CONNECT WITH US  

ತಾಜ್‌ಮಹಲ್‌ ನಾಶವಾದರೆ: 2ನೇ ಚಾನ್ಸ್‌ ಇಲ್ಲ

ಹೊಸದಿಲ್ಲಿ: ಒಂದು ಬಾರಿ ತಾಜ್‌ಮಹಲ್‌ ನಾಶವಾಯಿತೆಂದರೆ, ಅದರ ಸಂರಕ್ಷಣೆಗೆ "ಎರಡನೇ ಅವಕಾಶ' ಇಲ್ಲವೇ ಇಲ್ಲ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ. ಮಾಲಿನ್ಯದಿಂದಾಗಿ ಪ್ರೇಮಸೌಧವನ್ನು ಉಳಿಸಿಕೊಳ್ಳುವುದು ಸವಾಲಾಗಿದ್ದು, ವಿಷನ್‌ ಡಾಕ್ಯುಮೆಂಟ್‌ ತಯಾರಿಸುವ ಮೂಲಕ ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ ಆಡಳಿತಾಧಿಕಾರಿಗಳಿಗೆ ನಿರ್ದೇಶನವನ್ನೂ ಕೋರ್ಟ್‌ ನೀಡಿದೆ. ತಾಜ್‌ಮಹಲ್‌ನ ಸುತ್ತಲೂ ಹೆಚ್ಚುತ್ತಿರುವ ವಾಹನಗಳ ಓಡಾಟ, ಭಾರೀ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿರುವ ಇಂಗಾಲ, ಕೈಗಾರಿಕಾ ವಲಯದಿಂದ ಆಗುತ್ತಿರುವ ವಾಯುಮಾಲಿನ್ಯ ಹಾಗೂ ಪಕ್ಕದ ಯಮುನಾ ನದಿ ನೀರಿನ ಮಟ್ಟ ಇತ್ಯಾದಿಗಳನ್ನು ಪರಿಗಣಿಸಿಯೇ ವಿಷನ್‌ ಡಾಕ್ಯುಮೆಂಟ್‌ ರಚಿಸುವಂತೆ ಅಧಿಕಾರಿಗಳಿಗೆ ನ್ಯಾಯಪೀಠ ಸೂಚಿಸಿದೆ.

Trending videos

Back to Top