CONNECT WITH US  

ಆರೋಗ್ಯ ಅರಿವು ಮೂಡಿಸಿ

ನೆಲಮಂಗಲ: ಗ್ರಾಮೀಣ ಪ್ರದೇಶಗಳ ಜನರಿಗೆ ಮೂಲಭೂತ ಸೌಕರ್ಯ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಎನ್‌ಎಸ್‌ಎಸ್‌ ಶಿಬಿರಗಳು ಸಹಕಾರಿ ಎಂದು  ಜಿಪಂ ಸದಸ್ಯೆ ಪುಷ್ಪಾ ತಿಳಿಸಿದರು.

ತಾಲೂಕಿನ ಯಂಟಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಎಂ.ಎಸ್‌.ರಾಮಯ್ಯ ವೈದ್ಯಕೀಯ ಕಾಲೇಜಿನ ಎನ್‌ಎಸ್‌ಎಸ್‌ ಘಟಕದಿಂದ  ಆಯೋಜಿಸಿದ್ದ ಉಚಿತ ವೈದ್ಯಕೀಯ ಶಿಬಿರಕ್ಕೆ ಚಾಲನೆ ನೀಡಿ  ಮಾತನಾಡಿದರು. 

ಗ್ರಾಮೀಣ ಪ್ರದೇಶಗಳಲ್ಲಿ ಅನಾರೋಗ್ಯದಿಂದ ಬಳಲುವ ಜನರಿಗೆ ಆರೋಗ್ಯ ಮತ್ತು ಸ್ವತ್ಛತೆ ಬಗ್ಗೆ ಅರಿವು ಮೂಡಿಸಲು ವಿದ್ಯಾರ್ಥಿಗಳು ಮುಂದಾಗಿರುವುದು ಸಂತೋಷದ ವಿಷಯ. ಪ್ರತಿಯೊಬ್ಬರು ತಮ್ಮ ಮತ್ತು ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ತೋರುವಂತೆಯೇ ತಮ್ಮ ನೆರೆಹೊರೆಯವರ ಆರೋಗ್ಯದ ಕುರಿತಾಗಿಯೂ ಕಾಳಜಿ ವಹಿಸಬೇಕು ಎಂದರು.

ತಾಪಂ ಮಾಜಿ ಸದಸ್ಯ ಸಂಪತ್‌ಬಾಬು,  ಎಂ.ಎಸ್‌.ರಾಮಯ್ಯ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಆರ್‌.ಚಂದ್ರಶೇಖರ್‌, ಗ್ರಾಪಂ ಸದಸ್ಯ ಜಯರಾಮಯ್ಯ, ಸುಧಾಮಣಿ, ದೇವರಾಜು, ಮಾಜಿ ಅಧ್ಯಕ್ಷೆ ಪಾರ್ವತಮ್ಮ, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಹನುಮಂತಯ್ಯ,

ಕಾರ್ಯದರ್ಶಿ  ಎಂ.ಶಿವಮೂರ್ತಿ,  ಮುಖಂಡರಾದ ಚಿಕ್ಕಣ್ಣ, ಎನ್‌ಎಸ್‌ಎಸ್‌ ಮುಖ್ಯಸ್ಥ ಸಿ.ಸಿದ್ದರಾಜು, ಕಲಾದ ಶ್ರೀಧರ್‌, ಮುಖ್ಯೋಪಾಧ್ಯಾಯ ಶ್ರೀನಿವಾಸ್‌, ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಯ್ಯ, ಮುನಿಯಪ್ಪ ಮತ್ತಿತರರಿದ್ದರು.

Trending videos

Back to Top