ಖಾಸಗಿ ಪರಿಣತರ ನೇಮಕ: ಪ್ರಕ್ರಿಯೆ ಪಾರದರ್ಶಕವಾಗಿರಲಿ

Team Udayavani, Jun 15, 2018, 6:00 AM IST

bb-47.jpg

ಸರಕಾರಿ ಹುದ್ದೆಗಳಿಗೆ ಖಾಸಗಿ ಕ್ಷೇತ್ರದ ಪರಿಣತರನ್ನು ನೇಮಿಸಿಕೊಳ್ಳುವ ಕೇಂದ್ರ ಸರಕಾರದ ನಿರ್ಧಾರ ಕ್ರಾಂತಿಕಾರಿ ಮಾತ್ರವಲ್ಲದೆ ಸಮಯೋಚಿತವೂ ಆಗಿದೆ. ಲ್ಯಾಟರಲ್‌ ಸ್ಕೀಂ ಎನ್ನಲಾಗಿರುವ ಈ ಕಾರ್ಯಕ್ರಮದಡಿ ಸರಕಾರ ಜಂಟಿ ಕಾರ್ಯದರ್ಶಿ ದರ್ಜೆಯ ಹತ್ತು ಹುದ್ದೆಗಳಿಗೆ ನೇಮಕಾತಿ ಮಾಡಲಿದೆ. ನಾಗರಿಕ ವಿಮಾನಯಾನ, ವಾಣಿಜ್ಯ, ಆರ್ಥಿಕ ವ್ಯವಹಾರ ಸೇರಿದಂತೆ ಹತ್ತು ಕ್ಷೇತ್ರಗಳ ಪೈಕಿ ಯಾವುದಾದರೊಂದರಲ್ಲಿ 15 ವರ್ಷದ ಪರಿಣತಿ ಹೊಂದಿರುವ 40 ವರ್ಷ ಮೇಲ್ಪಟ್ಟವರು ಈ ಹುದ್ದೆಗಳಿಗೆ ಅರ್ಹರಾಗುತ್ತಾರೆ. ಅಭಿವೃದ್ಧಿಯಲ್ಲಿ ಹೊಸ ಶಕೆಯತ್ತ ಮುಖಮಾಡಿರುವ ಈ ಸ್ಥಿತ್ಯಂತರದ ಸಮಯದಲ್ಲಿ ದೇಶದಲ್ಲಿರುವ ಅತ್ಯುತ್ತಮ ಪ್ರತಿಭೆಗಳನ್ನು ಸರಕಾರಿ ಯಂತ್ರದ ಭಾಗವಾಗಿ ಮಾಡಿಕೊಳ್ಳುವುದು ಸಮಯೋಚಿತ ನಿರ್ಧಾರ. 

ಕಂದಾಯ, ಹಣಕಾಸು, ವಾಣಿಜ್ಯ, ಕೃಷಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಬಂದರು, ಪರಿಸರ, ಇಂಧನ, ನಾಗರಿಕ ವಿಮಾನಯಾನ ಹೀಗೆ ಸಾಕಷ್ಟು ಮಹತ್ವ ಇರುವ ಇಲಾಖೆಗಳನ್ನೇ ಸರಕಾರ ಈ ಹೊಸ ಪ್ರಯೋಗಕ್ಕೆ ಆರಿಸಿಕೊಂಡಿರುವುದು ಕೂಡ ಗಮನಾರ್ಹವಾದ ಅಂಶ. ನಾಗರಿಕ ವಿಮಾನಯಾನದಂಥ ಇಲಾಖೆಗಳಿಗೆ ಈಗ ಹೊಸ ಚೈತನ್ಯ ತುಂಬುವುದು ಅನಿವಾರ್ಯ. ಒಂದೆಡೆ ಖಾಸಗಿ ವಿಮಾನಯಾನ ಕಂಪೆನಿಗಳು ಭರ್ಜರಿ ಲಾಭ ಮಾಡಿಕೊಳ್ಳುತ್ತಿದ್ದರೆ ಇನ್ನೊಂದೆಡೆ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ನಷ್ಟದಲ್ಲಿ ನಡೆಯುತ್ತಿದೆ. ಖಾಸಗಿಯವರಿಗೆ ಸಾಧ್ಯವಾದ ಈ ಸಾಧನೆ ಸರಕಾರಕ್ಕೆ ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಈ ನೇಮಕಾತಿಯಿಂದ ಉತ್ತರ ಸಿಗಲೂಬಹುದು. ಹಾಗೆಂದು ಇದು ಮೋದಿ ಸರಕಾರದ ಪರಿಕಲ್ಪನೆಯಂತೂ ಅಲ್ಲ. ಈ ಮೊದಲೇ ಹೀಗೊಂದು ಪ್ರಸ್ತಾವ ಇದ್ದರೂ ವಿವಿಧ ಕಾರಣಗಳಿಗಾಗಿ ಅದನ್ನು ಅನುಷ್ಠಾನಿಸುವ ದಿಟ್ಟತನವನ್ನು ಹಿಂದಿನ ಸರಕಾರಗಳು ತೋರಿಸಿರಲಿಲ್ಲ. ಆದರೆ ವಿರಳವಾಗಿ ಇಂಥ ಪ್ರಯತ್ನಗಳಾಗಿವೆ ಹಾಗೂ ಅದರಿಂದ ತೃಪ್ತಿಕರ ಫ‌ಲಿತಾಂಶ ಸಿಕ್ಕಿದೆ. ಮೊಂಟೆಕ್‌ ಸಿಂಗ್‌ ಅಹ್ಲುವಾಲಿಯ, ವಿಜಯ್‌ ಕೇಳ್ಕರ್‌, ಅರವಿಂದ ಸುಬ್ರಹ್ಮಣಿಯನ್‌, ನಂದನ್‌ ನಿಲೇಕಣಿಯಂಥ ಉದಾಹರಣೆಗಳು ನಮ್ಮ ಮಂದಿವೆ. 

ಈ ನಿರ್ಧಾರದಿಂದ ಸರಕಾರದ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಬದಲಾವಣೆ  ನಿರೀಕ್ಷಿಸಬಹುದು. ದೇಶದ ಕಾರ್ಯಾಂಗ ಬ್ರಿಟಿಷರ ಪಳೆಯುಳಿಕೆಯಂತೆಯೇ ಕಾರ್ಯ ನಿರ್ವಹಿಸುತ್ತಿದೆ ಎಂಬ ಟೀಕೆಗಳಿವೆ. ಉದಾರೀಕರಣದ ವೇಗಕ್ಕೆ ಹೊಂದಿಕೊಳ್ಳಲು ಕಾರ್ಯಾಂಗದಿಂದ ಸಾಧ್ಯವಾಗಿಲ್ಲ. ಸರಕಾರವೇನೋ ಉತ್ತಮ ಯೋಜನೆಗಳನ್ನು ರೂಪಿಸುತ್ತದೆ. ಅವುಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಾಂಗ ನಿರೀಕ್ಷಿತ ಮಟ್ಟದಲ್ಲಿ ಸಫ‌ಲವಾಗದಿರುವುದರಿಂದ ಅಭಿವೃದ್ಧಿಯ ಅನುಭವಗಳು  ಜನ ಸಾಮಾನ್ಯರಿಗೆ ಆಗುತ್ತಿಲ್ಲ. ಈಗಲೂ ದೇಶ ನಡೆಯುತ್ತಿರುವುದು ಐಎಎಸ್‌ ಅಧಿಕಾರಿಗಳಿಂದ. ಅವರು ಅತಿ ಕಠಿನ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬಂದಿರುತ್ತಾರಾದರೂ ಸರಕಾರಿ ಯಂತ್ರದ ಭಾಗವಾದ ಬಳಿಕ ಹೆಚ್ಚಿನವರು ಜಡವಾಗುತ್ತಾ ಹೋಗುತ್ತಾರೆ. ಸರಕಾರದ ಈಗಿನ ನಿರ್ಧಾರ ಐಎಎಸ್‌ ಪರಂಪರೆಗೆ ಪರ್ಯಾಯ ವ್ಯವಸ್ಥೆಯಾಗುವ ಅವಕಾಶವಿದೆ.  

ಲ್ಯಾಟರಲ್‌ ಸ್ಕೀಂನಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಾತಿಯಾಗುವುದರಿಂದ ದೇಶಕ್ಕೆ ಅಂಟಿಕೊಂಡಿರುವ ಕೆಂಪುಪಟ್ಟಿಯ ಕಳಂಕ ನಿವಾರಣೆಯಾಗಲು ಸಹಕಾರಿ. ಅಂತೆಯೇ ನೇಮಕವಾದ ವ್ಯಕ್ತಿಗೆ ತನ್ನ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆಯೂ ಇದೆ. ಇಲ್ಲದಿದ್ದರೆ ಆ ಸ್ಥಾನಕ್ಕೆ ಬರಲು ಇನ್ನೋರ್ವ ವ್ಯಕ್ತಿ ತಯಾರಾಗಿರುತ್ತಾನೆ. ಇದು ಒಂದು ರೀತಿಯಲ್ಲಿ ಸರಕಾರಿ ಇಲಾಖೆಗಳಿಗೆ ಕಾರ್ಪೊರೇಟ್‌ ಸಂಸ್ಕೃತಿಯನ್ನು ತಂದಂತೆ. ಕಾರ್ಪೋರೇಟ್‌ ಸಂಸ್ಕೃತಿಯಲ್ಲಿ ಕಾರ್ಯಕ್ಷಮತೆಯೇ ಸಾಧನೆಯ ಮಾನದಂಡ. ಸಾಧಿಸಲಾಗದವ ಅಲ್ಲಿ ನೇಪಥ್ಯಕ್ಕೆ ಸರಿಯುತ್ತಾನೆ. ಲ್ಯಾಟರಲ್‌ ಸ್ಕೀಂ ಮೂಲಕ ಜಂಟಿ ಕಾರ್ಯದರ್ಶಿಗಳನ್ನು ನೇಮಿಸು ವುದರಿಂದ ಸಿಬಂದಿಗಳಲ್ಲೂ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಕೆಲಸ ಮಾಡದೆ ಕಾಲಹರಣ ಮಾಡುವವರೂ ಕೆಲಸ ಮಾಡಿ ತೋರಿಸ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. 

ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪೆಪ್ಸಿ, ಗೂಗಲ್‌, ಮೈಕ್ರೋಸಾಫ್ಟ್, ಮಾಸ್ಟರ್‌ ಕಾರ್ಡ್‌, ಅಡೋಬ್‌ ಸಿಸ್ಟಂನಂತಹ ಬಹುರಾಷ್ಟ್ರೀಯ ಕಂಪೆನಿಗಳ ಉನ್ನತ ಹುದ್ದೆಗಳಿಗೂ ಪ್ರತಿಭಾವಂತರನ್ನು ನೀಡಿದ ದೇಶ ನಮ್ಮದು. ಈ ಪೈಕಿ ಅನೇಕ ಮಂದಿ ಆಡಳಿತದಲ್ಲಿ ಸಹಭಾಗಿಗಳಾಗುವ ಉತ್ಸುಕತೆಯನ್ನೂ ಹೊಂದಿದ್ದಾರೆ. ಇಲಾಖೆಗಳಲ್ಲಿರುವ ಐಎಎಸ್‌ ಏಕಸ್ವಾಮ್ಯ ಹೋಗ ಬೇಕಾದರೆ ಅಲ್ಲಿ ಸ್ಪರ್ಧಾತ್ಮಕ ವಾತಾವರಣ ಮೂಡಿಸುವುದು ಅಗತ್ಯ. ಆದರೆ ಖಾಸಗಿ ಪರಿಣತರ ನೇಮಕಾತಿಯಲ್ಲಿ ಸ್ವಜನ ಪಕ್ಷಪಾತ ಮತ್ತು ರಾಜಕೀಯ ಲಾಭದ ಉದ್ದೇಶಗಳಿರಬಾರದು. ನೇಮಕಾತಿ ಪ್ರಕ್ರಿಯೆ ಪಾರದರ್ಶಕ ವಾಗಿದ್ದರೆ ಇದರಿಂದ ದೇಶಕ್ಕೆ ಲಾಭವೇ ಆಗಲಿದೆ. 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.