CONNECT WITH US  

ಬೆಂಗಳೂರು : ನಡುರಾತ್ರಿ ರೌಡಿಶೀಟರ್‌ ಮೇಲೆ ಪೊಲೀಸ್‌ ಫೈರಿಂಗ್‌  

ಬೆಂಗಳೂರು: ನಗರದ ಸಮ್ಮನಹಳ್ಳಿ ಬಳಿ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದ  ರೌಡಿಶೀಟರ್‌ವೊಬ್ಬನ ನ್ನು ಫೈರಿಂಗ್‌ ನಡೆಸಿ ವಶಕ್ಕೆ ಪಡೆದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. 

ವರದಿಯಾದಂತೆ ರೌಡಿ ಶೀಟರ್‌ ತರುಣ್‌ ಅಲಿಯಾಸ್‌ ಶರಣ್‌ ಎಂಬಾತನ ಬಂಧನಕ್ಕೆ  ತೆರಳಿದ್ದ ವೇಳೆ ಪೇದೆ ಶ್ರೀನಿವಾಸ ಮೂರ್ತಿ ಅವರ ಮೇಲೆ ದಾಳಿ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ವಿಜಯನಗರ ಇನ್ಸ್‌ಪೆಕ್ಟರ್‌ ನಾಗೇಶ್‌ ಅವರು ತರುಣ್‌ ಕಾಲಿಗೆ  ಗುಂಡು ಹಾರಿಸಿದ್ದಾರೆ. 

ಗಾಯಗೊಂಡಿರುವ ರೌಡಿ ಶೀಟರ್‌ ತರುಣ್‌ನನ್ನು  ವಶಕ್ಕೆ ಪಡೆದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಈತನ ಗ್ಯಾಂಗ್‌ ಸದಸ್ಯರನ್ನೂ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. 

ತರುಣ್‌ ಮತ್ತು ಗ್ಯಾಂಗ್‌ ಸದಸ್ಯರು ಮೇ 21 ರಂದು ಪಟ್ಟೆಗಾರ ಪಾಳ್ಯದಲ್ಲಿ ಪ್ರವೀಣ್‌ ಎನ್ನುವವರನ್ನು ದರೋಡೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. 

Trending videos

Back to Top