CONNECT WITH US  

ಕಲಬುರಗಿ:ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ

ಕಲಬುರಗಿ : ಇಲ್ಲಿನ ಹಡಗೀಲ್‌ ಗ್ರಾಮದಲ್ಲಿ  ನಡೆದ ಹೃದಯ ವಿದ್ರಾವಕ ಘಟನೆಯಲ್ಲಿ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ  ಶರಣಾಗಿದ್ದಾಳೆ. 

ಜಯಶ್ರಿ (45) ಎಂಬ ಮಹಿಳೆ ಮಕ್ಕಳಾದ ಪವಿತ್ರಾ(12)ಸುನಿಲ್‌(10)ಮತ್ತು ಅನಿಲ್‌(5) ರೊಂದಿಗೆ ಗ್ರಾಮದ ಹೊರವಲಯದ ಕೆರೆಗೆ ಹಾರಿ ಸಾವಿಗೆ ಶರಣಾಗಿದ್ದಾರೆ.

ಪತಿ ಬಸವರಾಜ್‌ ಕುಡಿತಕ್ಕೆ ದಾಸನಾಗಿದ್ದು ಪತ್ನಿಗೆ ನಿರಂತ ಹಿಂಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಜಯಶ್ರಿ ತವರು ಮನೆಗೆ ಹೋಗಿದ್ದು ತೀವ್ರವಾಗಿ ನೊಂದು ಜನರು ಆಡಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. 

ಫ‌ರಹತಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಯಶ್ರಿ ಶವ ಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು , ಮಕ್ಕಳ ಶವಗಳಿಗಾಗಿ ಶೋಧ ಮುಂದುವರಿದಿದೆ. 


Trending videos

Back to Top