CONNECT WITH US  

ಇಂದು ಶತಮಾನದ ದೀರ್ಘಾವಧಿ ಚಂದ್ರಗ್ರಹಣ; ಭೂಮಿ ಸನಿಹಕ್ಕೆ ಮಂಗಳ 

ಮಂಗಳೂರು: ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣವು ಜು. 27 ರಾತ್ರಿ ಮತ್ತು 28ರಂದು ಮುಂಜಾನೆ ಸಂಭವಿಸಲಿದೆ.  ಜು. 27ರ ರಾತ್ರಿ 11.54ಕ್ಕೆ ಚಂದ್ರಗ್ರಹಣವು ಆರಂಭವಾಗಲಿದ್ದು, ರಾತ್ರಿ 1 ಗಂಟೆಯಿಂದ 2.43ರ ವರೆಗೆ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಜು. 28 ಮುಂಜಾನೆ 3.49ಕ್ಕೆ ಗ್ರಹಣ ಮುಕ್ತಿ ಆಗಲಿದ್ದು, ಸಂಪೂರ್ಣ ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು. ಈ ಸಂದರ್ಭದಲ್ಲಿ ಭೂಮಿಯ ವಾತಾವರಣದಲ್ಲಿ ಹಾದುಹೋಗುವ ಸೂರ್ಯನ ಕಿರಣಗಳ ಚದುರುವಿಕೆಯಿಂದಾಗಿ ಚಂದ್ರನು ಕಪ್ಪಾಗಿ ಕಾಣಿಸದೆ ರಕ್ತವರ್ಣದಲ್ಲಿ ಕಂಡುಬರುತ್ತಾನೆ. 

ಇದರೊಂದಿಗೆ ಕಳೆದ 15 ವರ್ಷದ ಅವಧಿಯಲ್ಲೇ ಭೂಮಿಗೆ ಮಂಗಳ ಗ್ರಹ ಹತ್ತಿರದಲ್ಲಿದ್ದು, ಜು. 27ರಂದು ಸೂರ್ಯ, ಭೂಮಿ ಮತ್ತು ಮಂಗಳ ಒಂದೇ ಸಾಲಿನಲ್ಲಿ ಬರಲಿವೆ. ಭೂಮಿ ಹಾಗೂ ಮಂಗಳ ಗ್ರಹಗಳ ನಡುವಿನ ಅಂತರ ಜು. 31ರಂದು ಕಡಿಮೆ ಇರಲಿದ್ದು, ಆ ದಿನ ಮಂಗಳ ಗ್ರಹ ಪ್ರಕಾಶಮಾನವಾಗಿರುತ್ತದೆ.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಲ್ಲಿ ರಾತ್ರಿ 11.30ರಿಂದ 3.30ರ ವರೆಗೆ ಈ ಖಗೋಳ ವಿದ್ಯಮಾನವನ್ನು ವೀಕ್ಷಿಸಲು ದೂರದರ್ಶಕ ಮತ್ತು ದುರ್ಬೀನುಗಳ ವ್ಯವಸ್ಥೆ ಮಾಡಲಾಗಿದೆ ಎಂದು ನಿರ್ದೇಶಕ ಡಾ| ಕೆ.ವಿ. ರಾವ್‌ ತಿಳಿಸಿದ್ದಾರೆ. ಉಡುಪಿ ಪರ್ಕಳದ ಸ್ವಾಗತ್‌ ಹೊಟೇಲ್‌ ಬಳಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Trending videos

Back to Top