CONNECT WITH US  

ಏಂಜಲೀನಾ ಜ್ಯೂಲಿ ಆಗಲು ಹೋಗಿ...!

ಬಾಲಿವುಡ್‌ ನಟಿ ಏಂಜಲಿನಾ ಜ್ಯೂಲಿಯಂತೆ ಕಾಣಿಸಿ ಕೊಳ್ಳಬೇಕೆಂದು ಹಂಬಲಿಸಿದ್ದ ಇರಾನ್‌ನ ಸಹರ್‌ ತಾಬರ್‌ ಎಂಬ ಯುವತಿ ಕನಿಷ್ಠ 50 ಸರ್ಜರಿಗಳನ್ನು ತನ್ನ ಮುಖಕ್ಕೆ ಮಾಡಿಸಿಕೊಂಡು ಕೊನೆಗೂ ಆಕೆಯ ಪ್ರತಿರೂಪವಾಗಿದ್ದಾಗಿ ಇನ್‌ಸ್ಟಾ ಗ್ರಾಂನಲ್ಲಿ ಹೇಳಿಕೊಂಡಿ ದ್ದಾರೆ. ಈ ವಿಚಾರ ಈಗ ವೈರಲ್‌ ಆಗಿದೆ. ಆದರೆ, ವಿಷಾದವೆಂದರೆ, ತನ್ನ ಹೇಳಿಕೆಯೊಂದಿಗೆ ಆಕೆ ಏಂಜಲಿನಾ ಜ್ಯೂಲಿಯಂತೆ ತಾನೀಗ ಕಾಣುತ್ತಿರುವುದಾಗಿ ಫೋಟೋವೊಂದನ್ನು ಹಾಕಿ ಕೊಂಡಿದ್ದರೂ ಹಲವಾರು ಮಂದಿ ಆಕೆಯ ವಾದವನ್ನು ತಳ್ಳಿಹಾಕಿದ್ದಾರೆ.

ಕೆಲವರು, ಇದು ಮೇಕಪ್‌ ಗಿಮಿಕ್‌ ಎಂದಿದ್ದರೆ, ಇನ್ನೂ ಕೆಲವರು ಇದು ಫೋಟೋ ಶಾಪ್‌ ಮೂಲಕ ಎಡಿಟ್‌ ಮಾಡಿರುವ ಫೋಟೋ ಎಂದು ಕಾಲೆಳೆದಿದ್ದಾರೆ. ಇನ್ನೂ ಕೆಲವರು, ನಿನ್ನ ಈ ಹೊಸ ಮುಖ ಏಂಜಲಿನಾ ಸತ್ತ ನಂತರ ಹೇಗೆ ಕಾಣುತ್ತಾಳೆ ಎಂಬುದನ್ನು ತೋರುತ್ತಿದೆ ಎಂದು ಆಕೆಯನ್ನು ನೋಯಿಸಿದ್ದಾರೆ. ಅಪಾರ ಹಣ ಖರ್ಚು ಮಾಡಿಯೂ ಆಕೆಗೆ ಹೀಗಾಗಬಾರದಿತ್ತು ಅಲ್ವಾ?

Trending videos

Back to Top