ಕುಂದಾಪುರದಲ್‌ ಏನ್‌ ನಡೀತ್ತೋ ದೇವ್ರೇ ಬಲ್ಲ!

Team Udayavani, Oct 11, 2018, 6:00 AM IST

1010kdlm2ph.jpg

ಕುಂದಾಪುರ: “ಎಂತಾ ಮಾಡ್ತ್ರ ಅಂತ ಅರ್ಥ ಆತಿಲ್ಲೆ ಮಾರಾಯ್ರೆ ಕುಂದಾಪುರದಲ್‌ ಏನ್‌ ನಡಿತ್ತೋ ದೇವ್ರೇ ಬಲ್ಲ’ ಹೀಗೆಂದು ಶಾಸ್ತ್ರೀವೃತ್ತದ ಬಳಿಯ ಅಂಗಡಿಯವರೊಬ್ಬರು ಗ್ರಾಹಕರಿಗೆ ಹೇಳುತ್ತಿದ್ದರು. 

ಇದು ಅವರೊಬ್ಬರ ಮಾತಲ್ಲ, ಕಥೆಯಲ್ಲ, ವ್ಯಥೆಯಲ್ಲ. ಇದೇ ಮಾತನ್ನು ಬಹುತೇಕರು ಹೇಳುತ್ತಾರೆ. ಕುಂದಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳು, ಸರ್ವೀಸ್‌ ರಸ್ತೆ ಸಮಸ್ಯೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸಿದ್ದು, ಏನೂಂದೂ ಮಾಡದ ಗುತ್ತಿಗೆದಾರರ ನಡವಳಿಕೆ ಬಗ್ಗೆ ಜನ ಆಕ್ರೋಶಿತರಾಗಿದ್ದಾರೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಬಸ್ರೂರು ಮೂರು ಕೈ ಅಂಡರ್‌ಪಾಸ್‌ ಕಾಮಗಾರಿಗಾಗಿ ಮುಖ್ಯ ರಸ್ತೆ ಬ್ಲಾಕ್‌ ಮಾಡಿರುವುದು ಮತ್ತಷ್ಟು ಸಮಸ್ಯೆ ಯಾಗಿದೆ.  

ತೇಪೆಯೂ ಇಲ್ಲ
ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಹೊಂಡಗಳು ವಿಸ್ತಾರವಾಗುತ್ತಾ ಹೋಗುತ್ತಿದ್ದರೂ ಅದಕ್ಕೆ ತೇಪೆ ಹಾಕುವ ವ್ಯವಸ್ಥೆಯೂ ಆಗುತ್ತಿಲ್ಲ. ಶಾಸ್ತ್ರಿ ವೃತ್ತದಿಂದ ಸಂಗಮ್‌ ವರೆಗೆ ಒಂದಷ್ಟಾದರೂ ತೇಪೆ ನಡೆದಿದ್ದು ಬಸ್ರೂರು ಮೂರುಕೈವರೆಗೆ ಕಾಟಾಚಾರಕ್ಕೂ ನಡೆದಿಲ್ಲ. ಬಸೂÅರು ವೃತ್ತದಲ್ಲಿ ಅಂಡರ್‌ಪಾಸ್‌ ಕಾಮಗಾರಿ ಆರಂಭವಾಗಲಿದೆ ಎಂದು ಹೆದ್ದಾರಿಯಲ್ಲಿ ವಾಹನ ಸಂಚಾರ ನಿಲ್ಲಿಸಿದ್ದರೂ ಸರ್ವಿಸ್‌ ರಸ್ತೆಯಲ್ಲೇ ವಾಹನ ಸಂಚಾರದ ಒತ್ತಡ ಹೆಚ್ಚಾಗಿದೆ. ಈಗಾಗಲೇ ಸರ್ವೀಸ್‌ ರಸ್ತೆಯಲ್ಲಿ ಸಮಸ್ಯೆ ಬಿಗಡಾಯಿಸಿದೆ. ಎರಡು ಸರ್ವೀಸ್‌ ರಸ್ತೆಗಳಲ್ಲಿ ಗಾಂಧಿ ಮೈದಾನದ ಸರ್ವಿಸ್‌ ರಸ್ತೆಯಲ್ಲಿ ವಾಹನಗಳು ಹೆಚ್ಚಾಗಿವೆ. ಶರೋನ್‌ ಬದಿಯ ಸರ್ವೀಸ್‌ ರಸ್ತೆಗೆ ರಾಷ್ಟ್ರೀಯ ಹೆದ್ದಾರಿಯಿಂದ ಪ್ರವೇಶ ಹಾಗೂ ಹೊರಬರುವುದು ಸುಲಭವಲ್ಲ.

ಸಮಸ್ಯೆಗಳ ಆಗರ
ಸರ್ವಿಸ್‌ ರಸ್ತೆಗಳಲ್ಲಿ ದಾರಿದೀಪಗಳೂ ಇರದಿರುವು ದರಿಂದ  ಕತ್ತಲಲ್ಲಿ ಪಾದಚಾರಿಗಳು ಕಾಣುವುದಿಲ್ಲ. ಮಳೆ ಕತ್ತಲು ಆವರಿಸಿದರಂತೂ ಭಾರಿ ಸಮಸ್ಯೆ. ಈಗಾಗಲೇ ಒದ್ದಾಟ ಆರಂಭಗೊಂಡಿದ್ದರೂ ಸದ‌Âಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಚಾರ ಯೋಗ್ಯ ಮಾಡಲಾಗುತ್ತಿಲ್ಲ. ಉತ್ತರಿಸುವವರೂ ಇಲ್ಲ. ಹೀಗಾಗಿ ಎಲ್ಲರೂ “ಕುಂದಾಪ್ರದಲ್‌ ಏನ್‌ ನಡಿತ್ತೋ ದೇವ್ರೇ ಬಲ್ಲ’ ಎನ್ನುತ್ತಿದ್ದಾರೆ. 

ಇತ್ತ ಕಾಲೇಜು ರಸ್ತೆಯೂ ವಾಹನಗಳಿಂದ ತುಂಬಿ ರುತ್ತದೆ. ನಾನಾ ಸಾಹೇಬ್‌ ರಸ್ತೆಯಲ್ಲೂ ಜಾಗವಿಲ್ಲ. ಯಕ್ಷಗಾನ ಮೈದಾನ ಹೊಂಡಗಳಿಂದ ಕೊಚ್ಚೆಯಾಗಿದೆ. ಸ್ಥಳೀಯ ವಾಹನಗಳಲ್ಲದೇ ಹೆದ್ದಾರಿಯಲ್ಲಿ ಸಾಗುವ ಭಾರಿ ವಾಹನಗಳು, ಬಸ್ಸುಗಳು ಸರ್ವೀಸ್‌ ರಸ್ತೆ ಪ್ರವೇಶಿಸಲು ಅನುವು ಮಾಡಿಕೊಟ್ಟಿರುವುದರಿಂದ ಈ ರಸ್ತೆಗಳು ನಿಬಿಡವಾಗಿ, ರಸ್ತೆ ಬ್ಲಾಕ್‌ ಆಗುತ್ತಿದೆ. ಈ ಹಿನ್ನೆಲೆ ರಾ.ಹೆ. ಪ್ರಾಧಿಕಾರ, ಗುತ್ತಿಗೆದಾರ ನವಯುಗ ಸಂಸ್ಥೆ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಸ್ಪಷ್ಟ ಚಿತ್ರಣ ನೀಡಬೇಕಾಗಿದೆ.  

ಪಾರ್ಕಿಂಗ್‌ ಸಮಸ್ಯೆ
ಒಂದು ಕಿ.ಮೀ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆಯೂ ಇಲ್ಲದಂತಾಗಿದೆ. ಭಾರಿ ವಾಹನಗಳನ್ನು ನಿಲ್ಲಿಸುತ್ತಾರೆ. ಕೆಲವರು ಸರ್ವೀಸ್‌ ರಸ್ತೆಗೆ ತಾಗಿಕೊಂಡಿರುವ ಅಂಗಡಿ, ಹೋಟೆಲ್‌ಗ‌ಳಿಗೆ, ಕಚೇರಿಗಳಿಗೆ ಹೋಗಲು ರಸ್ತೆ ಬದಿ ಕಾರು, ಬೈಕ್‌ ಇಟ್ಟು ಹೋಗುತ್ತಿದ್ದರು. ಈಗ ಸಂಚಾರಿ ಪೋಲೀಸರು ಅವಕಾಶ ನೀಡುತ್ತಿಲ್ಲ. ಗಾಂಧಿಮೈದಾನ ಬದಿಯ ರಸ್ತೆಯಲ್ಲಿ ಮೆಸ್ಕಾಂ, ಲೋಕೋಪಯೋಗಿ, ತೆರಿಗೆ ಇಲಾಖೆ ಕಚೇರಿಗಳು, ಶಾಲೆಗಳು, ಮಹಾತ್ಮಗಾಂಧಿ ಪಾರ್ಕ್‌ ಇದೆ. ಕ್ರೀಡಾಂಗಣಕ್ಕೆ ಜನ ಬರುತ್ತಾರೆ. ನೂರಾರು ವಾಹನಗಳ ಪಾರ್ಕಿಂಗ್‌ ಮಾಡುವುದೆಲ್ಲಿ ಎಂಬ ಪ್ರಶ್ನೆಗೆ ಉತ್ತರವಿಲ್ಲ. 

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.