ಸ್ನೇಹಿತರಿಗೂ ಧನ್ಯವಾದ. ನಿಮ್ಮ ಪ್ರೀತಿ ಹಾಗೂ ಸಪೋರ್ಟ್​ನಿಂದ "ದಿ ವಿಲನ್'​​ ಸಿನಿಮಾ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ' ಎಂದು ಟ್ವೀಟ್​ ಮಾಡುವ​​ ಮೂಲಕ ಧನ್ಯವಾದ ತಿಳಿಸಿದ್ದಾರೆ.


Trending videos

Back to Top