CONNECT WITH US  

ಫೋಟೋ ಎಡಿಟಿಂಗ್‌ ವೇಳೆ ಆಯ್ತು ಎಡವಟ್ಟು 

ಸ್ಟುಡಿಯೋದಲ್ಲಿ ಫೋಟೋ ತೆಗೆದ ಬಳಿಕ ಅದಕ್ಕೆ ಕೊಂಚ ಟಚಪ್‌ ಮಾಡಲಾಗುತ್ತದೆ. ಫೋಟೋ ಎಡಿಟ್‌ ಮಾಡುವ
ಸಾಫ್ಟ್ವೇರ್‌ ಬಳಕೆಗೆ ಮೊದಲು ಕೈನಲ್ಲೇ ಅದನ್ನು ಮಾಡುತ್ತಿದ್ದರು. ಅಮೆರಿಕದ ಸೈಂಟ್‌ ಲೂಯಿಸ್‌ನಲ್ಲಿ ಫೋಟೋಗ್ರಾಫ‌ರ್‌ ಒಬ್ಬನ ಕೈನಿಂದ ತೆಗೆದ ಫ್ಯಾಮಿಲಿ ಫೋಟೋ ಫೋಟೋಶಾಪ್‌ನಲ್ಲಿ ಎಡಿಟ್‌ ಮಾಡಲು ಹೊಗಿ ಕಾರ್ಟೂನ್‌ನಂತಾಗಿದೆ.

ಪಾಮ್‌ ಝಾರಿಂಗ್‌ ಎಂಬ ಮಹಿಳೆ ಗಂಡ ಮತ್ತು ಮಕ್ಕಳ ಫೋಟೋ ಫೋಟೋ ಶಾಪ್‌ ಸಾಫ್ಟ್ವೇರ್‌ನಿಂದ ಉಂಟಾದ ಎಡವಟ್ಟನ್ನು ಫೇಸ್‌ ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಇರುವ ರೀತಿಯಲ್ಲಿ ಇರದೆ ಕಾಟೂìನ್‌ನಂತೆ ಎಲ್ಲರೂ ಚಿತ್ರಿತರಾಗಿದ್ದೇವೆ ಎಂದು ಪಾಮ್‌ ಬರೆದುಕೊಂಡಿದ್ದಾರೆ. ಅವರ ಫ್ಯಾಮಿಲಿ ಫೋಟೋ ಜಾಲತಾಣಗಳಲ್ಲಿ ನೋಡಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಅಂದ ಹಾಗೆ ಅದನ್ನು ಪಾಮ್‌ರ ಕುಟುಂಬವೂ ಎಂಜಾಯ್‌ ಮಾಡಿದೆಯಂತೆ.

Trending videos

Back to Top