ಸಲ್ಮಾನ್ ಆಪ್ತ,ಬಾಲಿವುಡ್ ನಟ ಇಂದರ್ ಕುಮಾರ್ ಹೃದಯಾಘಾತದಿಂದ ನಿಧನ
Team Udayavani, Jul 28, 2017, 2:41 PM IST
ಮುಂಬಯಿ: ಬಾಲಿವುಡ್ನ ನಟ ಇಂದರ್ ಕುಮಾರ್ ಅವರು ಶುಕ್ರವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.
ಸಲ್ಮಾನ್ ಖಾನ್ ಜೊತೆಗಿನ ಕೆಲ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಇಂದರ್ ಕುಮಾರ್ ಅವರ ಆಪ್ತ ವಲಯದಲ್ಲಿ ಓರ್ವ ರಾಗಿದ್ದರು.
ಅಂಧೇರಿಯಲ್ಲಿರುವ ಫ್ಲ್ಯಾಟ್ನಲ್ಲಿ ಶುಕ್ರವಾರ ನಸುಕಿನ 2 ಗಂಟೆಯ ವೇಳೆಗೆ ಹೃದಯಾಘಾತದಿಂದ ಇಂದರ್ ಕುಮಾರ್ ಕೊನೆಯುಸಿರೆಳೆದಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
20 ವರ್ಷಗಳ ಕಾಲ ಬಾಲಿವುಡ್ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ಇಂದರ್ ಕುಮಾರ್ ಏಕ್ತಾ ಕಪೂರ್ ಅವರ ಜನಪ್ರಿಯ ಟಿವಿ ಶೋ ‘ಕ್ಯೂಂಕಿ ಸಾಸ್ ಭಿ ಕಭೀ ಬಹು ಥಿ’ನಲ್ಲಿ ಮಿಹಿರ್ ವಿರಾನಿ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದರು. ‘ತಿರ್ಚಿ ಟೋಪಿವಾಲೆ’, ‘ಕಹೀ ಪ್ಯಾರ್ ನಾ ಸೋ ಜಾಯೆ’, ‘ಪೇಯಿಂಗ್ ಗೆಸ್ಟ್,’ತುಮ್ಕೋ ನ ಭೂಲ್ ಪಾಯೆಂಗೆ’, ‘ವಾಂಟೆಡ್’ ಮೊದಲಾದವುಗಳು ಅವರ ಪ್ರಮುಖ ಚಿತ್ರಗಳು. ‘ಪಾಟಿ ಪೆಯ್ಡ ಹೆ ಯಾರ್’ ಚಿತ್ರ ಇನ್ನಷ್ಟೆ ಬಿಡುಗಡೆಯಾಗಬೇಕಿದೆ.
ಪತ್ನಿ ಪಲ್ಲವಿ ಸರಫ್ ರನ್ನು ಇಂದರ್ ಕುಮಾರ್ ಅಗಲಿದ್ದಾರೆ. ಇಂದು ಸಂಜೆ ಯಾರಿ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ