ಪೆಟ್ರೋಲ್, ಡೀಸೆಲ್ ದರ ಏರಿಕೆ
Team Udayavani, Aug 18, 2018, 6:00 AM IST
ಹೊಸದಿಲ್ಲಿ: ತೈಲ ಮಾರಾಟ ಸಂಸ್ಥೆಗಳು (ಒಎಂಸಿ) ಗುರುವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬರುವಂತೆ ತೈಲ ಬೆಲೆಯನ್ನು ಏರಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿದ್ದರಿಂದಾಗಿ ಈ ದರಗಳಲ್ಲಿ ಹೆಚ್ಚಳವಾಗಿದೆ.
ಪರಿಷ್ಕೃತ ದರ ಪಟ್ಟಿಯಂತೆ ದಿಲ್ಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 77.20 ರೂ. ಆಗಿದ್ದರೆ, ಮುಂಬಯಿಯಲ್ಲಿ 84.63 ರೂ., ಕೋಲ್ಕತಾದಲ್ಲಿ 80.14 ರೂ. ಮತ್ತು ಚೆನ್ನೈಯಲ್ಲಿ 80.19 ರೂ. ಆಗಿದೆ. ಪರಿಷ್ಕೃತ ಡೀಸೆಲ್ ದರ ದಿಲ್ಲಿಯಲ್ಲಿ ಪ್ರತಿ ಲೀಟರ್ಗೆ 68.78 ರೂ. ಇದ್ದರೆ, ಮುಂಬಯಿಯಲ್ಲಿ 73.02 ರೂ., ಕೋಲ್ಕತಾದಲ್ಲಿ 71.62 ರೂ. ಹಾಗೂ ಚೆನ್ನೈಯಲ್ಲಿ 72.65 ರೂ. ಆಗಿದೆ. ಡೀಸೆಲ್ ಮೇಲೆ ದಿಲ್ಲಿಯಲ್ಲಿ ವಿಧಿಸಲಾಗುವ ವ್ಯಾಟ್ ತೆರಿಗೆ ದೇಶ ದಲ್ಲೇ ಅತಿ ಕಡಿಮೆ ಎಂದು ಹೇಳಲಾಗಿದ್ದು, ಅಲ್ಲಿ 17.24 ರೂ. ವ್ಯಾಟ್ ತೆರಿಗೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ