ಏರಿಂಡಿಯಾ ನೌಕರರಿಗೆ ಮೇ ತಿಂಗಳ ಸಂಬಳ ಇನ್ನೂ ಸಿಕ್ಕಿಲ್ಲ : ವರದಿ
Team Udayavani, Jun 7, 2018, 11:29 AM IST
ಹೊಸದಿಲ್ಲಿ : ತನ್ನ ಡಿಸ್-ಇನ್ವೆಸ್ಟ್ಮೆಂಟ್ ಪ್ಲಾನ್ ಗೆ (ಬಂಡವಾಳ ಮಾರಾಟ ಯೋಜನೆಗೆ) ಒಬ್ಬನೇ ಒಬ್ಬ ಬಿಡ್ಡರ್ನನ್ನು ಕಾಣಲು ಕೂಡ ವಿಫಲವಾಗಿರುವ ಏರಿಂಡಿಯಾ ಇದೀಗ ತನ್ನ ನೌಕರರ ಮೇ ತಿಂಗಳ ಸಂಬಳ ಪಾವತಿಯನ್ನು ವಿಳಂಬಿಸಿದೆ.
‘ನಮಗೆ ನಮ್ಮ ಮೇ ತಿಂಗಳ ಸಂಬಳ ಯಾವಾಗ ಸಿಕ್ಕೀತು ಎನ್ನುವ ಬಗ್ಗೆ ನಮ್ಮ ಸಂಸ್ಥೆಯ ಆಡಳಿತೆಯಿಂದ ಈ ತನಕ ಯಾವುದೇ ಮಾಹಿತಿ ಇಲ್ಲ’ ಎಂದು ಏರಿಂಡಿಯದ ಪ್ರಧಾನ ಕಾರ್ಯಾಲಯದ ಸಿಬಂದಿಯೋರ್ವರು ಹೇಳಿರುವುದನ್ನು ಎಎನ್ಐ ವರದಿ ಮಾಡಿದೆ.
ಏರಿಂಡಿಯಾ ಈ ವರ್ಷ ಎಪ್ರಿಲ್ನಿಂದ ತೀವ್ರ ನಗದು ಹಣದ ಕೊರತೆಯನ್ನು ಎದುರಿಸುತ್ತಿದೆ; ಇದರ ಪರಿಣಾಮವಾಗಿ ಅದು ತನ್ನ ನೌಕರರ ವೇತನ ಪಾವತಿಯನ್ನು ವಿಳಂಬಿಸುತ್ತಿದೆ.
ಹಾಗಿದ್ದರೂ ಏರಿಂಡಿಯಾ ತನ್ನ ನೌಕರರ ವೇತನವನ್ನು 30 ಅಥವಾ 31ರಂದೇ ಪಾವತಿಸುತ್ತಾ ಬಂದಿದೆ. ಮೇ 31ರಂದು ಕೇಂದ್ರ ಸರಕಾರ ನಷ್ಟದಲ್ಲಿರುವ ಏರಿಂಡಿಯಾದ ಡಿಸ್ ಇನ್ವೆಸ್ಟ್ಮೆಂಟ್ ಪ್ಲಾನ್ಗೆ ಒಬ್ಬನೇ ಒಬ್ಬ ಬಿಡ್ಡರ್ ಕೂಡ ಮುಂದೆ ಬಂದಿಲ್ಲ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ