CONNECT WITH US  

ಔರಂಗಾಬಾದ್‌, ಉಸ್ಮಾನಾಬಾದ್‌ ಮರುನಾಮಕರಣಕ್ಕೆ ಶಿವಸೇನೆ ಒತ್ತಾಯ

ಶಿವಸೇನೆಯ ನಾಯಕಿ ಮನೀಷಾ ಕಯಾಂಡೆ

ಮುಂಬಯಿ : ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ ಮತದಾರರನ್ನು ಓಲೈಸುವ ತಂತ್ರವಾಗಿ ಸ್ಥಳ-ಪುನರ್‌-ನಾಮಕರಣ-ರಾಜಕೀಯ ತೀವ್ರವಾಗುತ್ತಿರುವ ನಡುವೆಯೇ ಇತ್ತ ಮಹಾರಾಷ್ಟ್ರದಲ್ಲಿ ಶಿವಸೇನೆಯು ರಾಜ್ಯದ ಎರಡು ಪ್ರಮುಖ ಪಟ್ಟಣಗಳ ಹೆಸರನ್ನು ಬದಲಾಯಿಸಬೇಕೆಂಬ ತನ್ನ ದೀರ್ಘ‌ಕಾಲೀನ ಬೇಡಿಕೆಯನ್ನು ಪುನರುಚ್ಚರಿಸಿದೆ. 

ಔರಂಗಾಬಾದ್‌ ಗೆ ಸಂಭಾಜಿ ನಗರವೆಂದೂ ಉಸ್ಮಾನಾಬಾದ್‌ ಗೆ ಧಾರಾಶಿವ ಎಂದೂ ಪುನರ್‌ ನಾಮಕರಣ ಮಾಡಬೇಕೆಂದು ರಾಜ್ಯದಲ್ಲಿನ ಬಿಜೆಪಿ ಸರಕಾರದ ಪ್ರಧಾನ ಭಾಗೀದಾರ ಪಕ್ಷವಾಗಿರುವ ಶಿವಸೇನೆಯು ಸರಕಾರವನ್ನು ಆಗ್ರಹಿಸಿದೆ. 

ಶಿವಸೇನೆಯ ಬೇಡಿಕೆಯನ್ನು ಮಾಧ್ಯಮದ ಮುಂದೆ ಪುನರುಚ್ಚರಿಸಿರುವ ಪಕ್ಷದ ನಾಯಕಿ ಮನೀಷಾ ಕಯಾಂಡೆ ಅವರು ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಮತ್ತು ಕಾಂಗ್ರೆಸ್‌ ಪಕ್ಷ ಶಿವಸೇನೆಯ ಈ ಬೇಡಿಕೆಯನ್ನು ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಒಪ್ಪುತ್ತಿಲ್ಲ ಎಂದು ದೂರಿದರು. 

ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ಅವರು ಈಚೆಗಷ್ಟೇ ಫೈಜಾಬಾದ್‌ಗೆ ಅಯೋಧ್ಯೆ ಎಂದೂ ಅಲಹಾಬಾದ್‌ ಗೆ ಪ್ರಯಾಗ್‌ರಾಜ್‌ ಎಂದೂ ಪುನರ್‌ ನಾಮಕರಣ ಮಾಡಿರುವುದು ದೇಶಾದ್ಯಂತ ಸಂಚಲನ ಉಂಟುಮಾಡಿದೆ. 

Trending videos

Back to Top