CONNECT WITH US  

ಮಲಾಡ್‌ ಕುರಾರ್‌ ವಿಲೇಜ್‌ :ಅಖಂಡ ಹರಿನಾಮ ಸಂಕೀರ್ತನೆ

ಮುಂಬಯಿ: ಮಲಾಡ್‌ ಪೂರ್ವದ  ಕುರಾರ್‌ ವಿಲೇಜ್‌ನ ಶ್ರೀ  ಶನಿ ಮಹಾತ್ಮಾ ಪೂಜಾ ಸಮಿತಿಯ ವತಿಯಿಂದ ಡಿ. 3 ರಂದು  ದೇವಸ್ಥಾನದ ವಠಾರದಲ್ಲಿ ಅಖಂಡ ಹರಿನಾಮ ಸಂಕೀರ್ತನೆಯು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ  ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ನಡೆಯಿತು. ಈ ಧಾರ್ಮಿಕ ಕಾರ್ಯದಲ್ಲಿ  ಶ್ರೀ ಶನೀಶ್ವರ ಭಜನಾ ಮಂಡಳಿ, ಕುರಾರ್‌ ವಿಲೇಜ್‌ ಮಲಾಡ್‌ ಸೇರಿದಂತೆ ನಗರದ ಒಂಭತ್ತು ಪ್ರಮುಖ ಭಜನಾ ಮಂಡಳಿಗಳು ಭಾಗವಹಿಸಿದ್ದು ಹಿರಿಯರು, ಕಿರಿಯರು, ಪುರುಷರು ಹಾಗೂ ಮಹಿಳೆಯರು ಇದರಲ್ಲಿ ಭಕ್ತಿ ಪೂರ್ವಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಊರಿನ ಪ್ರಸಿದ್ದ ಕುಣಿತ ಭಜನಾ ಮಂಡಳಿಯಾದ ರಾಧಾಕೃಷ್ಣ ಭಜನಾ ಮಂಡಳಿ ಸಸಿಹಿತ್ಲು (ಕದಿಕೆ) ಅವರು ಭಾಗವಹಿಸಿದ್ದರು. ಹೋಟೇಲು ಉದ್ಯಮಿ ಸುರೇಶ್‌ ಶೆಟ್ಟಿ, ಪ್ರಧಾನ ಅರ್ಚಕ ಹಾಗೂ ಪುರೋಹಿತರಾದ ರಾಘವೇಂದ್ರ ತುಂಗಾ ಭಟ್‌, ನಾರಾಯಣ ಭಟ್‌,  ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಪಿ. ಸಾಫಲ್ಯ ಹಾಗೂ ಇತರ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜ್ಯೋತಿ ಬೆಳಗಿಸಿ ಸಂಕೀರ್ತನೆಯನ್ನು ಪ್ರಾರಂಭಿಸಿದರು. ಭಜನೆ ಬಳಿಕ ಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ಅಖಂಡ ಹರಿನಾಮ ಸಂಕೀರ್ತನೆ ಸಂಪನ್ನಗೊಂಡಿತು.

ಇದೇ ಸಂದರ್ಭದಲ್ಲಿ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಪಿ. ಸಾಫಲ್ಯ ಅವರು ಹರಿನಾಮ ಸಂಕೀರ್ತನೆ ಬಗ್ಗೆ ವಿವರಿಸಿ, ಈ ಸಮಿತಿಯು ಕಳೆದ ಹಲವಾರು ವರ್ಷಗಳಿಂದ ಮಹಾನಗರದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದು ಯುವ ಪೀಳಿಗೆಯಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಯನ್ನು ಉಳಿಸಿ ಬೆಳೆಸಲು ನಿರಂತರವಾಗಿ ಭಜನೆ, ಹರಿಕಥೆ, ಪ್ರವಚನ ಇತ್ಯಾದಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಸಿದ್ದ ರಾಧಾಕೃಷ್ಣ ಭಜನಾ ಮಂಡಳಿ ಸಸಿಹಿತ್ಲು  ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿ, ಈ ಮಂಡಳಿಯನ್ನು ಕೇವಲ ಮುಂಬಯಿ ಹಾಗೂ ನಾಡಿನಲ್ಲಿ ಮಾತ್ರವಲ್ಲದೇ ದೇಶ ವಿದೇಶಗಳಲ್ಲೂ ಗುರುತಿಸುವಂತಾಗಲಿ. ಈ ಮಂಡಳಿಯವರು ಅದರಲ್ಲೂ ಸಣ್ಣ ಮಕ್ಕಳು ಸುಂದರವಾಗಿ ಈ ಭಜನೆಯಲ್ಲಿ ಭಾಗವಹಿಸಿದ್ದು ನಮ್ಮೆಲ್ಲರ ಮನಸ್ಸನ್ನು ಆಕರ್ಷಿಸಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ ಬಿಲ್ಲವರ ಅಸೋಸಿಯೇಶನ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ ಪೂಜಾರಿ ಅವರು  ಶ್ರೀ ಕ್ಷೇತ್ರದ ಗೌರವವನ್ನು ಸ್ವೀಕರಿಸಿ, ತನ್ನನ್ನು ಆಮಂತ್ರಿಸಿದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಊರಿನಿಂದ ಆಗಮಿಸಿದ ಭಜನಾ ಮಂಡಳಿಯ ಕಾರ್ಯವನ್ನು ಮೆಚ್ಚಿ ಮಾತನಾಡಿ, ಇಂತಹ ಕಾರ್ಯಕ್ರಮ ನೀಡಲು ಮುಂಬಯಿಯ ಕಿರಿಯರಿಂದ ಅಸಾಧ್ಯವಾಗಬಹುದು. ಕುರಾರ್‌ ವಿಲೇಜ್‌ನಲ್ಲಿ  ಶ್ರೀನಿವಾಸ  ಸಾಫಲ್ಯರ ನೇತೃತ್ವದಲ್ಲಿ ಇಂತಹ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡದ್ದು ಅಭಿನಂದನೀಯ ಎಂದರು.

ಇನ್ನೋರ್ವ ಅತಿಥಿ ನ್ಯಾಯವಾದಿ ಜಗನ್ನಾಥ ಶೆಟ್ಟಿ ಅವರು ಗೌರವ ಸ್ವೀಕರಿಸಿ ಮಾತನಾಡಿ, ಇಂದು ನಾನು ವೀಕ್ಷಿಸಿದ ಸಣ್ಣ ಮಕ್ಕಳ ಕುಣಿತ ಭಜನೆಯ ಹೊಸ ಶೈಲಿಯ¨ªಾಗಿದ್ದು ಪ್ರಥಮವಾಗಿ ಇಂತಹ ಭಜನೆಯನ್ನು ನೋಡಿರುವೆನು. ಆಧುನಿಕ ತಂತ್ರ
ಜ್ಞಾನಗಳಾದ ಮೊಬೈಲ್‌, ದೂರದರ್ಶನದಲ್ಲಿ ಅಧಿಕ ಸಮಯ ಕಳೆಯದೆ ಇಂತಹ ಧಾರ್ಮಿಕ ಕಾರ್ಯದಲ್ಲಿ ನಮ್ಮ ನಾಡಿನ ಯುವ ಹಾಗೂ ಕಿರಿಯರು ತೊಡಗಿದ್ದು ಅಭಿಮಾನ ತಂದಿದೆ ಎಂದರು.

ಕುರಾರ್‌ ವಿಲೇಜ್‌ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ  ಪೂಜಾರಿ ಅವರು ಉಪಸ್ಥಿತರಿದ್ದು  ಕ್ಷೇತ್ರದ ಗೌರವವನ್ನು ಸ್ವೀಕರಿಸಿದರು. ಅಖಂಡ ಹರಿನಾಮ ಸಂಕೀರ್ತನೆ ಕಾರ್ಯವು ನಿತ್ಯಪ್ರಕಾಶ್‌ ಶೆಟ್ಟಿಯವರ ಮಾರ್ಗದರ್ಶನದಲ್ಲಿ ನಡೆದಿದ್ದು ಅವರನ್ನು ಪದಾಧಿಕಾರಿಗಳು ಗೌರವಿಸಿದರು.

ಉಪಾಧ್ಯಕ್ಷ ಎಂ. ಡಿ. ಬಿಲ್ಲವ, ಗೌರವ  ಪ್ರಧಾನ ಕಾರ್ಯದರ್ಶಿ ಸಂತೋಷ್‌ ಶೆಟ್ಟಿ, ಕೋಶಾಧಿಕಾರಿ ಹರೀಶ್‌ ಸಾಲ್ಯಾನ್‌ , ಜೊತೆ ಕಾರ್ಯದರ್ಶಿಗಳಾದ ನಿತ್ಯಾನಂದ ಕೋಟ್ಯಾನ್‌ ಮತ್ತು ಶಾಲಿನಿ ಶೆಟ್ಟಿ, ಜತೆ ಕೋಶಾಧಿಕಾರಿಗಳಾದ ಶಿವಾನಂದ ಎನ್‌.ದೇವಾಡಿಗ ಮತ್ತು ಚಂದ್ರಕುಮಾರ್‌ ಶೆಟ್ಟಿ, ಸಲಹೆ ಗಾರರಾದ ಶ್ರೀಧರ ಆರ್‌. ಶೆಟ್ಟಿ  ಮತ್ತು ರಮೇಶ್‌ ರಾವ್‌ , ಮಹಿಳಾ ವಿಭಾಗದ ಪ್ರಮುಖರಾದ ಶೀತಲ್‌ ಎನ್‌. ಕೋಟ್ಯಾನ್‌, ಶ್ರೀ  ಶನಿ ಮಹಾತ್ಮಾ ಪೂಜಾ ಸಮಿತಿಯ ಇತರ ಪದಾಧಿಕಾರಿಗಳಾದ  ನಾರಾಯಣ ಶೆಟ್ಟಿ, ಬಾಬು ಚಂದನ್‌, ದಿನೇಶ್‌ ಡಿ.ಕುಂಬÛ, ಪ್ರಭಾಕರ ಶೆಟ್ಟಿ, ರಾಮಕೃಷ್ಣ ವಿ. ಶೆಟ್ಟಿ ಯಾನ್‌,  ಹರೀಶ್‌ ಡಿ. ಕುಂದರ್‌, ಸದಾನಂದ ಶೆಟ್ಟಿ,ಸುರೇಶ್‌ ಸಾಲ್ಯಾನ್‌ ಹಾಗೂ ಮಹಿಳಾ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.  


Trending videos

Back to Top