CONNECT WITH US  

ಪೆಟ್ರೋಲ್‌- ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಬಾಳೆಹೊನ್ನೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ಕುಸಿತಗೊಂಡಿದ್ದರೂ ದೇಶದಲ್ಲಿ ಪೆಟ್ರೋಲ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿರುವುದು ಖಂಡನೀಯ ಎಂದು ಜಿ.ಪಂ ಮಾಜಿ ಸದಸ್ಯೆ ಸವಿತಾ ರಮೇಶ್‌ ಆಕ್ರೋಶ ವ್ಯಕ್ತಪಡಿಸಿದರು. 

ಖಾಂಡ್ಯ ಹೋಬಳಿ ಬ್ಲಾಕ್‌ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಪೆಟ್ರೋಲ್‌
ಹಾಗೂ ಡಿಸೇಲ್‌ ಬೆಲೆ ಏರಿಕೆಯಿಂದ ದಿನ ನಿತ್ಯ ಬಳಸುವ ವಸ್ತಉಗಳ ಬೆಲೆಗಳು ಕೈಗೆಟುಕದಂತಾಗಿವೆ. ಜಿಲ್ಲೆಯ ಸಂಸದರು ಗೆದ್ದಮೇಲೆ ಗ್ರಾಮಾಂತರ ಪ್ರದೇಶಕ್ಕೆ ಭೇಟಿ ಮಾಡಿ ನಾಗರಿಕರ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ ಎಂದು ದೂರಿದರು. 

ಎನ್‌.ಆರ್‌.ಪುರ ತಾಲೂಕು ಕಸಬಾ ಹೋಬಳಿ ಕಾಂಗ್ರೆಸ್‌ ಅಧ್ಯಕ್ಷ ಸೇವಿಯಾರ್‌ ಮಾತನಾಡಿ, ಪ್ರಧಾನ ಮಂತ್ರಿ ಮೋದಿಯವರು ವಿದೇಶಿ ಪ್ರವಾಸ ಮಾಡಿ ಅಂತಾರಾಷ್ಟ್ರೀಯ ಸಮಸ್ಯೆಯ ಬಗ್ಗೆ ಮಾತನಾಡಿ ಗಿನ್ನಿಸ್‌ ದಾಖಲೆ ಮಾಡಲು
ಹೊರಟಿದ್ದಾರೆ. ಆದರೆ ದೇಶದಲ್ಲಿನ ಆಂತರಿಕ ಸಮಸ್ಯೆಯ ಹಾಗೂ ದೇಶದ ಗಡಿ ಸಮಸ್ಯೆ ಮತ್ತು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ನ.ರಾ.ಪುರ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ಅಂಶುಮಂತ್‌ ಮಾತನಾಡಿದರು. ಖಾಂಡ್ಯ ಹೋಬಳಿ ಅಧ್ಯಕ್ಷ ಬಿ.ಎನ್‌. ಸೋಮೇಶ್‌, ಜಿಪಂ ಮಾಜಿ ಸದಸ್ಯರಾದ ಸುಬ್ರಹ್ಮಣ್ಯ, ಎಸ್‌. ಪೇಟೆ ಸತೀಶ್‌, ಗುರುಮೂರ್ತಿ ಮಸಿಗದ್ದೆ ಸತೀಶ್‌, ಜಯಶೀಲ್‌ ಇತರರು ಇದ್ದರು. 


Trending videos

Back to Top