ನೊಣದಿಂದ ಕಮರಿದ ವಿಶ್ವ  ದಾಖಲೆ ಕನಸು | Udayavani - ಉದಯವಾಣಿ
   CONNECT WITH US  
echo "sudina logo";

ನೊಣದಿಂದ ಕಮರಿದ ವಿಶ್ವ  ದಾಖಲೆ ಕನಸು

ಚಿಕ್ಕ ಪುಟ್ಟ ವಸ್ತುಗಳ ಶಕ್ತಿಯನ್ನು ನಾವು ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ. ಅದು ಒಂದು ಚಿಕ್ಕ ನೊಣವಾದರೂ ಸರಿಯೇ. ನೊಣ ಎಂದು ಕಡೆಗಣನೆ ಮಾಡಿದರೆ ಅದೇ ನಿಮ್ಮ ದಾರಿಗೆ ಮುಳ್ಳಾಗಬಹುದು. ನಾವು ಮಾತನಾಡುತ್ತಿರುವುದು "ಈಗ' ಚಿತ್ರದ ಬಗ್ಗೆ ಅಲ್ಲ. ಜರ್ಮನಿಯಲ್ಲಿ ವಿಶ್ವ ದಾಖಲೆ ಪ್ರಯತ್ನವೊಂದು ಪುಟ್ಟ ನೊಣದಿಂದ ಭಗ್ನವಾಗಿದೆ. ನಾಣ್ಯ ಗಳಿಗಿಂತಲೂ ಪುಟ್ಟ  ಡೊಮಿನೊ (ಆಯತಾಕಾರದ ಆಕೃತಿಯ ಆಟದ ವಸ್ತು)ಗಳನ್ನು ಹೆಚ್ಚು ಸಂಖ್ಯೆಯಲ್ಲಿ ಜೋಡಿಸಿ, ಅದನ್ನು ಉರುಳಿಸುವ ಸ್ಪರ್ಧೆ ನಡೆಯುತ್ತಿತ್ತು. 22 ಜನರ ತಂಡ ವಿಶ್ವ ದಾಖಲೆ ಮಾಡಲು ಸನ್ನದ್ಧರಾಗಿದ್ದರು. ನಿಜದ ಡೊಮಿನೊಕಿಂತ 100 ಪಟ್ಟು ಹಗುರವಾಗಿರುವ 596,229 ಡೊಮಿನೊಗಳನ್ನು ಅವರು ಜೋಡಿಸಿದ್ದರು. ಇನ್ನೇನು ಅವುಗಳನ್ನು ಒಂದರ ಮೇಲೆ ಒಂದರಂತೆ ಉರುಳಿಸಿ ಗಿನ್ನೆಸ್‌ ದಾಖಲೆಗೆ ಸೇರಿಸ ಬೇಕು ಅನ್ನುವಷ್ಟರಲ್ಲಿ ನೊಣವೊಂದು ಒಂದು ಡೊಮಿನೊ
ಮೇಲೆ ಕೂತು ಒಂದಷ್ಟು ಡೊಮಿನೊಗಳು ಉರುಳಿದವು. ಅಲ್ಲಿಗೆ ತಂಡದ ವಿಶ್ವ ದಾಖಲೆ ಕನಸು ಕಮರಿತು.

Trending videos

Back to Top