ಧರ್ಮ-ಆಚಾರ-ವಿಚಾರದಿಂದ ಜೀವನ ವಿಕಾಸ: ಶ್ರೀ

Team Udayavani, Mar 21, 2019, 11:08 AM IST

21-march-18.jpg

ಗದಗ: ಶಿವನ ಆದೇಶದಂತೆ ಲಿಂಗಸಂಭವರಾದ ಜ| ರೇಣುಕಾಚಾರ್ಯರ ಧರ್ಮಸ್ಥಾಪನೆ ಕಾರ್ಯ ಅನನ್ಯವಾದದ್ದು. ಬಿತ್ತಿದ ಧರ್ಮದ ಆಚಾರ ವಿಚಾರದಿಂದ ಮನುಷ್ಯನ ಜೀವನ ವಿಕಾಸಗೊಳ್ಳುವುದು ಎಂದು ಉಜ್ಜಯಿನಿ
ಪೀಠದ ಜ| ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮುಳಗುಂದ ನಾಕಾದಲ್ಲಿರುವ ರೇಣುಕ ಮಂದಿರದಲ್ಲಿ ಜ| ಪಂಚಾಚಾರ್ಯ ಸೇವಾ ಸಂಘದಿಂದ ಏರ್ಪಡಿಸಿದ್ದ ರೇಣುಕಾಚಾರ್ಯ
ಜಯಂತಿ ಹಾಗೂ ರಥೋತ್ಸವ ಮತ್ತು ಶ್ರೀ ರೇಣುಕ ದರ್ಶನ ಪ್ರವಚನ ಮಂಗಲೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧರ್ಮೋದ್ಧಾರಕ್ಕಾಗಿ ಜ| ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಗಟ್ಟಿಗೊಳಿಸಿದರು. ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಬಿತ್ತಿದವರು ಎಂದರು.

ವೀರಶೈವ ಧರ್ಮ ತಾಯಿ ಗರ್ಭದಲ್ಲಿದ್ದಾಗಿ ನಿಂದ ಹಿಡಿದು ಜೀವನದ ಕೊನೆವರೆಗೂ ಧಾರ್ಮಿಕ ಸಂಸ್ಕಾರಗಳನ್ನು ಕೊಡುತ್ತಾ ಬಂದಿರುವ ಧರ್ಮವಾಗಿದೆ. ಜೀವನದ ವಿಕಾಸ ಮತ್ತು ಭದ್ರವಾದ ಅಡಿಪಾಯಕ್ಕೂ ದಾರಿಯಾಗಿದೆ. ಧರ್ಮದ ಬಗ್ಗೆ ಹೇಳುವುದಕ್ಕಿಂತ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವಿಶ್ವಬಂಧುತ್ವವನ್ನು ಸಾರಿದ ವೀರಶೈವ ಧರ್ಮ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಮಾಡಿದ ಕಾರ್ಯ ಮಹತ್ವದ್ದಾಗಿದೆ ಎಂದರು.

ಕೆಲವು ವಿಚ್ಛಿದ್ರಿಕಾರಿ ಶಕ್ತಿಗಳು ವೀರಶೈವ ಧರ್ಮದ ಮೂಲ ಸಂಸ್ಕೃತಿ, ಪರಂಪರೆ, ಆಚಾರ- ವಿಚಾರಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ಗದಗ ನಗರದಲ್ಲಿ ತಕ್ಕ ಉತ್ತರವನ್ನು ಕೊಟ್ಟಿದ್ದು, ಪೀಠ ಎಂದೂ ಮರೆಯುವುದಿಲ್ಲ. ಧರ್ಮ ಸಂಸ್ಕೃತಿಯನ್ನು ಎತ್ತಿಹಿಡಿದು, ಮಾನವ ಧರ್ಮದ ಮೌಲ್ಯಗಳನ್ನು ಸಮರ್ಥಿಸುವ ಕೆಲಸವು ಪಂಚಪೀಠಗಳ ತವರುಮನೆ. ಅದರಂತೆ ಗದಗ ನಗರದ ಭಕ್ತರು ಸರಿಯಾದ ವ್ಯವಸ್ಥೆಯಲ್ಲಿ ಉತ್ತರ ನೀಡುವುದರಿಂದ ಸಮಾಜ ಹೆಮ್ಮಪಡುವಂತಿದೆ ಎಂದರು.

ಹರ್ಲಾಪುರದ ಕೊಟ್ಟೂರೇಶ್ವರ ಮಠದ ಶ್ರೀಗಳು ಉಪದೇಶಾಮೃತಗೈದು, ಕೇವಲ ಹುಟ್ಟಿನಿಂದ ನಾವು ವೀರಶೈವರಾಗುವುದಿಲ್ಲ. ಇಷ್ಟಲಿಂಗ ಧರಿಸಿ ಪೂಜಿಸಿ, ವೀರಶೈವ ತತ್ವ, ಸಿದ್ಧಾಂತಗಳನ್ನು ಪಾಲಿಸುವವರು ಮಾತ್ರ ನಿಜವಾದ ವೀರಶೈವರು. ಮನುಷ್ಯ ಅರಿತು ಬಾಳಿದರೆ ಆತನ ಬದುಕು ಬಂಗಾರವಾಗುತ್ತದೆ ಎಂದರು.

ಪಂಚಾಕ್ಷರ ಶಿವಾಚಾರ್ಯ ಅಟ್ನೂರ ಶ್ರೀಗಳು ಮಾತನಾಡಿ, ಗುರುವಿನಿಂದ ಇಷ್ಟಲಿಂಗ ಪಡೆದುಕೊಂಡು ಗುರು ಬೋಧಿಸಿದ ಶಿವಪಂಚಾಕ್ಷರಿ ಮಹಾಮಂತ್ರ ಜಪಿಸಿದರೆ ವೀರಶೈವರಾದವರಿಗೆ ಮೋಕ್ಷ ಹೊಂದಲು ಸಾಧ್ಯವಾಗುವುದು. ಅವರ ಧರ್ಮ ಅವರವರಿಗೆ ಶ್ರೇಷ್ಠ. ಸರ್ವರೂ ಸಮನ್ವಯತೆಯಿಂದ ಬಾಳಬೇಕು ಎಂದರು.

ನರೇಗಲ್ಲನ ಮಲ್ಲಿಕಾರ್ಜುನ ಶಿವಾಚಾರ್ಯ ಹಿರೇಮಠ ಅವರು ಶ್ರೀ ರೇಣುಕ ದರ್ಶನ ಪ್ರವಚನವನ್ನು ಮಂಗಲ ಮಾಡಿದರು. ರೇಣುಕ ಮಂದಿರದ ಉತ್ತರಾಧಿಕಾರಿ ಚಂದ್ರಶೇಖರ ದೇವರು ನೇತೃತ್ವ ವಹಿಸಿದ್ದರು. ಮಲ್ಲಿಕಾರ್ಜುನ ಹಿರೇಮಠ ಗವಾಯಿಗಳು ಭಕ್ತಿ ಸಂಗೀತ ಸುಧೆ ಹರಿಸಿದರು. ಪ್ರೊ| ಗುರುಪಾದಯ್ಯ ಸಾಲಿಮಠ ರಚಿಸಿದ ಬಾಳಿಗೆ ಬೆಳಕು ಭಾಗ- 8 ಕೃತಿಯನ್ನು ಉಜ್ಜಯಿನಿ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಸುರೇಶ ಅಬ್ಬಿಗೇರಿ ವೇದಿಕೆಯಲ್ಲಿದ್ದರು. ಪ್ರಾರಂಭದಲ್ಲಿ ಗುರುಸಿದ್ದಯ್ಯ ಹಿರೇಮಠ ವೇದಘೋಷ ಮಾಡಿದರು. ಚಂದ್ರು ಬಾಳಿಹಳ್ಳಿಮಠ ಸ್ವಾಗತಿಸಿದರು. ವಿ.ಕೆ. ಗುರುಮಠ ನಿರೂಪಿಸಿದರು.

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.