ಖಾಲಿ ತಿಜೋರಿ ಕದ್ದು ಓಡಿದ ಕಳ್ಳ
Team Udayavani, Jan 30, 2019, 9:57 AM IST
ಹಲವಾರು ಕಳ್ಳರು ಕನ್ನ ಹಾಕಲು ಬಂದು ವಿಫಲವಾಗಿ ನಗೆಪಾಟಲಿಗೀಡಾಗುವ ದೃಶ್ಯಗಳು ಅಂತರ್ಜಾಲದಲ್ಲಿ ಆಗಾಗ ಹರಿದಾಡುತ್ತಿರುತ್ತದೆ. ಆ ಸಾಲಿಗೆ ಫ್ಲೋರಿಡಾದ ಕಳ್ಳನೊಬ್ಬ ಸೇರಿದ್ದಾನೆ. ಮುಖಕ್ಕೆ ಮುಸುಕು ಹಾಕಿ, ಕಪ್ಪು ಬಟ್ಟೆ ಧರಿಸಿ, ಬೆರಳಚ್ಚು ಎಲ್ಲೂ ಬೀಳಬಾರದೆಂದು ಕೈಗೆ ಸಾಕ್ಸ್ ಧರಿಸಿ ಕಳ್ಳ ಹಣ ಕದಿಯಲು ಡಾಮಿನೋಸ್ ಪೀಜಾ ಮಳಿಗೆಗೆ ರಾತ್ರಿ ಬರುತ್ತಾನೆ. ಆತ ನೆಲದ ಮೇಲೆ ತೆವಳುತ್ತಾ ಮಳಿಗೆಯ ವ್ಯವಹಾರದ ಕೊಠಡಿಗೆ ಹೋಗಿ ಹಣಕ್ಕಾಗಿ ತಡಕಾಡುತ್ತಾನೆ.
ಅಲ್ಲಿ ಹಣ ಸಿಗದಿದ್ದಾಗ ಖಾಲಿ ತಿಜೋರಿಯನ್ನು ಕದ್ದು ಹೊರ ಓಡುತ್ತಾನೆ. ಈ ಕುರಿತು ಟ್ವೀಟ್ ಮಾಡಿರುವ ಪೊಲೀಸರು,ಮಳಿಗೆ ಮುಚ್ಚುವ ವೇಳೆಯೇ ತಿಜೋರಿಯನ್ನು ಖಾಲಿ ಮಾಡಲಾಗಿತ್ತು ಎಂದು ಬರೆದಿದ್ದಾರೆ.