ಚೀನಾದ ಝೂನಲ್ಲಿ ಪ್ರಾಣಿಗಳೂ ಪ್ಲಾಸ್ಟಿಕ್!
Team Udayavani, Dec 11, 2017, 12:38 PM IST
ನಕಲಿ ಸಾಮಗ್ರಿಗಳಿಗೆ ಚೀನಾ ತವರು ಎಂಬ ಮಾತಿತ್ತು. ದೇಶದ ಯಾವುದೇ ಮೂಲೆಯಲ್ಲಿ ಸಿಗುವ ಎಲೆಕ್ಟ್ರಾನಿಕ್ ಸಾಮಗ್ರಿಯೂ ಚೀನಾದಲ್ಲಿ ನಕಲಾಗಿರುತ್ತದೆ ಎಂಬ ಮಾತಿದೆ. ಆದರೆ ಪ್ರಾಣಿ ಸಂಗ್ರಹಾಲಯದಲ್ಲಿರುವ ಪ್ರಾಣಿಯನ್ನೂ ನಕಲು ಮಾಡಿದರೆ! ಇಂಥದ್ದೊಂದು ವಿಚಿತ್ರ
ಚೀನಾದ ಗ್ಯೂಶನ್ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದಿದೆ. ಇತ್ತೀಚೆಗಷ್ಟೇ, ಅಂದರೆ ನವೆಂಬರ್ನಲ್ಲಿ ಸಾರ್ವಜನಿಕರಿಗೆ ತೆರೆದಿದ್ದ ಪ್ರಾಣಿ ಸಂಗ್ರಹಾಲಯವು ಕಳೆದ ವಾರ ಪೆಂಗ್ವಿನ್ ಗಳನ್ನು ತಂದಿದ್ದೇವೆ ಎಂದು ಹೇಳಿಕೊಂಡಿತ್ತು. ಈ ಪ್ರಾಣಿ ಸಂಗ್ರಹಾಲಯದ ಆಕರ್ಷಣೆಯೇ ಪೆಂಗ್ವಿನ್ಗಳು ಹಾಗೂ ಆಮೆಗಳು ಎಂದು ಹೇಳಿಕೊಂಡಿತ್ತು. ಯುಲಿನ್ ಪ್ರಾಂತ್ಯದ ಈ ಪ್ರಾಣಿ ಸಂಗ್ರಹಾಲಯಕ್ಕೆ ಪೆಂಗ್ವಿನ್ ನೋಡಲು ಕುತೂಹ
ಲದಿಂದ ಧಾವಿಸಿದವರಿಗೆ ಕಂಡಿದ್ದು, ಪ್ಲಾಸ್ಟಿಕ್ನ ಪೆಂಗ್ವಿನ್ ಗಳು. ಮಕ್ಕಳಾಟಿಕೆಯ ಪೆಂಗ್ವಿನ್ಗಳಿಗೆ ಗಾಳಿ ತುಂಬಿ ಒಂದು ಕಂಬಕ್ಕೆ ಕಟ್ಟಿಹಾಕಲಾಗಿತ್ತು. ಇನ್ನೂ ಅಚ್ಚರಿಯೆಂದರೆ ಸಂಜೆ ಹೊತ್ತಿಗೆ ಹೋಗಿದ್ದ ಜನರಿಗೆ ಕಂಡಿದ್ದು, ತುಂಬಿದ್ದ ಗಾಳಿ ಇಳಿದು ಉದುರಿ ಬಿದ್ದ ಪೆಂಗ್ವಿನ್ಗಳು! ಈ ವಿಷಯ ಚೀನಾದ ಟ್ವಿಟರ್ ಆಗಿರುವ ವೀಬೋದಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದ್ದು, ಜನ ಲಘುಹಾಸ್ಯದ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್