ಬಿರಿಯಾನಿ ವಾಸನೆ ಕಿರಿಕ್ಗೆ ದಂಡ ಕಟ್ಟಿದ ರೆಸ್ಟೋರೆಂಟ್!
Team Udayavani, May 1, 2017, 5:26 AM IST
ಸೊಯ್ಯನೆ ಹಾಕಿದ ಒಗ್ಗರಣೆ, ಘಮಘಮ ಮಸಾಲೆ ಅರೆದ ಪದಾರ್ಥ.. ಆ ಪರಿಮಳಕ್ಕೇ ಹೊಟ್ಟೆ ಚುರುಗುಟ್ಟಬೇಕು! ಆದರೆ ಬ್ರಿಟನ್ನಲ್ಲಿ ಅವರಿಗೆ ಹೊಟ್ಟೆ ಚುರುಗುಟ್ಟಲಿಲ್ಲ. ಬದಲಿಗೆ ನಖಶಿಖಾಂತ ಕೋಪ ತರಿಸಿದೆ. ಪರಿಣಾಮ…ಆಹಾ..! ಎಂದು ಬಾಯಿ ಚಪ್ಪರಿಸುವಂತಹ ಅಡುಗೆ ಮಾಡಿದವರು ದಂಡ ಕಟ್ಟುವಂತಾಗಿದೆ. ಇದು ಬ್ರಿಟನ್ ಮಿಡಲ್ಸ್ಬ್ರೋಗ್ನ ಖುಷಿ ಭಾರತೀಯ ರೆಸ್ಟೋರೆಂಟ್ನ ಕಥೆ. ಇಲ್ಲಿ ತಯಾರಿಸುತ್ತಿದ್ದ ಘಮಘಮ ಬಿರಿಯಾನಿ, ಬಾಜಿಗಳಿಂದ ಕಿರಿಕಿರಿಯಾಗಿದೆ ಎಂದು ಸ್ಥಳೀಯರು ದೂರು ನೀಡಿದ್ದಾರೆ. ಈ ಪಂಜಾಬಿ ಹೋಟೆಲ್ನಲ್ಲಿ ಅಡುಗೆ ವಾಸನೆ ತಡೆಯುವ ಹೊಗೆಕೊಳವೆ, ಲ್ಟರ್ ಇಲ್ಲ. ಪರಿಣಾಮ ನಿತ್ಯವೂ ವಾಸನೆ-ಪರಿಮಳದ ಸಮಸ್ಯೆ ಕಾಡಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಾಧೀಶರು, ಬಿರಿಯಾನಿ ಮಾಡಿ ಸ್ಥಳೀಯರಿಗೆಲ್ಲ ಕಿರಿಕಿರಿ ಮಾಡಿದ್ದಕ್ಕೆ ರೆಸ್ಟೋರೆಂಟ್ನ
ದಂಪತಿಗೆ ತಲಾ 21ಸಾವಿರ ದಂಡ, 2400 ರೂ. ಸಂತ್ರಸ್ತರಿಗೆ ಪರಿಹಾರ ನೀಡಲು ಆದೇಶಿಸಿದ್ದಾರೆ. ರೆಸ್ಟೋರೆಂಟ್ನ ವಾಸನೆಯಿಂದ ನಮ್ಮ ಬಟ್ಟೆ ಎಷ್ಟು ಬಾರಿ ತೊಳೆದರೂ ಪ್ರಯೋಜನವಾಗಿಲ್ಲ ಎಂದು ಅಲವತ್ತುಕೊಂಡಿದ್ದರಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ