ನಕಾರಾತ್ಮಕ ಪ್ರತಿ ಸ್ಪಂದನೆಯೇಕೆ? : ಮಿತವ್ಯಯಕ್ಕೆ ಸಹಕರಿಸಿ


Team Udayavani, Sep 11, 2018, 6:00 AM IST

34.jpg

ರೈತರ ಸಾಲಮನ್ನಾ ಸೇರಿದಂತೆ ಸಮ್ಮಿಶ್ರ ಸರಕಾರದ ಎರಡೂ ಪಕ್ಷಗಳು ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಬೇಕಾದರೆ ಅಪಾರ ಪ್ರಮಾಣದ ಸಂಪನ್ಮೂಲ ಅಗತ್ಯವಿರುವುದರಿಂದ ಸರಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರಕಾರಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆರ್ಥಿಕ ಮಿತವ್ಯಯ ಕ್ರಮಗಳಿಗೆ ಕರೆ ನೀಡಿದ್ದರು. ಆದರೆ ಅವರ ಸಹೋದ್ಯೋಗಿಗಳಿಂದಲೇ ಇದಕ್ಕೆ ನಕರಾತ್ಮಕವಾದ ಪ್ರತಿಸ್ಪಂದನ ವ್ಯಕ್ತವಾಗುತ್ತಿರುವುದು ಬೇಸರದ ಸಂಗತಿ. 

ಸಾಲಮನ್ನಾಕ್ಕಾಗಿಯೇ ಸುಮಾರು 50,000 ಕೋ. ರೂ. ಅಗತ್ಯವಿದೆ. ಇದರ ಜತೆಗೆ ಇತರ ಖರ್ಚು ವೆಚ್ಚಗಳೂ ಇದ್ದು ಇವುಗಳನ್ನೆಲ್ಲ ಪೂರೈಸುವಷ್ಟು ಹಣ ಖಜಾನೆಯಲ್ಲಿ ಇಲ್ಲ. ಅಲ್ಲದೆ ಈಗಾಗಲೇ ರಾಜ್ಯದ ಮೇಲೆ ಭಾರೀ ಪ್ರಮಾಣದ ಸಾಲದ ಹೊರೆ ಇರುವುದರಿಂದ ಹೊಸ ಸಾಲ ಪಡೆಯುವುದು ಕೂಡಾ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಮಿತವ್ಯಯ ಸಾಧಿಸಿ ಸರಕಾರಿ ಖಜಾನೆ ಮೇಲಿನ ಹೊರೆಯನ್ನು ತುಸುವಾದರೂ ತಗ್ಗಿಸುವುದು ಅಪೇಕ್ಷಣೀಯ. ಆದರೆ ಈಗ ಮುಖ್ಯಮಂತ್ರಿ ಮತ್ತು ವಿಧಾನ ಸಭಾಧ್ಯಕ್ಷರನ್ನು ಹೊರತುಪಡಿಸಿದರೆ ಬೇರೆ ಯಾರೂ ಮಿತವ್ಯಯ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿಲ್ಲ.

ಮಿತವ್ಯಯ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅನುಸರಿಸಿದ ನಡೆ ಉಳಿದವರಿಗೆ ಮೇಲ್ಪಂಕ್ತಿಯಾಗುವಂತಿದೆ. ಅವರು ಮುಖ್ಯಮಂತ್ರಿಯ ವಾಸಕ್ಕೆ ಇರುವ ಸರಕಾರಿ ಬಂಗಲೆಗೆ ಹೋಗದೆ ಸ್ವಂತ ಮನೆಯಲ್ಲೇ ವಾಸವಾಗಿದ್ದಾರೆ ಮಾತ್ರವಲ್ಲದೆ ಓಡಾಟಕ್ಕೂ 
ಸ್ವಂತದ ಕಾರನ್ನೇ ಬಳಸುತ್ತಿದ್ದಾರೆ. ಇದು ಸರಕಾರಿ ಕಾರಿಗಿಂತ ದುಬಾರಿ ಬೆಲೆಯದ್ದು ಮತ್ತು ನಿರ್ವಹಣೆಯೂ ಅಧಿಕ ಎಂಬ ಟೀಕೆಗಳಿದ್ದರೂ ಉಳಿದ ಮುಖ್ಯಮಂತ್ರಿಗಳಂತೆ ಅಧಿಕಾರ ವಹಿಸಿಕೊಂಡ ಕೂಡಲೇ ಹೊಸ ಕಾರು ಖರೀದಿಸಲು ಮುಂದಾಗದೆ ಉಳಿದವರಿಗೆ ಮಾದರಿಯಾಗಿದ್ದಾರೆ. ಅಂತೆಯೇ ದಿಲ್ಲಿ ಮತ್ತಿತರೆಡೆಗಿನ ಪ್ರಯಾಣಕ್ಕೂ ಏರ್‌ ಇಂಡಿಯಾ ವಿಮಾನಗಳನ್ನೇ ಬಳಸುತ್ತಿದ್ದಾರೆ. ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಖಾಸಗಿ ವಿಮಾನ ಏರುತ್ತಿದ್ದಾರೆ. ಜತೆಗೆ ವಿಧಾನಸೌಧದಲ್ಲಿದ್ದ ಕೆಲವು ಹೊರಗುತ್ತಿಗೆ ಸಿಬಂದಿಗಳನ್ನೂ ಕಡಿತಗೊಳಿಸಿದ್ದಾರೆ. 

ಹೊಸ ಸರಕಾರ ಬಂದ ಕೂಡಲೇ ಕಚೇರಿ ಮತ್ತು ಸರಕಾರಿ ಬಂಗಲೆಗಳ ನವೀಕರಣ, ಹೊಸ ಪೀಠೊಪಕರಣಗಳ ಖರೀದಿ ಎಂದೆಲ್ಲ ಸರಕಾರಕ್ಕೆ ನೂರಾರು ಕೋಟಿ ಖರ್ಚು ಬರುವುದು ಸಾಮಾನ್ಯ. ಆದರೆ ಈ ಸಲ ಕುಮಾರಸ್ವಾಮಿಯವರ ಬಿಗು ನಿಲುವಿನಿಂದಾಗಿ ಇವುಗಳಿಗೆಲ್ಲ ಕಡಿವಾಣ ಬಿದ್ದಿದೆ. ಅಂತೆಯೇ ಎಲ್ಲ ಇಲಾಖೆಗಳಿಗೂ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ಸೂಚನೆ ಹೋಗಿದೆ. ಹೊಸ ವಾಹನ ಖರೀದಿಗೂ ಮುಖ್ಯಮಂತ್ರಿಗಳು ಬ್ರೇಕ್‌ ಹಾಕಿದ್ದಾರೆ. ಇದು ಸರಕಾರದೊಳಗಿರುವ ಕೆಲವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸರಕಾರ ಅಸ್ತಿತ್ವಕ್ಕೆ ಬಂದು 100 ದಿನಗಳಾಗಿದ್ದರೂ ಇನ್ನೂ ಮಿತವ್ಯಯದ ಕ್ರಮಗಳು ಜಾರಿಗೊಳ್ಳುತ್ತಿರುವ ಲಕ್ಷಣಗಳು ಕಾಣಿಸುತ್ತಿಲ್ಲ. 

ಈ ನಡುವೆ ಶಿಕ್ಷಣ ಇಲಾಖೆ ಮುಖ್ಯಮಂತ್ರಿಗಳ ಸೂಚನೆಯನ್ನು ಲೆಕ್ಕಿಸದೆ 116 ಹೊಸ ಕಾರುಗಳನ್ನು ಖರೀದಿಸಲು ಮುಂದಾಗಿರುವುದು ತಪ್ಪು ಸಂದೇಶವನ್ನು ರವಾನಿಸುವ ನಡೆ. ಈ ಪೈಕಿ 28 ಕಾರುಗಳ ಖರೀದಿಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 

ಹೊಸ ಕಾರು ಖರೀದಿಗೆ ಕನಿಷ್ಠ 10 ಕೋ. ರೂ. ಖರ್ಚಾಗಲಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ನಾಜೂಕಾಗಿರುವ ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಈ ವೆಚ್ಚವನ್ನು ತಡೆದು ಉಳಿದ ಇಲಾಖೆಗಳಿಗೆ ಮಾದರಿಯಾಗಬಹುದಿತ್ತು. ಒಂದೆಡೆ ಶಿಕ್ಷಕರು ಮತ್ತು ಉಪನ್ಯಾಸಕರು ಸರಿಯಾದ ಸಮಯಕ್ಕೆ ವೇತನ ಸಿಗದೆ ಸಂಕಟ ಅನುಭವಿಸುತ್ತಿರುವಾಗ ಶಿಕ್ಷಣ ಇಲಾಖೆ ಹೊಸ ಕಾರುಗಳನ್ನು ಖರೀದಿಸಲು ಹೊರಟಿರುವುದು ವಿಪರ್ಯಾಸದ ನಡೆಯಂತೆ ಕಾಣಿಸುತ್ತದೆ. 

ಸಾಲಮನ್ನಾದ ಹೊರೆ ಒಂದೆಡೆಯಾದರೆ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಾಶನಷ್ಟಗಳಿಗೆ ಹಾಗೂ ಕೆಲವು ಜಿಲ್ಲೆಗಳಲ್ಲಿ ಅನಾವೃಷ್ಟಿಯಿಂದಾಗಿ ಕಾಣಿಸಿಕೊಂಡಿರುವ ಬರಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಹೊಣೆಗಾರಿಕೆಯೂ ಇದೆ. ಈ ಎಲ್ಲ ಕಾರ್ಯಗಳಿಗೆ ಭಾರೀ ಪ್ರಮಾಣದ ಹಣದ ಅಗತ್ಯವಿರುವುದರಿಂದ ಸರಕಾರಿ ಖರ್ಚು ವೆಚ್ಚಗಳಲ್ಲಿ ತುಸು ಬಿಗುಹಿಡಿತ ಸಾಧಿಸುವುದು ಅನಿವಾರ್ಯವೂ ಹೌದು. 

ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಸಚಿವರು ಬಂಗಲೆ ನವೀಕರಣ, ಹೊಸ ವಾಹನ ಖರೀದಿ ಮತ್ತಿತರ ಪ್ರಸ್ತಾವನೆಗಳನ್ನು ಸರಕಾರಕ್ಕೆ ರವಾನಿಸಿ ಒತ್ತಡ ಹೇರುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಕೈಗೊಂಡಿರುವ ಮಿತವ್ಯಯ ಕ್ರಮಗಳಲ್ಲಿ ಕೈಜೋಡಿಸುವ ಮೂಲಕ ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಳಿಗೆ ತರುವ ಜವಾಬ್ದಾರಿ ಸರಕಾರದಲ್ಲಿರುವ ಎಲ್ಲರ ಮೇಲೂ ಇದೆ. ಹಣಕಾಸು ಖಾತೆ ಮುಖ್ಯಮಂತ್ರಿ ಕೈಯಲ್ಲಿ ಇದೆ ಎಂದ ಮಾತ್ರಕ್ಕೆ ಆರ್ಥಿಕ ಸ್ಥಿತಿಯನ್ನು ಸರಿತೂಗಿಸಿಕೊಂಡು ಹೋಗುವುದು ಅವರೊಬ್ಬರದ್ದೇ ಜವಾಬ್ದಾರಿ ಎಂಬ ಮನಸ್ಥಿತಿಯಿಂದ ಹೊರಬರಬೇಕು.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.