CONNECT WITH US  

ಶರಣರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ

ಧಾರವಾಡ: ಕವಿವಿಯ ಶ್ರೀಬಸವೇಶ್ವರ ಪೀಠದಲ್ಲಿ ಬಸವೇಶ್ವರ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ| ಎಸ್‌.ಜಿ. ಸಿದ್ದರಾಮಯ್ಯ ಮಾತನಾಡಿದರು.

ಧಾರವಾಡ: ಬಸವಾದಿ ಶರಣರ ಚಿಂತನೆ, ಜೀವನ ಕ್ರಮ ಸರ್ವಕಾಲಕ್ಕೂ ಪ್ರಸ್ತುತ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್‌.ಜಿ. ಸಿದ್ದರಾಮಯ್ಯ ಹೇಳಿದರು.

ಕವಿವಿಯ ಶ್ರೀಬಸವೇಶ್ವರ ಪೀಠದಲ್ಲಿ ಬಸವ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾದಾರ್ಶನಿಕ, ಮಾನವತಾವಾದಿ, ಸಮಾಜ ಚಿಂತಕ, ನಡೆ-ನುಡಿಗಳೆರಡರಲ್ಲಿ ಏಕತೆಯನ್ನು ಸಾಧಿ ಸಿದ ಬಸವೇಶ್ವರರ ಜೀವನ ಆದರ್ಶಪ್ರಾಯವಾಗಿದೆ. ಅವರ ಚಿಂತನೆಗಳನ್ನು ಇಡೀ ಮನಕುಲವೇ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಕವಿವಿ ಕುಲಸಚಿವ ಪ್ರೊ| ಮಲ್ಲಿಕಾರ್ಜುನ ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಕವಿವಿ ಪ್ರಭಾರ ಕುಲಪತಿ ಪ್ರೊ| ನಾಗಪ್ಪ ಶಹಾಪುರ ಮಾತನಾಡಿದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ| ಎಸ್‌.ಆರ್‌. ಗುಂಜಾಳ, ಪ್ರೊ| ಆರ್‌.ಎಲ್‌. ಹೈದರಾಬಾದ, ಶಿವಣ್ಣ ಬೆಲ್ಲದ ಇನ್ನಿತರರಿದ್ದರು. ಬಸವೇಶ್ವರ ಪೀಠದ ಸಂಯೋಜಕ ಡಾ| ಸಿ.ಎಂ. ಕುಂದಗೋಳ ಪರಿಚಯಿಸಿದರು. ಸಂತೋಷ ಹಿರೇಮಠ ನಿರೂಪಿಸಿದರು. ದನವಂತ ಹಾಜವಗೋಳ ವಂದಿಸಿದರು.

ಸಾಹಿತ್ಯ ಭವನದಲ್ಲಿ ಬಸವ ಜಯಂತಿ: ಇಲ್ಲಿಯ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಬಸವ ಜಯಂತಿ ಆಚರಿಸಲಾಯಿತು. ಸಾಹಿತಿ ಪ್ರೊ| ಕೆ.ಎಸ್‌. ಕೌಜಲಗಿ, ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ ಹಾಗೂ ಡಾ| ಜಿನದತ್ತ ಹಡಗಲಿ ಮಾತನಾಡಿದರು, ಶಂಕರ ಕುಂಬಿ, ಎಫ್‌.ಬಿ. ಕಣವಿ, ಎಸ್‌.ಎನ್‌, ಗಡಾದ, ಚಂದ್ರಶೇಖರ ಕುಂಬಾರ, ಆರತಿ ದೇವಶಿಖಾಮಣಿ, ಎಚ್‌. ಕೆ. ಪಾಟೀಲ, ಪೂಜಾ ವಾಲೀಕಾರ ಇದ್ದರು. ಶಿವಾನಂದ ಟವಳಿ ನಿರೂಪಿಸಿದರು. ಚಂದ್ರಶೇಖರ ಕುಂಬಾರ ವಂದಿಸಿದರು.


Trending videos

Back to Top