ಮ್ಯಾಟ್ರಿಮನಿಗೆ ಎಂಟ್ರಿಯಾದ ಬೊಲಿವಿಯಾ ಕಪ್ಪೆ
Team Udayavani, Feb 12, 2018, 6:16 AM IST
ಪ್ರಾಯಶಃ ತನ್ನ ಪ್ರಭೇದದ ಕೊನೆಯ ಜೀವಿಯಾಗಿ ಉಳಿದಿರುವ, ಬೊಲಿವಿಯಾ ದೇಶವಿರುವ ಭೂಭಾಗದಲ್ಲಿ ಮಾತ್ರ ಕಾಣಸಿಗುವ ಸೆಹೆಂಕಾಸ್ ಜಾತಿಯ ಗಂಡು ಕಪ್ಪೆಗೆ ಈಗ ಅರ್ಜೆಂಟಾಗಿ ಒಬ್ಬ ಸಂಗಾತಿ (ಹೆಣ್ಣು ಕಪ್ಪೆ) ಬೇಕಾಗಿದ್ದಾಳೆ. “ಕೊಚಬಂಬಾ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ’ನಲ್ಲಿನ ಕೃತಕ ಕೆರೆಯಲ್ಲಿ ರೋಮಿಯೋ ಹೆಸರಿನ ಈ ಗಂಡು ಕಪ್ಪೆ ವಾಸವಾಗಿದೆ. ಸಾಮಾನ್ಯವಾಗಿ, ಈ ಜಾತಿ ಕಪ್ಪೆಗಳು 15 ವರ್ಷ ಬದುಕುತ್ತವೆ. ಈಗಾಗಲೇ ಈ ರೋಮಿಯೋ 10 ವರ್ಷ ಸವೆಸಿದ್ದಾನೆ. ಹಾಗಾಗಿ, ಬೊಲಿವಿಯಾ ಮಾತ್ರವಲ್ಲದೆ, ಅಕ್ಕಪಕ್ಕದ ದೇಶಗಳಲ್ಲಾದರೂ ಈ ಜಾತಿಯ ಒಂದೇ ಒಂದು ಹೆಣ್ಣು ಕಪ್ಪೆ ಸಿಕ್ಕರೆ ಸಾಕು, ಇವನ ಸಂತತಿ ವಿಸ್ತರಿಸಿ, ಈ ಪ್ರಬೇಧ ಉಳಿಸಬಹುದೆಂದು ವನ್ಯಜೀವಿ ವಿಜ್ಞಾನಿಗಳು ಈವರೆಗೆ ಮಾಡಿರುವ ಅಸಂಖ್ಯ ಹುಡುಕಾಟಗಳು ಯಾವುದೇ ಫಲ ಕೊಟ್ಟಿಲ್ಲ. ಹಾಗಾಗಿ, ಅಂತರ್ಜಾಲದಲ್ಲಿ ಇದರ ವಿಡಿಯೋ ಹಾಕಿ ಈತನಿಗೊಂದು ಹೆಣ್ಣು ಹುಡುಕಿಕೊಡಿ ಎಂದು ಅವರು ಮನವಿ ಮಾಡಿದ್ದಾರೆ! ಯಾವುದೇ ಜೀವ ವೈವಿಧ್ಯದಲ್ಲಿ ಹೆಣ್ಣಿನ ಪ್ರಾಮುಖ್ಯತೆಯನ್ನು ಇದು ಎತ್ತಿ ತೋರಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು