CONNECT WITH US  

ಬೆಂಗಳೂರಿನಲ್ಲಿ ಮಾರಕಾಯುಧಗಳಿಂದ ಕೊಚ್ಚಿ ರೌಡಿಶೀಟರ್‌ ಬರ್ಬರ ಹತ್ಯೆ

 ಬೆಂಗಳೂರು: ನಗರದ ಸುಬ್ರಹ್ಮಣ್ಯಪುರದ ಇಟ್ಟುಮಡು ಮುಖ್ಯರಸ್ತೆಯ ಬಳಿ ಬುಧವಾರ ತಡರಾತ್ರಿ ರೌಡಿಶೀಟರ್‌ ಒಬ್ಬನನ್ನು ಮಾರಕಾಯುಧಗಳಿಂದ ಕೊಚ್ಚಿ ಬರ್ಬರವಾಗಿ ಕೊಚ್ಚಿ ಕೊಲೆಗೈಯಲಾಗಿದೆ. 

ರೌಡಿ ಶೀಟರ್‌ ಆಗಿದ್ದ ವಿನ್ಸನ್‌ ಎಂಬಾತ ಹತ್ಯೆಗೀಡಾಗಿದ್ದು, ಮೂರು ಬೈಕ್‌ಗಳಲ್ಲಿ ಬಂದು ದುಷ್ಕರ್ಮಿಗಳು ಬಾರ್‌ವೊಂದರ ಬಳಿ ಕೊಚ್ಚಿ ಕೊಲೆಗೈದು ಪರಾರಿಯಾಗಿರುವುದಾಗಿ ವರದಿಯಾಗಿದೆ. 

ವಿನ್ಸನ್‌ ಪದೇ ಪದೇ ಗಲಾಟೆ ಮಾಡುತ್ತಿದ್ದು, ಕೆಲ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. 

ಕುಳ್ಳ ಸುನಿಲ್‌ನ ಗ್ಯಾಂಗ್‌ ಸದಸ್ಯರೊಂದಿಗೆ ಬುಧವಾರ ಸಂಜೆ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದ್ದು, ಇದೇ ವೈಷಮ್ಯದಿಂದ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. 

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. 

ಸುಬ್ರಹ್ಮಣ್ಯಪುರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Trending videos

Back to Top