ಇನ್ಸ್ಟಾಗ್ರಾಂನಲ್ಲೂ ನಂ. 1
Team Udayavani, Dec 7, 2018, 6:00 AM IST
ಹೊಸದಿಲ್ಲಿ: ಜನಪ್ರಿಯ ಸಾಮಾಜಿಕ ಜಾಲ ತಾಣಗಳಲ್ಲೊಂದಾದ ಇನ್ಸ್ಟಾ ಗ್ರಾಂನಲ್ಲಿ ಈ ವರ್ಷ ಅತಿ ಹೆಚ್ಚು ಫಾಲೋವರ್ಗಳನ್ನು (1.48 ಕೋಟಿ) ಗಳಿಸಿದ ವಿಶ್ವ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಹೊರ ಹೊಮ್ಮಿದ್ದಾರೆ.
ಅತಿ ಹೆಚ್ಚು ಲೈಕ್ಗಳು ಹರಿದುಬಂದಿರುವ ವಿಶ್ವನಾಯಕರ ಫೋಟೋಗಳ ವಿಭಾಗದಲ್ಲಿ ಮೊದಲೆರಡು ಸ್ಥಾನಗಳೂ ಮೋದಿಯವರಿಗೇ ಲಭ್ಯವಾಗಿವೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿ, ತಮ್ಮ ವಿವಾಹದ ನಂತರ ಮೋದಿ ಯವರನ್ನು ಭೇಟಿ ಯಾಗಿದ್ದ ಫೋಟೋ ಅತಿ ಹೆಚ್ಚು ಮೆಚ್ಚುಗೆ ಪಡೆದ (1,834,707 ಹಾರ್ಟ್ಸ್) ವಿಶ್ವ ನಾಯಕರ ಫೋಟೋ ಎಂದೆನಿಸಿದ್ದರೆ. 2018ರ ವಿಶ್ವ ಆರ್ಥಿಕ ಫೋರಂಗಾಗಿ ದಾವೋಸ್ಗೆ ತೆರಳಿದ್ದಾಗ ಅಲ್ಲಿನ ಹಿಮ ಚ್ಛಾದಿತ ಪ್ರದೇಶದ ಬಸ್ ನಿಲ್ದಾಣದಲ್ಲಿ ನಿಂತಿ ರುವ ಅವರ ಫೋಟೋ 2ನೇ ಅತಿ ಹೆಚ್ಚು ಮೆಚ್ಚುಗೆ (16,35,978 ಲೈಕ್ಸ್) ಪಡೆದ ಫೋಟೋ ಎಂದು ಪರಿಗಣಿಸಲ್ಪಟ್ಟಿದೆ.
ಇನ್ನು, 2018ರಲ್ಲಿ ಇನ್ಸ್ಟಾಗ್ರಾಂನಲ್ಲಿ ಅವರು ಮಾಡಿರುವ ಪೋಸ್ಟ್ಗಳಿಗೆ 8,73, 302 ಮಂದಿ ಪ್ರತಿಕ್ರಿಯಿಸಿದ್ದು, ಈ ಮೂಲಕ ಈ ಸಾಮಾಜಿಕ ಜಾಲತಾಣದಲ್ಲಿ “ಪರಿಣಾಮ’ ಬೀರುವ ವಿಶ್ವನಾಯಕರೆಂಬ ಹಿರಿಮೆಯೂ ಅವರದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್