ಕದ್ದಿದ್ದಕ್ಕಾಗಿ ಕ್ಷಮಾಪಣೆ ಪತ್ರ ಬರೆದ ಕಳ್ಳ!
Team Udayavani, Mar 9, 2017, 9:26 AM IST
ನಿಮ್ಮ ಯಾವುದಾದರೂ ವಸ್ತುವನ್ನು ಕದ್ದ ಕಳ್ಳನಿಂದ ಕ್ಷಮೆ ಅಥವಾ ಹಣವನ್ನು ನಿರೀಕ್ಷಿಸಲು ಸಾಧ್ಯವೇ? ಕಳ್ಳ ತಾನೇ ಕದ್ದದ್ದು ಎಂದು ಒಪ್ಪಿಕೊಳ್ಳುವುದು ಎಲ್ಲಾದರೂ ಉಂಟೇ? ಅಮೆರಿಕದ ಮಹಿಳೆ ಕ್ರಿಸ್ಸಿ ಈ ವಿಚಾರದಲ್ಲಿ ತಮಗೆ ಆದ ಅನುಭವವನ್ನು ಫೇಸ್ ಬುಕ್ಕಿನಲ್ಲಿ ಬರೆದಿದ್ದಾರೆ.
ಅವರ ಮನೆಯ ಎದುರಿಗೆ ನೇತುಹಾಕಿದ್ದ ಅಲಂಕಾರಿಕ ವಿಂಡ್ ಚೇನ್ ಕಳುವಾಗಿತ್ತು.ಇದಾದ ಹಲವು ದಿನಗಳ ಬಳಿಕ ಆಕೆಯ ಮನೆಗೆ ಕ್ಷಮಾಪಣೆ ಟಿಪ್ಪಣಿ ಮತ್ತು 5 ಡಾಲರ್ ಹಣವನ್ನು ಓರ್ವ ಹುಡುಗ ಕಳಿಸಿದ್ದ. ಆ ಟಿಪ್ಪಣಿಯಲ್ಲಿ ಹೀಗೆ ಬರೆಯಲಾಗಿತ್ತು. “ನನ್ನ ತಾಯಿ ತೀರಿಕೊಂಡರು. ಅವರಿಗೆ ಚಿಟ್ಟೆಗಳೆಂದರೆ ತುಂಬಾ ಇಷ್ಟ. ನಿಮ್ಮ ಮನೆಯ ವಿಂಡ್ ಚೆನ್ ಕದ್ದು ನಮ್ಮ ಕಿಟಕಿಗೆ ನೇತು ಹಾಕಿದೆವು. ನಿಮಗೆ ಹಣ ಮಾತ್ರ ಹಿಂದಿರುಗಿಸಲು ಸಾಧ್ಯ- ಜೇಕ್’ ಎಂದು ಬರೆದಿತ್ತು. ಸದ್ಯ ಕ್ರಿಸ್ಸಿ ಆ ಹುಡುಗನಿಗಾಗಿ ಹುಡುಕಾಡುತ್ತಿದ್ದಾರೆ. ಕದ್ದಿದ್ದಕ್ಕೆ ಶಿಕ್ಷೆ ನೀಡಲು ಅಲ್ಲ. ಬದಲಾಗಿ ಪ್ರೀತಿಯಿಂದ ಆತನಿಗೆ ಉಡುಗೊರೆ ಕೊಟ್ಟು ಕಳಿಸಲು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!