ಮುಂಬಯಿ ಶೇರು: ಆರಂಭಿಕ ಕುಸಿತದ ಬಳಿಕ ಅಲ್ಪ ಚೇತರಿಕೆ
Team Udayavani, Oct 8, 2018, 10:59 AM IST
ಮುಂಬಯಿ : ವಿದೇಶಿ ಬಂಡವಾಳದ ನಿರಂತರ ಹೊರ ಹರಿವು, ಏಶ್ಯನ್ ಶೇರು ಮಾರುಕಟ್ಟೆಯಲ್ಲಿನ ನಿಸ್ತೇಜ ವಾತಾವಾರಣ ಮತ್ತು ಡಾಲರ್ ಎದುರು ಮುಂದುವದಿರುವ ರೂಪಾಯಿ ಕುಸಿತ ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಮಾರುಕಟ್ಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 150ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು; ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕವೂ ಕುಸಿದು 10,300 ಕ್ಕಿಂತ ಕೆಳಮಟ್ಟಕ್ಕೆ ಜಾರಿತು.
ನಿರಂತರ ನಾಲ್ಕನೇ ದಿನದ ಕುಸಿತವನ್ನು ತನ್ನ ಆರಂಭಿಕ ವಹಿವಾಟಿನಲ್ಲಿ ಕಂಡ ಹೊರತಾಗಿಯೂ ನಿಧಾನ ಚೇತರಿಕೆಯನ್ನು ಕಂಡ ಸೆನ್ಸೆಕ್ಸ್ 11 ಗಂಟೆಯ ಸುಮಾರಿಗೆ 35.12 ಅಂಕಗಳ ಮುನ್ನಡೆ ಪಡೆದುಕೊಂಡು 34,412.11 ಅಂಕಗಳ ಮಟ್ಟದಲ್ಲೂ, ನಿಫ್ಟಿ 11 ಅಂಕಗಳ ಮುನ್ನಡೆಯೊಂದಿಗೆ 10,327.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 14 ಪೈಸೆಯ ಕುಸಿತವನ್ನು ಕಂಡು 73.90 ರೂ. ಮಟ್ಟಕ್ಕೆ ಇಳಿಯಿತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ರಿಲಯನ್ಸ್, ಬಜಾಜ್ ಫಿನಾನ್ಸ್, ಮಾರುತಿ ಸುಜುಕಿ, ಎಚ್ ಪಿ ಸಿ ಎಲ್, ಬಿ ಪಿ ಸಿ ಎಲ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್