ರೆಪೋ ದರ ಶೇ.0.25 ಏರಿಕೆ
Team Udayavani, Aug 2, 2018, 6:00 AM IST
ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ. 0.25ರಷ್ಟು ಏರಿಕೆ ಮಾಡಿದ್ದು, ಎರಡು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿಯ ಏರಿಕೆಯಾಗಿದೆ. ಹಣದುಬ್ಬರ ಏರಿಕೆಯಾಗಿರುವುದರಿಂದ ಆರ್ಬಿಐ ಈ ಕ್ರಮ ಕೈಗೊಂಡಿದೆಯಾದರೂ ಗೃಹ, ವಾಹನ ಹಾಗೂ ಇತರ ಸಾಲಗಳ ಮೇಲಿನ ಬಡ್ಡಿ ದರವನ್ನು ಬ್ಯಾಂಕ್ಗಳು ಏರಿಸುವ ಸಾಧ್ಯತೆಯಿದೆ. 6 ಸದಸ್ಯರ ವಿತ್ತ ಸಮಿತಿಯಲ್ಲಿ ಐವರು ರೆಪೋ ದರ ಏರಿಕೆಗೆ ಪರವಾಗಿದ್ದರು.
ಬುಧವಾರದ ನಿರ್ಧಾರದಿಂದಾಗಿ ರೆಪೋ ದರವು ಶೇ. 6.5ಕ್ಕೆ ಏರಿಕೆಯಾಗಿದೆ. ಇದೇ ವೇಳೆ ರಿವರ್ಸ್ ರೆಪೋ ದರವನ್ನು ಕೂಡ ಇದೇ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದ್ದು, ಶೇ. 6.25 ಆಗಿದೆ. ಎಂಎಸ್ಎಫ್ ಮತ್ತು ಬ್ಯಾಂಕ್ ರೇಟ್ ಕೂಡ ಏರಿಕೆಯಾಗಿ ಶೇ. 6.75 ತಲುಪಿದೆ. ರೆಪೋ ದರ ಏರಿಕೆ ನಿರೀಕ್ಷೆಯ ಹಿನ್ನೆಲೆಯಲ್ಲಿ ಈಗಾಗಲೇ ಎಸ್ಬಿಐ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ. 0.1ರಷ್ಟು ಏರಿಕೆ ಮಾಡಿದೆ. ಇತರ ಬ್ಯಾಂಕ್ಗಳೂ ಠೇವಣಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆಗಳಿವೆ. ರೆಪೋ ದರ ಏರಿಕೆಯಾಗುತ್ತಲೇ ಷೇರು ಮಾರುಕಟ್ಟೆ ಕುಸಿತ ಕಂಡಿದ್ದು, ಸೆನ್ಸೆಕ್ಸ್ 84.96 ಅಂಕ ಇಳಿದು 37,521.62ರಲ್ಲಿ ಕೊನೆಯಾಗಿದೆ. ನಿಫ್ಟಿ 10.30 ಅಂಕ ಇಳಿಕೆ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!