CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಜೂಜಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಸೋತ ಪತಿ: ಗೆದ್ದ ಕಾಮಾಂಧರಿಂದ ರೇಪ್

ಇಂದೋರ್‌ : ಮಹಾಭಾರತದಲ್ಲಿ ಪಂಚ ಪಾಂಡವರು ದುರ್ಯೋಧನನೊಂದಿಗಿನ ಪಗಡೆಯಾಟದಲ್ಲಿ ಎಲ್ಲವನ್ನೂ ಕಳೆದುಕೊಂಡ ಬಳಿಕ ಅಂತಿಮವಾಗಿ ತಮ್ಮ ಪತ್ನಿ ದ್ರೌಪದಿಯನ್ನೂ ಪಣಕ್ಕಿಟ್ಟು ಆಕೆಯನ್ನೂ ಕಳೆದುಕೊಂಡದ್ದು ಮತ್ತು ಆ ಪರಿಣಾಮವಾಗಿ ದ್ರೌಪದಿಯನ್ನು ತುಂಬಿದ ಸಭೆಗೆ ದುಃಶಾಸನ ಎಳೆತಂದು ಆಕೆಯ ವಸ್ತ್ರಾಪಹರಣ ಮಾಡಲು ಯತ್ನಿಸಿದ್ದು, ಶ್ರೀಕೃಷ್ಣ ಪರಮಾತ್ಮ ಆಕೆಗೆ ಅಕ್ಷಯ ವಸ್ತ್ರವನ್ನು ಕರುಣಿಸಿ ಆಕೆಯ ಮಾನ ಕಾಪಾಡಿದ್ದು ಎಲ್ಲರಿಗೂ ತಿಳಿದಿರುವ ಪೌರಾಣಿಕ ಪ್ರಸಂಗ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಇಂತಹ ಒಂದು ಪೌರಾಣಿಕ ಪ್ರಸಂಗ ನಡೆದಿದೆ. ಆದರೆ ಮಹಿಳೆಯ ರಕ್ಷಣೆಗೆ ಮಾತ್ರ ಯಾರೂ ಬರಲಿಲ್ಲ. 

ಇಂದೋರ್‌ನಲ್ಲಿ ಪತಿ ಮಹಾಶಯನೊಬ್ಬ ಇಬ್ಬರು ಪುರುಷರೊಂದಿಗಿನ ಜೂಜಾಟದಲ್ಲಿ ತನ್ನ ಪತ್ನಿಯನ್ನೇ ಪಣಕ್ಕಿಟ್ಟು ಆಕೆಯನ್ನು ಕಳೆದುಕೊಂಡ ಬಳಿಕ ಆ ಪುರುಷರಿಬ್ಬರು ಆ ಪತಿ ಮಹಾಶಯನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ತಡವಾಗಿ ವರದಿಯಾಗಿದೆ. 

"ನಿನ್ನ ಪತಿಯೊಂದಿಗಿನ ಜೂಜಾಟದಲ್ಲಿ ನಾವು ನಿನ್ನನ್ನು ಗೆದ್ದಿದ್ದೇವೆ; ಹಾಗಾಗಿ ನಾವು ನಿನ್ನನ್ನು ಲೈಂಗಿಕವಾಗಿ ಅನುಭವಿಸುವ ಹಕ್ಕನ್ನು ಹೊಂದಿದ್ದೇವೆ' ಎಂದು ಹೇಳುತ್ತಲೇ ಜೂಜು ಗೆದ್ದ ಪುರುಷರಿಬ್ಬರು ಆ ಅಮಾಯಕ ಮಹಿಳೆಯನ್ನು ರೇಪ್‌ ಮಾಡಿದರು. 

ಇಬ್ಬರು ಕಾಮಾಂಧ ಪುರುಷರಿಂದ ಹೀಗೆ ಅತ್ಯಾಚಾರಕ್ಕೆ ಗುರಿಯಾದ ಅಮಾಯಕ ಮಹಿಳೆಯು ನಿನ್ನೆ ಮಂಗಳವಾರ ತನ್ನ ಈ ಕರುಣಾಜನಕ ಸತ್ಯ ಕಥೆಯನ್ನು ಪೊಲೀಸರ ಸಾಪ್ತಾಹಿಕ ಸಾರ್ವಜನಿಕ ಅಹವಾಲು ಆಲಿಸುವ ಸಭೆಯಲ್ಲಿ  ದುಃಖತಪ್ತಳಾಗಿ ಹೇಳಿದಳು. 

"ನನ್ನ ಮೇಲಿನ ಈ ಅತ್ಯಾಚಾರದ ಘಟನೆಯ ಬಳಿಕ ನಾನು ಪತಿಯಿಂದ ದೂರವಾದೆ; ಆದರೂ ಆ ಇಬ್ಬರು ಕಾಮಾಂಧ ಪುರುಷರು ಮತ್ತು ನನ್ನ ಪತಿ ಸೇರಿಕೊಂಡು ನನಗೆ ಲೈಂಗಿಕ ಕಿರುಕುಳ ನೀಡುವುದನ್ನು ಮುಂದುವರಿಸಿದ್ದಾರೆ; ನನ್ನನ್ನು ಕಾಪಾಡಬೇಕು' ಎಂದು ಆ ಮಹಿಳೆ ಸಭೆಯಲ್ಲಿ ಅಲವತ್ತುಕೊಂಡಳು. 

ಈ ಅಮಾನುಷ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿಕೊಂಡು ಮಹಿಳೆಯ ದೂರಿನ ಪ್ರಕಾರ ಸಂಬಂಧಿತ ಎಲ್ಲ  ಆರೋಪಿ ವ್ಯಕ್ತಿಗಳನ್ನು ಠಾಣೆಗೆ ಕರೆಸಿಕೊಂಡು ಅವರ ಹೇಳಿಕೆಗಳನ್ನು ಪಡೆದುಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ಇಂದೋರ್‌ನ ಮಹಿಳಾ ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ಜ್ಯೋತಿ ಶರ್ಮಾ ಹೇಳಿದ್ದಾರೆ. 

ಮಹಿಳೆಯ ಆರೋಪಗಳನ್ನು ಸಾಕ್ಷ್ಯಾಧಾರ ಸಹಿತವಾಗಿ ಇನ್ನಷ್ಟೇ ದೃಢೀಕರಿಸಿಕೊಳ್ಳಬೇಕಾಗಿರುವು ದರಿಂದ ಪ್ರಕರಣವನ್ನು ಇನ್ನೂ ದಾಖಲಿಸಿಲ್ಲ; ಯಾರನ್ನೂ ಬಂಧಿಸಿಲ್ಲ ಎಂದವರು ಹೇಳಿದ್ದಾರೆ. 

Back to Top