ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳಿಂದ ಅತ್ಯಾಚಾರ
Team Udayavani, Jul 8, 2018, 6:00 AM IST
ಛಾಪ್ರಾ: ಬಿಹಾರದ ಪರ್ಸಾಗರ್ ಗ್ರಾಮದಲ್ಲಿ 9ನೇ ತರಗತಿ ಬಾಲಕಿಯೊಬ್ಬಳು ತಾನು ಸತತವಾಗಿ 7 ತಿಂಗಳಿಂದ ಪ್ರಾಂಶುಪಾಲರು, ಇಬ್ಬರು ಶಿಕ್ಷಕರು ಮತ್ತು 16 ವಿದ್ಯಾರ್ಥಿಗಳಿಂದ ಅತ್ಯಾಚಾರಕ್ಕೀಡಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಮೇರೆಗೆ ಪ್ರಾಂಶುಪಾಲರು, ಇಬ್ಬರು ಶಿಕ್ಷಕರು ಮತ್ತು ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 2017ರಲ್ಲಿ ಮೊದಲ ಬಾರಿಗೆ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದೆ. ಅವರು ಅದರ ವಿಡಿಯೋ ಚಿತ್ರೀಕರಿಸಿ, ವಿಷಯ ಬಹಿರಂಗಪಡಿಸಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದರು. ಪ್ರಾಂಶುಪಾಲರಿಗೆ ಈ ಬಗ್ಗೆ ದೂರು ನೀಡಿದಾಗ, ಅವರು ಇಬ್ಬರು ಶಿಕ್ಷಕರ ಜೊತೆಗೂಡಿ ನನ್ನನ್ನು ಹೆದರಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ದೂರಿನಲ್ಲಿ ಹೇಳಿದ್ದಾರೆ.