ಭಯೋತ್ಪಾದನೆ ವಿರುದ್ಧ ಯುವಕರ ಜಾಗೃತಿ


Team Udayavani, Mar 22, 2019, 11:12 AM IST

vij-2.jpg

ಮುದ್ದೇಬಿಹಾಳ: ಭಯೋತ್ಪಾದನೆ ವಿರುದ್ಧ ಜನಜಾಗೃತಿ ಮೂಡಿಸಲು ಹುಬ್ಬಳ್ಳಿಯಿಂದ ಬೈಕ್‌ ಮೇಲೆ ದೇಶವ್ಯಾಪಿ ಸಂಚಾರ ನಡೆಸುತ್ತಿರುವ ಧಾರವಾಡ ಸುನೀಲ ಮರಾಠೆ, ಬೆಳಗಾವಿಯ ಮಹಮ್ಮದಹುಸೇನ್‌ ಹಾಜಿ ಅವರನ್ನು ಇಲ್ಲಿನ
ಬಸವೇಶ್ವರ ವೃತ್ತದಲ್ಲಿ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್‌ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಮಾ.6ರಂದು ಹುಬ್ಬಳ್ಳಿಯಿಂದ ಯಾತ್ರೆ ಆರಂಭಿಸಿದ್ದ ಇವರು ಮೊದಲಿಗೆ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳಿ ಅಲ್ಲಿನ ಮಹಾಲಕ್ಷ್ಮೀ ದೇವಸ್ಥಾನ, ಪುಣೆಯಲ್ಲಿ ಸಿದ್ಧಿ ವಿನಾಯಕ ಮಂದಿರ, ಮುಂಬೈನಲ್ಲಿ ಹಾಜಿ ಅಲಿ ದರ್ಗಾ, ಇಂಡಿಯಾ
ಗೇಟ್‌ ಮಂತಾದೆಡೆ ಸಂಚರಿಸಿ ಕಲಬುರಗಿ ಮಾರ್ಗವಾಗಿ ಮರಳಿ ಹುಬ್ಬಳ್ಳಿಗೆ ತೆರಳುತ್ತಿದ್ದ ಈ ಯಾತ್ರಿಕರನ್ನು ತಡೆದು ಯಾತ್ರೆಯ ಉದ್ದೇಶ, ಹಿನ್ನೆಲೆ ತಿಳಿದುಕೊಂಡ ನಂತರ ಇಬ್ಬರಿಗೂ ಸಿಹಿ ತಿನ್ನಿಸಿ, ಸನ್ಮಾನಿಸಿ ಭಾರತ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆ ಕೂಗುವ ಮೂಲಕ ಹುಬ್ಬಳ್ಳಿಯತ್ತ ಬೀಳ್ಕೊಡಲಾಯಿತು.

ಯಾತ್ರಿಕರಾದ ಸುನೀಲ ಮರಾಠೆ, ಮಹ್ಮದಹುಸೇನ್‌ ಹಾಜಿ ಮಾತನಾಡಿ, ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ನಂತರ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂರ ವಿರುದ್ಧ ಬರುತ್ತಿದ್ದ ಪ್ರಚೋದನಕಾರಿ ಸ್ಟೇಟ್‌ಮೆಂಟ್‌ ಗಳು ಭಯೋತ್ಪಾದನೆ ಎಂದರೆ ಇಸ್ಲಾಂ, ಇಸ್ಲಾಂ ಎಂದರೆ ಭಯೋತ್ಪಾದನೆ ಎನ್ನುವಂತಿದ್ದವು.

ಭಯೋತ್ಪಾದಕರು ಯಾವುದೇ ಧರ್ಮಕ್ಕೆ ಸೇರಿದವರಲ್ಲ. ಯಾರೂ ಇಂಥ ಕೃತ್ಯಗಳಿಗೆ ಕುಮ್ಮಕ್ಕು ನೀಡುವುದಿಲ್ಲ. ಎಲೆಕ್ಷನ್‌ ಸಮೀಪ ಬಂದರೆ ಸಾಕು ದೇಶದಲ್ಲಿ ಕೋಮು ಗಲಭೆ ಸೃಷ್ಟಿಯಾಗುತ್ತಿರುವುದು ವಿಷಾದ ಪಡುವಂಥದ್ದು. ದೇಶದ ಜನತೆಗೆ ಕೋಮು ಸೌಹಾರ್ದತೆಯ ಮಹತ್ವ ತಿಳಿಸಿಕೊಡಲು, ಎಲ್ಲರೂ ಜಾತಿ ಭೇದ ಬಿಟ್ಟು ಬಿಡಬೇಕು ಎಂದರು. ಎನ್‌ಎಸ್‌ ಯುಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಮಹ್ಮದರಫಿಕ ಶಿರೋಳ, ಜಿಲ್ಲಾ ಕಾರ್ಯದರ್ಶಿ ಉಮರ ಮಮದಾಪೂರ, ಬ್ಲಾಕ್‌ ಕಾಂಗ್ರೆಸ್‌ ಎಸ್‌ಸಿ ಮೋರ್ಚಾ ಅಧ್ಯಕ್ಷ ಅಶೋಕ ಅಜಮನಿ, ಪುರಸಭೆ ಸದಸ್ಯ ರಿಯಾಜ ಢವಳಗಿ, ಯುವ ಕಾಂಗ್ರೆಸ್‌ ಎಸ್‌ಸಿ ಘಟಕದ ಅಧ್ಯಕ್ಷ ಲಕ್ಷ್ಮಣ ಚವ್ಹಾಣ, ಯುವ ಕಾಂಗ್ರೆಸ್‌ ಎಸ್‌ಟಿ ಘಟಕದ ಅಧ್ಯಕ್ಷ ಮಾನಪ್ಪ ನಾಯಕ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಮೀನಸಾ ಮುಲ್ಲಾ, ಪ್ರಮುಖರಾದ ಬಾಪು ಢವಳಗಿ, ಶರಣು ಛಲವಾದಿ, ಫಾರೂಕ ಕುಂಟೋಜಿ, ಫಾರೂಕ ಶಿರಗುಪ್ಪಿ, ಸುಹೆಲ್‌ ಧಾರವಾಡಕರ, ಬಸವರಾಜ ಗೂಳಿ, ಅಸ್ಲಂ ಆದೋನಿ, ಸಮೀರ ದ್ರಾಕ್ಷಿ, ಯುಸೂಫ ವಾಲಿಕಾರ, ಕಾಶೀಮ ಬಾಗಲಕೋಟ ಇತರರು ಹಾಜರಿದ್ದರು. 

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.