ಬೆಂಗಳೂರು: ಮತ್ತೆ ಬೀದಿ ನಾಯಿಗಳ ಅಟ್ಟಹಾಸ; 3 ಮಕ್ಕಳ ಮೇಲೆ ದಾಳಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ದಾಳಿ ಮಿತಿ ಮೀರಿದಂತೆ ಕಾಣುತ್ತಿದ್ದು , ಸೋಮವಾರ ಒಂದೇ ದಿನ 3 ಮಕ್ಕಳ ಮೇಲೆ ದಾಳಿ ನಡೆಸಿವೆ.
ಪದ್ಮನಾಭನಗರದದ ಕನಕ ಬಡಾವಣೆಯಲ್ಲಿ ನಾಯಿಗಳು ಅಟ್ಟಹಾಸ ಮೆರೆದಿದ್ದು 10 ವರ್ಷದೊಳಗಿನ ಮಕ್ಕಳ ಮೇಲೆರಗಿವೆ.
7 ವರ್ಷದ ಬಾಲಕಿ ಮಹಾದೇವಿ, 9 ವರ್ಷದ ಬಾಲಕಿ ಕೋಟೇಶ್ವರಿ ಮತ್ತು 9 ವರ್ಷದ ಬಾಲಕ ತನ್ಮಯ್ ಗೌಡ ಮೇಲೆ ದಾಳಿ ನಡೆಸಿವೆ.
ತನ್ಮಯ್ ಮೇಲೆ ಮೂರು ನಾಯಿಗಳು ಎರಗಿದ್ದು , ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿಬೀಳಿಸುವಂತಿದೆ. ನಾಯಿಗಳು ಕಚ್ಚುತ್ತಿರುವ ವೇಳೆ ಸ್ಥಳೀಯರು ಬಂದಿ ಬಿಡಿಸಿದ್ದಾರೆ.
ಸೆಪ್ಟೆಂಬರ್ 2 ರಂದು ಬೆಂಗಳೂರಿನ ವಿಭೂತಿಪುರಂನಲ್ಲಿ ಬೀದಿ ನಾಯಿ ದಾಳಿಗೆ ಬಾಲಕನೊಬ್ಬ ಬಲಿಯಾಗಿದ್ದ.
ಜನರು ಇದೀಗ ಮಕ್ಕಳನ್ನು ಬೀದಿಗೆ ಬಿಡಲು ಭಯಪಡುತ್ತಿದ್ದಾರೆ.