ಇಸ್ರೋದ ಸಿಬ್ಬಂದಿ ರಕ್ಷಣಾ ವ್ಯವಸ್ಥೆ ಯಶಸ್ವಿ ಪರೀಕ್ಷೆ
Team Udayavani, Jul 6, 2018, 1:12 PM IST
ಹೊಸದಿಲ್ಲಿ: ತುರ್ತು ಸಂದರ್ಭಗಳಲ್ಲಿ ಗಗನಯಾತ್ರಿಗಳ ಜೀವ ರಕ್ಷಿಸುವಂಥ ಹೊಸದಾಗಿ ಅಭಿವೃದ್ಧಿಪಡಿಸಿರುವ ಕ್ರೂ ಎಸ್ಕೇಪ್ ಸಿಸ್ಟಂ (ಸಿಬ್ಬಂದಿ ಪಾರಾಗುವಂಥ ವ್ಯವಸ್ಥೆ)ನ ಪರೀಕ್ಷೆಯನ್ನು ಗುರುವಾರ ಇಸ್ರೋ ಯಶಸ್ವಿಯಾಗಿ ನೆರವೇರಿಸಿದೆ.
ಹೊಸ ವ್ಯವಸ್ಥೆಯ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ದೃಢಪಡಿಸಲು ಇನ್ನೂ ಹಲವು ಪರೀಕ್ಷೆಗಳು ನಡೆಯಲಿದ್ದು, ಈ ಸರಣಿಯಲ್ಲಿ ಇದು ಮೊದಲ ಪರೀಕ್ಷೆ ಎಂದು ಇಸ್ರೋ ಹೇಳಿದೆ. ಉಡಾವಣೆಯಂಥ ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿ ಉಂಟಾದರೆ ಅಥವಾ ಉಡಾವಣೆ ವಿಫಲವಾದರೆ ಕೂಡಲೇ ಉಡಾವಣಾ ವಾಹಕದಿಂದ ಸುರಕ್ಷಿತ ಅಂತರದಲ್ಲಿ ಗಗನಯಾತ್ರಿಗಳು ಹಾಗೂ ಇತರೆ ಸಿಬ್ಬಂದಿಯನ್ನು ರಕ್ಷಿಸುವಂಥ ವ್ಯವಸ್ಥೆ ಇದಾಗಿದೆ. ಶ್ರೀಹರಿಕೋಟಾದಲ್ಲಿ 259 ಸೆಕೆಂಟುಗಳ ಕಾಲ ಇದರ ಪರೀಕ್ಷೆ ನಡೆಯಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದೇ ವೇಳೆ, ಮಾನವಸಹಿತ ಬಾಹ್ಯಾಕಾಶ ಯೋಜನೆ ಕೈಗೊಳ್ಳಲು ಭಾರತಕ್ಕೆ ದೀರ್ಘ ಅವಧಿ ತಗುಲಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!