CONNECT WITH US  

ಕಟೀಲು ಮೇಳ: 340 ಕಲಾವಿದರಿಗೆ 46 ಲಕ್ಷ ರೂ. ರಜೆಯ ಗೌರವ ಧನ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ 340 ಮಂದಿ ಕಲಾವಿದರು ಹಾಗೂ ಸಹಾಯಕರಿಗೆ ಯಕ್ಷಧರ್ಮಬೋಧಿನೀ ಟ್ರಸ್ಟ್‌ನಿಂದ ರೂ. 36,50,000 ಹಾಗೂ ಕಲಾವಿದರ ಕ್ಷೇಮನಿಧಿಯಿಂದ 9,50,000 -ಹೀಗೆ ಒಟ್ಟು 46 ಲಕ್ಷ ರೂ.ಗಳನ್ನು ಮೇಳಗಳ ಸಂಚಾಲಕರಾದ ಕಲ್ಲಾಡಿ ದೇವೀಪ್ರಸಾದ ಶೆಟ್ಟರಿಗೆ ಕಟೀಲು ದೇವಸ್ಥಾನದಲ್ಲಿ ಶ್ರೀ ದೇವರ ಎದುರು ಹಸ್ತಾಂತರಿಸಲಾಯಿತು.

ಕನಿಷ್ಠ 10 ಸಾವಿರ ರೂ.ಗಳಿಂದ ಗರಿಷ್ಠ 20 ಸಾವಿರ ರೂ.ಗಳ ವರೆಗೆ 4 ಗ್ರೇಡ್‌ಗಳಲ್ಲಿ ಕಲಾವಿದರಿಗೆ ಈ ಗೌರವಧನವನ್ನು ನೀಡಲಾಗುತ್ತದೆ. ಯಕ್ಷಧರ್ಮ ಬೋಧಿನೀ ಟ್ರಸ್ಟ್‌ ರಂಗಸ್ಥಳ, ಬಸ್ಸು, ಧ್ವನಿವರ್ಧಕಗಳಿಂದ ಪಡೆಯುವ ನಿರ್ವಹಣ ವೆಚ್ಚದಲ್ಲಿ ಉಳಿಕೆಯಾದ ಹಣವನ್ನು ಕಲಾವಿದರಿಗೆ ರಜೆಯ ಗೌರವಧನಕ್ಕಾಗಿ ನೀಡುತ್ತಿದೆ. ಕಳೆದ ವರ್ಷ 43.50 ಲಕ್ಷ ರೂ.ಗಳನ್ನು ನೀಡಲಾಗಿತ್ತು.

ಟ್ರಸ್ಟ್‌ ಅಧ್ಯಕ್ಷರಾದ ಬಜಪೆ ರಾಘವೇಂದ್ರ ಆಚಾರ್ಯ ಹಾಗೂ ಸಹೋದರರು ಈ ವರುಷ 1 ಲಕ್ಷ ರೂ.ಗಳನ್ನು ವೈಯಕ್ತಿಕವಾಗಿ ಕಲಾವಿದರ ಗೌರವಧನಕ್ಕಾಗಿ ದೇಣಿಗೆ ನೀಡಿದ್ದು, 12 ವರುಷಗಳಿಂದ ಒಟ್ಟು ರೂ. 16 ಲಕ್ಷಗಳನ್ನು ನೀಡಿದ್ದಾರೆ. ಟ್ರಸ್ಟ್‌ ಅಧ್ಯಕ್ಷ ರಾಘವೇಂದ್ರ ಆಚಾರ್ಯ, ಟ್ರಸ್ಟಿ ಶಿವಾಜಿ ಶೆಟ್ಟಿ, ರವಿರಾಜ ಆಚಾರ್ಯ, ಶ್ರೀನಿವಾಸ ಭಟ್‌,  ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಕೊಡೆತ್ತೂರುಗುತ್ತು ಸನತ್‌ ಕುಮಾರ ಶೆಟ್ಟಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ ಮತ್ತಿತರರಿದ್ದರು.

Trending videos

Back to Top