CONNECT WITH US  

ಪುಣೆ ತುಳು-ಕನ್ನಡಿಗರಿಂದ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಅವರಿಗೆ ಸಮ್ಮಾನ

ಪುಣೆ: ಹಿಂದೂ ಧಾರ್ಮಿಕ ಚಿಂತನೆಗಳಿಂದ ಜಗತ್ತನ್ನೇ ಬದಲಾಯಿಸಬ ಹುದಾದ ಧರ್ಮ ನಮ್ಮದಾಗಿದೆ. ಸಾವಿ ರಾರು ವರ್ಷಗಳ ಇತಿಹಾಸವಿರುವ ಈ ಹಿಂದೂ ಧರ್ಮದಲ್ಲಿ ಎಲ್ಲಾ ದೇವರನ್ನು ಪೂಜಿಸುವ, ನಾನ ರೀತಿಯ ಧಾರ್ಮಿಕ ಚಿಂತನೆಯ ಆಚರಣೆಗಳು ಪ್ರತಿನಿತ್ಯ  ಎಂಬಂತೆ ನಡೆಯುತಿರುತ್ತವೆ. ಹಿಂದೂಗಳು ಯಾವುದೇ ಮತ ಪಂಗಡಗಳ ಯಾವುದೇ ರೀತಿಯ ಅಚಾರ ವಿಚಾರಗಳಿಗೆ ಅಡ್ಡಿ ಪಡಿಸಿದ ನಿದರ್ಶನಗಳಿಲ್ಲ ಎಂದು  ಅರ್‌ಎಸ್‌ಎಸ್‌ ದಕ್ಷಿಣ ಮಧ್ಯ ಪ್ರಾಂತೀಯ ಸಂಪರ್ಕ ಪ್ರಮುಖ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಿರತರಾಗಿರುವ ಡಾ| ಕಲ್ಲಡ್ಕ ಪ್ರಭಾಕರ ಭಟ್‌  ಅವರು ನುಡಿದರು.

ನಮ್ಮ ದೇಶದಲ್ಲಿ ನಾವು  ಎಲ್ಲಾ ದೇವರನ್ನು  ಒಪ್ಪುತ್ತೇವೆ, ಅಪ್ಪುತ್ತೇವೆ. ಯಾರನ್ನು ದೂರ ಮಾಡುವುದಿಲ್ಲ. ಎÇÉಾ ಧರ್ಮದವರಿಗೂ ಆಸರೆ ನೀಡಿದ ದೇಶ ಒಂದಿದ್ದರೆ ಅದು ಭಾರತ ಮಾತ್ರ. ಒಂದು ಸಣ್ಣ ಕ್ರಿಮಿಗೂ ಕೂಡ ತೊಂದರೆಯಾಗಬಾರದು ಎಂಬ ಸಿದ್ಧಾಂತ ಹಿಂದೂ ಧರ್ಮದ್ದಾಗಿದೆ. ಆದರೆ  ಇಂದು ನಾವು ಯಾರಿಗೆ ಆಸರೆಯನ್ನು ನಿಡಿ¨ªೇವೆಯೋ ಅವರಿಂದಲೇ ಹಿಂದೂ ಧರ್ಮದ ಮೇಲೆ ಅಕ್ರಮಣಗಳಾಗುತ್ತಿವೆ. ಅದಕ್ಕಾಗಿ ನಾವೆಲ್ಲರೂ ಸೆಟೆದು ನಿಲ್ಲಬೇಕಾದ ಅನಿವಾರ್ಯತೆಯಿದೆ. 

ನಾವು ಉದಾರಿಗಳಾಗಿ ಸರ್ವರನ್ನು ಪ್ರೀತಿಯಿಂದ ಕಂಡು, ಯಾವುದೇ ಧರ್ಮ, ಮತ, ಪಂಗಡಗಳಿಗೆ ವಿರುದ್ದವಾಗಿ ನಡೆಯದಿದ್ದರೂ ಕೂಡ ಹಿಂದೂತ್ವಕ್ಕೆ ತೊಂದ ರೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಇಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೆಕಾದ ಪರಿಸ್ಥಿತಿ ಬಂದೊದಗಿದೆ. ಅದಕ್ಕಾಗಿ ಹಿಂದೂತ್ವದ ಧಾರ್ಮಿಕ ಚಿಂತನೆಗಳೊಂದಿಗೆ ಜೀವನ ನಡೆಸಲು ನಮ್ಮ ಹಿಂದೂ ಧರ್ಮವನ್ನು ಆರಾಧಿಸುವ ನಾವೆಲ್ಲರೂ, ಹಿಂದೂತ್ವದ    ಅದಾರದಲ್ಲಿ ನಮ್ಮ ದೇಶ ನಡೆಯಬೇಕು ಎಂಬ ದೃಢ ನಿಲುವಿನೊಂದಿಗೆ ಹೋಗಬೇಕಾಗಿದೆ ಜು. 2 ರಂದು ಪುಣೆಯ ಶಿವಾಜಿ ನಗರದ  ಕೃಷ್ಣ ರೆಸಿಡೆನ್ಸಿಯ ತೈಕ ಹಾಲ್‌ನಲ್ಲಿ ನಡೆದ ಪುಣೆಯ ತುಳು  ಕನ್ನಡಿಗರ ಸಾರ್ವಜನಿಕ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಇಡಿ ಜಗತ್ತೇ ಭಾರತೀಯ ಹಿಂದೂ ಧರ್ಮದ ಪರಂಪರೆ, ಸಂಸ್ಕೃತಿ, ಆಚಾರ, ವಿಚಾರಗಳಿಗೆ ಆಕರ್ಷಿತವಾಗಿ  ನಮ್ಮತ್ತ ಮುಖಮಾಡಿ ನಿಂತಿದೆ. ಜಗತ್ತನೇ ಬದಲಾಯಿಸಬಲ್ಲ ಮಹಾನ್‌ ಶಕ್ತಿಯೊಂದಿದ್ದರೆ ಅದು ಹಿಂದೂ ಧರ್ಮ. ಜಗತ್ತಿನ ಜನರಿಗೆ ಭಾರತ ಬೇಕಾಗಿದೆ.   ಆದರೆ ನಮ್ಮಲ್ಲಿಯೇ ಇರುವವರಿಗೆ  ಭಾರತ ಬೇಕಾಗಿಲ್ಲ.  ಅಂತಹ ಪರಿಸ್ಥಿತಿ ಇಂದು ಒದಗಿ ಬಂದಿದೆ. ಧರ್ಮದ, ಧಾರ್ಮಿಕ ಚಿಂತನೆಗಳ ಮೇಲೆ ನಮ್ಮ ದೇಶ ನಿಂತಿದೆ. ಸೆಕ್ಯುಲರಿಸಮ್‌ ಚಿಂತಕರಿಂದ ನಮ್ಮ  ದೇಶಕ್ಕೆ ಆದಂತಹ   ಅನ್ಯಾಯ ಬೇರೆ ಯಾವುದೇ ದೇಶದಲ್ಲಿ ಸಿಗಲು ಸಾಧ್ಯವಿಲ್ಲ. ಆಕ್ರಮಣ, ಭಯೋ ತ್ಪಾದನೆ, ಹಿಂದೂ ಮತವನ್ನು ತುಂಡು ಮಾಡುವ ಕಾರ್ಯ,    ಮತಾಂತರದಂತಹ  ಅಪಾಯಕಾರಿ ಘಟನೆಗಳು ಹೆಚ್ಚಾಗುತ್ತಿವೆ. ಅದಕ್ಕಾಗಿ ಹಿಂದೂಗಳು ಒಂದಾಗಿ ಸಂಘಟಿತರಾಗಬೇಕು. 

ಬಲಿಷ್ಠ ಭಾರತ ಕಟ್ಟುವ ನಮ್ಮ ಸಂಸ್ಕೃತಿ ಯನ್ನು ಉಳಿಸುವ, ದೇಶದ ಹಿತ ಕಾಪಾಡುವ ಕೆಲಸ ಮಾಡುವಂತಹ ನಾಯಕ ಅಥವಾ ಸರಕಾರ ಬೇಕಾಗಿದೆ. ಅಂತವರ ಕೈ ಬಲಪಡಿಸುವ ಕೆಲಸ  ನಮ್ಮಿಂದ ಆಗಬೇಕು. ಹಿಂದೂ ಸಮಾಜ ಉಳಿದರೆ ಭಾರತ ಶ್ರೇಷ್ಠವಾಗಬಹುದು,  ವಿಶ್ವ ಗುರುವಾ ಗಬಹುದು. ಈ ಕೆಲಸ ಮನೆ  ಮನೆಯಿಂದ  ಪ್ರಾರಂಭವಾಗಬೇಕು.  ಎಲ್ಲಾ ಹಿಂದೂ ಬಾಂಧವರಿಂದ  ಆಗಬೇಕು ಎಂದು ಅವರು ನುಡಿದರು. 

ವೇದಿಕೆಯಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್‌ಬೆಟ್ಟು ಸಂತೋಷ ಶೆಟ್ಟಿ, ಪಿಂಪ್ರಿ-ಚಿಂಚಾÌಡ್‌ ಬಂಟ್ಸ್‌ ಸಂಘದ ಅಧ್ಯಕ್ಷ ಮಹೇಶ್‌ ಹೆಗ್ಡೆ ಕಟ್ಟಿಂಗೇರಿ, ಲಯನ್‌  ಡಾ|   ಚಂದ್ರಹಾಸ್‌ ಶೆಟ್ಟಿ    ಅವರು ಉಪಸ್ಥಿತರಿದ್ದರು. 

ಪುಣೆಯ ತುಳು ಕನ್ನಡಿಗರ ಪರವಾಗಿ ಪ್ರಭಾಕರ ಭಟ್‌ ಅವರನ್ನು ಪುಣೇರಿ ಶಿವಾಜಿ  ಪೇಟ ತೊಡಿಸಿ, ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಸಮ್ಮಾನಿಸಲಾಯಿತು. ಪುಣೆ ಬಂಟ್ಸ್‌ ಅಸೋಸಿಯೇಶನ್‌ ಪರವಾಗಿ ಕಾರ್ಯದರ್ಶಿ ರೋಹಿತ್‌ ಶೆಟ್ಟಿ  ಅವರು ಪ್ರಭಾಕರ ಭಟ್‌ ಅವರನ್ನು ಗೌರವಿಸಿದರು. ಲಯನ್‌ ಚಂದ್ರ ಹಾಸ ಶೆಟ್ಟಿ  ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ನ್ಯಾಯವಾದಿ ಐ. ಸಿ. ಶೆಟ್ಟಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಪುಣೆ ಬಂಟರ ಸಂಘದ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು, ಪುಣೆ ಶ್ರೀ ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಎನ್‌. ರೋಹಿತ್‌ ಶೆಟ್ಟಿ, ಪಿಂಪ್ರಿ-ಚಿಂಚಾÌಡ್‌  ಬಂಟ್ಸ್‌  ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ್‌ ಶೆಟ್ಟಿ, ಪುಣೆ ತುಳು ಕೂಟದ ಉಪಾಧ್ಯಕ್ಷ ಮೋಹನ್‌ ಶೆಟ್ಟಿ ಎಣ್ಣೆಹೊಳೆ, ಶ್ರೀ ಅಯ್ಯಪ್ಪ ಸೇವಾ ಸಂಘ ಕಾತ್ರಜ್‌ ಗೌರವ  ಕೋಶಾಧಿಕಾರಿ ಜಗದೀಶ್‌ ಶೆಟ್ಟಿ, ಕೃಷ್ಣ ರೆಸಿಡೆನ್ಸಿ ಮಾಲಕ ವಿನಯ್‌ ಶೆಟ್ಟಿ, ಉಡುಪಿ ಜಿಲ್ಲಾ ಸಂಘ ಚಾಲಕ ಶಂಭು ಶೆಟ್ಟಿ, ಶೇಖರ್‌ ಶೆಟ್ಟಿ, ಸುಧಾಕರ ಶೆಟ್ಟಿ, ವಿಠuಲ್‌  ಶೆಟ್ಟಿ, ಸಚ್ಚಿದಾನಂದ ಶೆಟ್ಟಿ  ಹಾಗು ತುಳು ಕನ್ನಡಿಗರು ಉಪಸ್ಥಿತರಿದ್ದರು.

ನಮ್ಮ ಕರಾವಳಿಯಲ್ಲಿ  ಹಿಂದೂ ಸಮಾಜದ ಓರ್ವ ಮೇರು ವ್ಯಕ್ತಿಯಾಗಿ, ಹಿಂದೂ ಸಂಸ್ಕೃತಿಯ ಉಳಿವಿಗಾಗಿ ದುಡಿಯುವ, ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ಮೊಟ್ಟ ಮೊದಲಾಗಿ ಧ್ವನಿ ಎತ್ತುವಲ್ಲಿ ಕಲ್ಲಡ್ಕ ಪ್ರಭಾಕರ ಭಟ್‌ ಶ್ರೇಷ್ಠರು. ತಮ್ಮ ಸುಪರ್ದಿಯಲ್ಲಿ ಉಡುಪಿ ದಕ್ಷಿಣ, ಕನ್ನಡದಲ್ಲಿ ಸಂಘ ಪರಿವಾರದ  ಸಿದ್ಧಾಂತಗಳನ್ನು ಬಿತ್ತರಿಸುತ್ತಾ, ಹಿಂದೂ ಪರಂಪರೆಯಲ್ಲಿ ದೇಶಕ್ಕಾಗಿ ದುಡಿಯುವ ಜನ ನಾಯಕರಿಗೆ ಬೆನ್ನೆಲುಬಾಗಿ ನಿಂತವರು ಪ್ರಭಾಕರ್‌ ಭಟ್‌ ಪುಣೆಗೆ ಆಗಮಿಸಿರುವುದು ನಮಗೆ ಹಮ್ಮೆ. ತಮ್ಮ ವರ್ಚಸ್ಸಿನಿಂದ ಸಂಸದ, ಶಾಸಕರ ಸಹಕಾರದೊಂದಿಗೆ ಪುಣೆಯಿಂದ ಮಂಗಳೂರಿಗೆ ವಿಮಾನ ಯಾನವನ್ನು ಪ್ರಾರಂಭಿಸುವಂತೆ ಮನವಿ ಸಲ್ಲಿಸುತ್ತೇವೆ
 - ನಗ್ರಿಗುತ್ತು ರೋಹಿತ್‌ ಶೆಟ್ಟಿ, 
ಗೌರವ ಕಾರ್ಯದರ್ಶಿ, ಶ್ರೀ ಗುರುದೇವ ಸೇವಾ ಬಳಗ ಪುಣೆ

ದಕ್ಷಿಣ ಭಾರತದಲ್ಲಿ ಹಿಂದೂ ಸಂಘಟನೆಯನ್ನು, ಬಲಪಡಿಸಿ ಭದ್ರ  ಬುನಾದಿಯನ್ನು ಹಾಕಿಕೊಟ್ಟವರು  ಕಲ್ಲಡ್ಕ ಪ್ರಭಾಕರ್‌ ಭಟ್‌ ಮೊದಲಿಗರು. ಹಿಂದೂತ್ವಕ್ಕಾಗಿ ತನ್ನ ಜೀವನವನ್ನೇ ಸಮಾಜಕ್ಕಾಗಿ ಧಾರೆ ಎರೆದಿದ್ದಾರೆ. ಇಂತಹ ವ್ಯಕ್ತಿಗಳಿಂದ ಹಿಂದೂ ಧರ್ಮ ಬಲಗೊಳ್ಳಲು ನಾವೆಲ್ಲರೂ ಇವರ ಕೈ ಬಲಪಡಿಸಬೇಕಾದ ಅಗತ್ಯವಿದೆ. ನಮ್ಮ ದೇಶವನ್ನು ಕಾಪಾಡುವ ದೇಶಕ್ಕಾಗಿ ದುಡಿಯುವ ವ್ಯಕ್ತಿಗಳಿಗೆ ನಮ್ಮ ಬೆಂಬಲವಿರಲಿ
 -ಕಟ್ಟಿಂಗೇರಿ ಮಹೇಶ್‌ ಹೆಗ್ಡೆ  
ಅಧ್ಯಕ್ಷರು,ಬಂಟ್ಸ್‌ ಸಂಘ ಪಿಂಪ್ರಿ-ಚಿಂಚ್ವಾಡ್‌

ದಕ್ಷಿಣ ಪ್ರಾಂತ್ಯದಲ್ಲಿ  ಹಿಂದೂ ಹೃದಯ ಸಮ್ರಾಟರಾಗಿ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವ  ಪ್ರಭಾಕರ ಭಟ್‌ ಅವರು ಹಿಂದೂ ಧರ್ಮದ ಬಗ್ಗೆ ಅಗಾಧ‌ ಜ್ಞಾನವುಳ್ಳವರು.  ಅವರ ಒಂದು ದಿಕ್ಸೂಚಿ ಮಾತುಗಳನ್ನು ಕೇಳುವ ಸಧಾವಕಾಶ  ನಮ್ಮ ಪುಣೆ ಕನ್ನಡಿ ಗರಿಗೆ ಲಭಿಸಿದೆ ಇದು ನಮ್ಮ ಭಾಗ್ಯ 
-ಲಯನ್‌ ಡಾ| ಚಂದ್ರಹಾಸ್‌ ಶೆಟ್ಟಿ 
ಆಡಳಿತ ನಿರ್ದೇಶಕರು, ಮ್ಯಾಗ್ನಮ್ಸ ಗ್ರೂಪ್‌ ಪುಣೆ
 
ಚಿತ್ರ-ವರದಿ: ಹರೀಶ್‌ ಮೂಡಬಿದ್ರಿ ಪುಣೆ

Trending videos

Back to Top