ಹೆಂಡತಿ ಜತೆ ಜಗಳ:ಪತಿಯಿಂದ ಫೇಸ್ ಬುಕ್ ಲೈವ್ ಸ್ಟ್ರೀಮ್ ಆತ್ಮಹತ್ಯೆ
Team Udayavani, Aug 1, 2018, 11:35 AM IST
ಗುರುಗ್ರಾಮ, ಉತ್ತರ ಪ್ರದೇಶ : 28ರ ಹರೆಯದ ಅಮಿತ್ ಎಂಬ ವ್ಯಕ್ತಿಯೋರ್ವ ಹೆಂಡತಿಯೊಂದಿಗಿನ ಜಗಳದ ಪರಾಕಾಷ್ಠೆಯಲ್ಲಿ ತನ್ನ ಮನೆಯ ಸೀಲಿಂಗ್ ಫ್ಯಾನಿಗೆ ನೇಣುಬಿಗಿದು ಫೇಸ್ ಬುಕ್ ನಲ್ಲಿ ಲೈವ್ ಸ್ಟ್ರೀಮ್ ಮಾಡುತ್ತಾ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಅಮಿತ್ ಮೂಲತಃ ಪಟೌಡಿಯ ಸಮೀಪದ ಹೈಲಿ ಮಂಡಿ ಎಂಬ ಪ್ರದೇಶದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಿತ್ಗೆ ಮೊನ್ನೆ ಸೋಮವಾರ ಪತ್ನಿ ಪ್ರೀತಿ ಜತೆಗೆ ಮಾತಿನ ಜಗಳ ಉಂಟಾಗಿತ್ತು. ಜಗಳದ ಪರಾಕಾಷ್ಠೆಯಲ್ಲಿ ಪ್ರೀತಿ ಮನೆ ಬಿಟ್ಟು ಹೋದಳು. ತೀವ್ರ ನಿರಾಶನಾದ ಅಮಿತ್ ಫೇಸ್ ಬುಕ್ ನಲ್ಲಿ ಲೈವ್ ಸ್ಟ್ರೀಮ್ ಮಾಡುತ್ತಾ ಮನೆಯ ಸೀಲಿಂಗ್ ಫಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಿತ್ ಕಳೆದ ಕೆಲ ತಿಂಗಳಿಂದ ಮನೋ ಕ್ಲೇಷಕ್ಕೆ ಸಂಬಂಧಿಸಿ ಚಿಕಿತ್ಸೆ ಪಡೆಯುತ್ತಿದ್ದ. ಆತನ ಮೃತ ದೇಹವನ್ನು ಮನೆಯವರು ಪೊಲೀಸರಿಗೆ ಮಾಹಿತಿ ನೀಡದೆ ಸುಟ್ಟರು. ಪೊಲೀಸರೀಗ ಸಂಶಯಾಸ್ಪದ ಸಾವಿನ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.