ಶೇ. 88ರಷ್ಟು ಮಂದಿಗೆ ಹೆಂಡ್ತಿ ಇದ್ರೆ ಧೈರ್ಯ!
Team Udayavani, Nov 20, 2017, 3:23 AM IST
ದೇಶದ ಶೇ. 88ರಷ್ಟು ಅಪ್ಪಂದಿರು ತಮ್ಮ ಹೆಂಡತಿಯ ನೆರವಿಲ್ಲದೆ ತಮ್ಮ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿ ಏಕಾಂಗಿಯಾಗಿ ನಿಭಾಯಿಸಲು ಹೆದರುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಮುಂಬಯಿ ಮೂಲದ “ಪೋದಾರ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್’ ಎಂಬ ಸರಕಾರೇತರ ಸಂಸ್ಥೆ ದೇಶದ ನಾನಾ ನಗರಗಳಲ್ಲಿ ಸುಮಾರು 4,800 ಅಪ್ಪಂದಿರ ಸಮೀಕ್ಷೆ ನಡೆಸಿದೆ.
ಇದರಲ್ಲಿ ಶೇ. 12 ಮಂದಿ ಮಾತ್ರ ಹೆಂಡತಿಯಿಲ್ಲದೆಯೂ ತಮ್ಮ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿ ಸಂಭಾಳಿಸುವ ಸ್ಥೈರ್ಯ ತೋರಿದ್ದಾರೆ. ಆದರೆ, ಬಹುತೇಕ ಮಂದಿ “ಸಾಧ್ಯವೇ ಇಲ್ಲ… ಮಕ್ಕಳ ಜತೆ ಹೆಂಡತಿ ಇರಲೇಬೇಕು. ಇಲ್ಲಾಂದ್ರೆ ಅವರನ್ನು ಸುಧಾರಿಸುವುದು ಕಷ್ಟ’ ಎಂದಿದ್ದಾರಂತೆ!
ಇದಲ್ಲದೆ, ಮತ್ತೂಂದು ಖುಷಿಯ ವಿಚಾರವಿದೆ. ಈಗಿನ ತಲೆಮಾರಿನ ಅಪ್ಪಂದಿರು ತಮ್ಮ ಮಕ್ಕಳ ಜತೆ ಕಳೆಯಲು ದಿನಕ್ಕೆ 2ರಿಂದ 3 ಗಂಟೆ ಸಮಯ ಮೀಸಲಿಡುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಶೇ. 73ರಷ್ಟು ಅಪ್ಪಂದಿರು ಕಚೇರಿಗೆ ಹತ್ತಿರದಲ್ಲೇ ಮನೆ ಮಾಡಿರುವುದು ತಿಳಿದುಬಂದಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ