ಪಾಕ್ನಲ್ಲಿ ಭಾರತೀಯ ಪಾಸ್ಪೋರ್ಟ್ಗಳು ನಾಪತ್ತೆ
Team Udayavani, Dec 16, 2018, 6:15 AM IST
ಹೊಸದಿಲ್ಲಿ: ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಭಾರತೀಯರ 23 ಪಾಸ್ಪೋರ್ಟ್ಗಳು ನಾಪತ್ತೆಯಾಗಿದ್ದು, ಭಾರತಕ್ಕೆ ಭದ್ರತಾ ಆತಂಕ ತಂದೊಡ್ಡಿದೆ.
ಈ ಪಾಸ್ಪೋರ್ಟ್ಗಳು ಕರ್ತಾರ್ಪುರ ಸಾಹಿಬ್ ಸೇರಿದಂತೆ ಪಾಕಿಸ್ತಾನದ ಗುರುದ್ವಾರಗಳಿಗೆ ಭೇಟಿ ನೀಡಲು ಬಯಸಿ ವೀಸಾಗಾಗಿ ಅರ್ಜಿ ಸಿಲ್ಲಿಸಿದ್ದ ಸಿಖ್ ಯಾತ್ರಿಕರದ್ದು ಎನ್ನಲಾಗಿದೆ. ಕಳೆದ ತಿಂಗಳು ಕರ್ತಾರ್ ಸಾಹಿಬ್ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಾಕ್ ರಾಯಭಾರ ಕಚೇರಿಯು 3,800 ಭಾರತೀ ಯರಿಗೆ ವೀಸಾ ನೀಡಿತ್ತು. ಪಾಸ್ಪೋರ್ಟ್ ಕಳೆದುಕೊಂಡಿರುವವರು ದೂರು ದಾಖಲಿಸಿದ ಬಳಿಕವೇ ಪ್ರಕರಣ ಬೆಳಕಿಗೆ ಬಂದಿದೆ. ಕಾಣೆಯಾಗಿರುವ ಪಾಸ್ಪೋರ್ಟ್ಗಳು ಗಳನ್ನು ಭಯೋತ್ಪಾದಕರೇನಾ ದರೂ ದುರ್ಬಳಕೆ ಮಾಡಿಕೊಂಡರೆ ಎಂಬ ಭೀತಿ ಹುಟ್ಟಿಕೊಂಡಿದೆ. ಅಲ್ಲದೆ, ಉಗ್ರರನ್ನು ಭಾರತದೊಳಕ್ಕೆ ನುಸುಳುವಂತೆ ಮಾಡಲು ಪಾಕ್ ಮಾಡಿರುವ ಕುತಂತ್ರ ಇರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಪಾಕ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದಾಗ, ಪಾಸ್ಪೋರ್ಟ್ಗಳ ಬಗ್ಗೆ ಮಾಹಿತಿ ಇಲ್ಲ ಎಂಬ ಉತ್ತರ ದೊರಕಿದೆ. ಇದು ಗಂಭೀರ ವಿಚಾರವಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?