CONNECT WITH US  

ವಿವಾದಕ್ಕೆ ಕಾರಣವಾಯ್ತು ಸಲ್ಲು ನಿರ್ಮಾಣದ "ಲವ್​ರಾತ್ರಿ' ಟೈಟಲ್

ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಪತಿ ಆಯುಷ್ ಶರ್ಮಾ ಅಭಿನಯದ "ಲವ್​ರಾತ್ರಿ' ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಚಿತ್ರದ ನಿರ್ಮಾಪಕ ಕಮ್ ನಟ ಸಲ್ಮಾನ್ ಖಾನ್ "ಪ್ರೀತಿ ಹಾಗೂ ಪ್ರಣಯ'ದ ಕಥೆ ನಿಮಗಾಗಿ.. ಎಂಬ ಹೆಸರಿನಲ್ಲಿ "ಲವ್​ರಾತ್ರಿ'ಯ ಮೊದಲ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್​ನ್ನು 50 ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿದ್ದಾರೆ.

ನವರಾತ್ರಿ ಹಬ್ಬದಲ್ಲಿ ನಡೆಯುವ ಲವ್‍ಸ್ಟೋರಿ ಕಥಾಹಂದರವನ್ನೊಳಗೊಂಡ ಈ ಚಿತ್ರದ ಟೈಟಲ್ ಈಗಾಗಲೇ ವಿವಾದಕ್ಕೆ ಕಾರಣವಾಗಿದೆ. ಚಿತ್ರದ ಟೈಟಲ್ ಮತ್ತು ಕಥೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದೆ ಎಂದು ವಿಎಚ್​ಪಿ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರದ ಬಿಡುಗಡೆಗೆ ತಡೆಯೊಡ್ಡುವುದಾಗಿ ಬೆದರಿಕೆಯನ್ನು ಹಾಕಿದೆ.

ಇನ್ನು ಚಿತ್ರದಲ್ಲಿ ಆಯುಷ್ ಶರ್ಮಾ ಎದುರಿಗೆ ನಾಯಕಿಯಾಗಿ ವರೀನಾ ಹುಸೇನ್ ಕಾಣಿಸಿಕೊಂಡಿದ್ದು, ಈ ಸಿನಿಮಾದ ಮೂಲಕ ಬಾಲಿವುಡ್‍ಗೆ ಮತ್ತೊಂದು ಯುವ ಜೋಡಿಯ ಆಗಮನವಾಗುತ್ತಿದೆ. ಚಿತ್ರಕ್ಕೆ ಅಭಿರಾಜ್ ಮಿನವಾಲ ಆ್ಯಕ್ಷನ್ ಕಟ್ ಹೇಳಿದ್ದು, ಸಲ್ಮಾನ್‍ ಖಾನ್ ಸಹೋದರರಾದ ಅರ್ಬಾಜ್ ಮತ್ತು ಸೊಹೈಲ್ ಖಾನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಅಕ್ಟೋಬರ್ 5ರಂದು ತೆರೆಗೆ ಬರಲು ಸಜ್ಜಾಗಿದೆ.


Trending videos

Back to Top