CONNECT WITH US  

"ಚೀನಾ ಮಹಾಗೋಡೆ' ಪತ್ತೆಗೆ ಎರಡು ಲೈಫ್ ಲೈನ್‌ ಬಳಸಿದ ಯುವತಿ!

ಚೀನಾ ಮಹಾಗೋಡೆ ಎಲ್ಲಿದೆ ಎಂಬ ಪ್ರಶ್ನೆಗೆ ಶಾಲೆಗೆ ಹೋಗುವ ಪುಟ್ಟ ಬಾಲಕನೂ ಸರಿಯಾದ ಉತ್ತರ ನೀಡಬಲ್ಲ. ಆದರೆ, ಟರ್ಕಿಯ ಟಿವಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ "ಹೂ ವಾಂಟ್ಸ್‌ ಟು ಬಿ ಮಿಲೇನಿಯರ್‌?' ಕಾರ್ಯಕ್ರಮದಲ್ಲಿ (ನಮ್ಮಲ್ಲಿ ಬರುವ ಕೌನ್‌ ಬನೇಗಾ ಕರೋಡ್‌ಪತಿ ಮಾದರಿಯದ್ದು) ಭಾಗವಹಿಸಿದ್ದ 26 ವರ್ಷದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದ ಸುಅಯಾನ್‌ ಎಂಬ ಯುವತಿ ಈ ಪ್ರಶ್ನೆಗೆ ಉತ್ತರಿಸಲು ಎರಡು ಲೈಫ್ಲೈನ್‌ ಉಪಯೋಗಿಸಿದ್ದಾರೆ!

ಮೊದಲಿಗೆ "ಆಡಿಯನ್ಸ್‌ ಪೋಲ್‌'ಗೆ ಹೋದಾಗ ಖಚಿತ ಉತ್ತರ ಸಿಕಿಲ್ಲದಿದ್ದಕ್ಕೆ "ಫೋನ್‌ ಎ ಫ್ರೆಂಡ್‌' ಉಪಯೋಗಿಸಿ ಸರಿ ಉತ್ತರ ನೀಡಿದ್ದಾಳೆ. ಆದರೆ, ಈ ವಿಚಾರ ಅಂತರ್ಜಾಲದಲ್ಲಿ ಸಾಕಷ್ಟು ಟೀಕೆಗೆ ಕಾರಣವಾಗಿದ್ದು, ಸ್ಪರ್ಧಾಳು ಹಾಗೂ ಚಿತ್ರೀಕರಣದ ವೇಳೆ ಇದ್ದ ಆಡಿಯನ್ಸ್‌ಗೂ ಚೀನಾದ ಮಹಾಗೋಡೆ ಬಗ್ಗೆ ಗೊತ್ತಿಲ್ಲದಿರುವುದು ಟರ್ಕಿಯ ಶಿಕ್ಷಣದ ಗುಣಮಟ್ಟವನ್ನು ಸೂಚಿಸುತ್ತಿದೆ ಎಂದು ಹಲವಾರು ಮಂದಿ ಟೀಕಿಸಿದ್ದಾರೆ.


Trending videos

Back to Top