1,500 ಮೀ. ಎತ್ತರದಿಂದ ಧುಮುಕಿ ಭೂಸ್ಪರ್ಶ
Team Udayavani, Dec 5, 2018, 1:25 AM IST
ಕುಂದಾಪುರ: ವಿಮಾನದಲ್ಲಿ 1,500 ಮೀ. ಎತ್ತರ ಸಾಗಿದ ಆಕೆ, ಬಳಿಕ ನೆಗೆದದ್ದು ಭೂಮಿಗೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಎನ್.ಸಿ.ಸಿ. ಆರ್ಮಿ ಕೆಡೆಟ್ ಡಿ. ಧನ್ಯಾ ಶೆಟ್ಟಿ ಅವರು ಆಗ್ರಾದಲ್ಲಿ 27 ದಿನಗಳ ಕಾಲ ನಡೆದ ಪ್ಯಾರಾ ಬೇಸಿಕ್ ಕೋರ್ಸ್ನಲ್ಲಿ ಈ ಅಪೂರ್ವ ಸಾಹಸ ಮಾಡಿದ್ದಾರೆ. ಇವರು ಎನ್.ಸಿ.ಸಿ. ಗ್ರೂಪ್ ಮಂಗಳೂರಿನಿಂದ ಆಯ್ಕೆಗೊಂಡು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದಾರೆ.
ತರಬೇತಿಯಲ್ಲಿ ಸುಮಾರು 1,500 ಮೀ. ಎತ್ತರಕ್ಕೆ ವಿಮಾನ ಮೂಲಕ ಸಾಗಿ, ಅನಂತರ ಪ್ಯಾರಾಚೂಟ್ ಸಹಾಯದೊಂದಿಗೆ ಸುರಕ್ಷಿತವಾಗಿ ಭೂಸ್ಪರ್ಶ ಮಾಡುವ ನೈಪುಣ್ಯವನ್ನು ಗಳಿಸಿದ್ದಾರೆ. ಇವರನ್ನು ಕಾಲೇಜಿನ ಪ್ರಾಂಶುಪಾಲ ಡಾ| ಎನ್.ಪಿ. ನಾರಾಯಣ ಶೆಟ್ಟಿ, ಎನ್.ಸಿ.ಸಿ. ಅಧಿಕಾರಿ ಲೆ| ಅಂಜನ ಕುಮಾರ್ ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…