ಚಿಣ್ಣರ ಬಿಂಬ ಥಾಣೆ ಶಿಬಿರದ ಮಕ್ಕಳ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆ

Team Udayavani, Sep 20, 2018, 5:23 PM IST

1909mum02.jpg

ಮುಂಬಯಿ: ಮಕ್ಕಳಲ್ಲಿ ರಾಷ್ಟ್ರೀಯತೆ ಹಾಗೂ ನಾಗರಿಕತೆ ರೂಪಿಸುವಲ್ಲಿ ಚಿಣ್ಣರ ಬಿಂಬದ ಕಾರ್ಯ ಅಭಿನಂದನೀಯ. ಈ ಸಂಸ್ಥೆಯ ಕಾರ್ಯವೈಖರಿಯ ಮೇಲೆ ನನಗೆ ಅತಿಯಾದ ಅಭಿಮಾನ, ಹೆಮ್ಮೆಯಿದೆ ಎಂದು ನವೋದಯ ಕನ್ನಡ ಸೇವಾ ಸಂಘದ ಅಧ್ಯಕ್ಷ ಜಯ ಕೆ. ಶೆಟ್ಟಿ ಅವ‌ರು ನುಡಿದರು.

ಸೆ. 16ರಂದು ನವೋದಯ ಆಂಗ್ಲ ಮಾಧ್ಯಮ ಶಾಲೆಯ ಸಭಾಗೃಹದಲ್ಲಿ ನಡೆದ ಚಿಣ್ಣರ ಬಿಂಬ ಥಾಣೆ ಶಿಬಿರದ ಮಕ್ಕಳ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮಾನವನ ಜೀವನದಲ್ಲಿ ಸ್ಪರ್ಧೆಯು ತೀರಾ ಅಗತ್ಯವಾಗಿದೆ. ಯಾಕೆಂದರೆ ನಮ್ಮಲ್ಲಿ ಛಲ ಹುಟ್ಟಿಸುವುದೇ ಸ್ಪರ್ಧೆ. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಅದರಲ್ಲಿ ಭಾಗವಹಿಸಿ ಅದನ್ನು ಎದುರಿಸುವ ಮನೋಭಾವ ಮುಖ್ಯವಾಗಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ ಥಾಣೆ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ ಪೂಜಾರಿ ಅವರು ಮಾತನಾಡಿ, ಯಾಂತ್ರಿಕ ಜೀವನದ ನಡುವೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಭಾವನೆಯನ್ನು ಮೂಡಿಸುತ್ತ ಅವರ ಉಜ್ವಲ ಭವಿಷ್ಯಕ್ಕಾಗಿ ಚಿಣ್ಣರ ಬಿಂಬ ಮಾಡುತ್ತಿರುವ ಸೇವೆ ಅಭಿಮಾನ ಹುಟ್ಟಿಸುತ್ತಿದೆ. ಸುದೃಢ ದೇಶದ ನಿರ್ಮಾಣಕ್ಕಾಗಿ ಈ ಮಕ್ಕಳು ಕಾರಣೀಭೂತರಾಗಿದ್ದು, ಚಿಣ್ಣರ ಬಿಂಬದ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂದು ಅಭಿಪ್ರಾಯಿಸಿದರು.
ಮತ್ತೋರ್ವ ಅತಿಥಿ ಥಾಣೆಯ ಉದ್ಯಮಿ ಶೇಖರ್‌ ಶೆಟ್ಟಿ ಅವರು ಮಾತನಾಡಿ, ಮಣ್ಣಿನ ಮುದ್ದೆಯಂತಿರುವ ಪುಟಾಣಿಗಳನ್ನು ಒಂದು ಆಕೃತಿಯ ರೂಪಕೊಟ್ಟು ಅವರ ಜೀವನಕ್ಕೊಂದು ಅರ್ಥ ಕಲ್ಪಿಸುವ ಪ್ರಕಾಶ್‌ ಭಂಡಾರಿ ಅವರ ನೇತೃತ್ವದ ಚಿಣ್ಣರ ಬಿಂಬದ ಕಾರ್ಯ ನನಗೆ ಬಹಳಷ್ಟು ಖುಷಿ ನೀಡುತ್ತದೆ. ಇಂತಹ ಧನಾತ್ಮಕ ಚಿಂತನೆಯ ಸಂಸ್ಥೆಗಳಿಗೆ ನನ್ನ ಸಹಕಾರ ಸದಾಯಿದೆ ಎಂದರು.

ನಿರ್ಣಾಯಕರಾಗಿ ಆಗಮಿಸಿದ ಸಾಹಿತಿ ಡಾ| ಕರುಣಾಕರ ಶೆಟ್ಟಿ ಅವರು ಮಾತನಾಡಿ, ಕನ್ನಡ ನಾಡಿನಲ್ಲಿ ಇಂದು ಮಾತೃ ಭಾಷೆ ಅಳಿವಿನಂಚಿನಲ್ಲಿದೆ. ಮಹಾರಾಷ್ಟದ ಮಣ್ಣಿನಲ್ಲಿ ಕನ್ನಡ ಬೆಳೆಯುತ್ತಿದೆ. ಹಾಗಾದರೆ ಕನ್ನಡಕ್ಕೆ ಖಂಡಿತವಾಗಿಯೂ ಅಳಿವಿಲ್ಲ. ಕನ್ನಡದ ಜತೆಗೆ ತುಳುವನ್ನು ಕಲಿಸುವ ಕಾರ್ಯ ಚಿಣ್ಣರ ಬಿಂಬದಿಂದ ಆಗಬೇಕು. ಅದಕ್ಕೆ ಬೇಕಾಗುವ ಸಲಹೆ-ಸೂಚನೆಗಳನ್ನು ನೀಡಲು ಸಿದ್ಧನಿದ್ದೇನೆ ಎಂದು ನುಡಿದರು.
ತೀರ್ಪುಗಾರರಾದ ಮಾಜಿ ಶಿಕ್ಷಕಿ ಯಶೋದಾ ಬಟ್ಟಂಪಾಡಿ ಅವರು ಮಾತನಾಡಿ, ಮಹಾರಾಷ್ಟ್ರದಲ್ಲಿ ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಚಿಣ್ಣರ ಬಿಂಬದ ಕಾರ್ಯ ಹರಿವ ನದಿಯಂತೆ ಸದಾ ಸಾಗುತ್ತಿರಲಿ ಎಂದು ಹಾರೈಸಿದರು. ಶಿಕ್ಷಕಿ ಜ್ಯೋತಿ ಶೆಟ್ಟಿ, ವಿಭಾಗದ ಮುಖ್ಯಸ್ಥೆ ವಿನಯಾ ಹರೀಶ್‌ ಶೆಟ್ಟಿ ಅವರು ಮಾತನಾಡಿ ಸಹಕರಿಸಿದ ಪಾಲಕರಿಗೆ, ಮಕ್ಕಳಿಗೆ, ಶಿಬಿರದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಚಿಣ್ಣರ ಬಿಂಬದ ರೂವಾರಿಗಳಾದ ಪ್ರಕಾಶ್‌ ಭಂಡಾರಿ ಅವರು ಮಾತನಾಡಿ, ಶಿಬಿರದ ಇಂದಿನ ಸ್ಪರ್ಧೆಯನ್ನು ಕಂಡಾಗ ಮನಸಿಗೆ ಅತೀವ ಸಂತೋಷವಾಯಿತು. ಇದರ ಹಿಂದೆ ದುಡಿದ ಪಾಲಕರಿಗೆ, ಕಾರ್ಯಕರ್ತರಿಗೆ ಅಭಿನಂದನೆಗಳು. ಮುಂದೆ ವಿಭಾಗ ಮಟ್ಟದಲ್ಲೂ ಸ್ಪರ್ಧೆಯು ನಡೆಯಲಿದ್ದು, ಅಲ್ಲೂ ಉತ್ತಮ ಸ್ಪರ್ಧೆಯನ್ನು ಮಕ್ಕಳು ನೀಡಬೇಕು ಎಂದರು.

ವೇದಿಕೆಯಲ್ಲಿ ಶಿಬಿರದ ಶಿಕ್ಷಕಿ ಶೋಭಾ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥೆ ಶ್ರದ್ಧಾ ಶೆಟ್ಟಿ, ಶಿಬಿರದ ಮುಖ್ಯಸ್ಥೆ ಮಮತಾ ದೇವಾಡಿಗ ಉಪಸ್ಥಿತರಿದ್ದರು. ಕಾವ್ಯಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳನ್ನು ಶ್ರವಣ್‌ ಶೆಟ್ಟಿ, ಶ್ರೀದಿತ್‌ ದೇವಾಡಿಗ, ಸನ್ನಿಧಿ ಭಟ್‌ ಅವರು ಪರಿಚಯಿಸಿರು. ನೈಶಾ ಶೆಟ್ಟಿ, ದೃಶ್ಯಾ ಹೆಗ್ಡೆ, ಶ್ರಾವ್ಯಾ ಹೆಗ್ಡೆ ಪ್ರಾರ್ಥನೆಗೈದರು. ಸಾಂಸ್ಕೃತಿಕ ಸ್ಪರ್ಧೆಯನ್ನು ಹಿರಿಯ ವಿದ್ಯಾರ್ಥಿಗಳಾದ ನಮೃತಾ ಶೆಟ್ಟಿ, ಶ್ರೇಯಸ್‌ ಹೆಗ್ಡೆ ನಡೆಸಿಕೊಟ್ಟರು. ಶಿಬಿರದ ಮಾರ್ಗದರ್ಶಕ ರವಿ ಹೆಗ್ಡೆ ಅವರ ಸಲಹೆ-ಸೂಚನೆ, ರ್ಮಾದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.

ಸುಪ್ರಿಯಾ ಹೆಗ್ಡೆ, ಲತಾ ಶೆಟ್ಟಿ, ಸುಗಂಧಿ ಸಾಲ್ಯಾನ್‌, ಸುಗಂಧಿ  ಹೆಗ್ಡೆ, ಇಂದಿರಾ ಶೆಟ್ಟಿ, ಅಮಿತಾ ಶೆಟ್ಟಿ, ವೀಣಾ ಶೆಟ್ಟಿ, ಲತಾ ಶೆಟ್ಟಿ, ಶಾಂತಿ ಶೆಟ್ಟಿ, ಶಕುಂತಳಾ ಶೆಟ್ಟಿ, ಹೇಮಲತಾ ಶೆಟ್ಟಿ, ವಿದ್ಯಾ ಎಸ್‌. ಹೆಗ್ಡೆ, ಶೋಭಾ ಜೆ. ಶೆಟ್ಟಿ, ಸುಕನ್ಯಾ ಶೆಟ್ಟಿ, ಚೇತನಾ ಶೆಟ್ಟಿ, ಸುಭಾಶ್‌, ದಯಾನಂದ್‌ ಹೆಗ್ಡೆ, ಪ್ರಶಾಂತ್‌ ಶೆಟ್ಟಿ, ಮಲ್ಲಿಕಾ ಹೆಗ್ಡೆ, ರಾಧಾಕೃಷ್ಣ ಶೆಟ್ಟಿ, ಉಮೇಶ್‌, ಅಮಿತಾ ಶೆಟ್ಟಿ, ಪ್ರತಿಮಾ ಪೂಜಾರಿ, ಸುಚೇತಾ ಎಸ್‌. ಶಿಬಿರದ ಹಳೆವಿದ್ಯಾರ್ಥಿಗಳಾದ ಕೀರ್ತಿ ಶೆಟ್ಟಿ, ದರ್ಶನ್‌ ಶೆಟ್ಟಿ, ವಿಕ್ಕಿ ಶೆಟ್ಟಿ, ಸಂಜೋತ್‌, ಶ್ರಾವ್ಯಾ ಶೆಟ್ಟಿ, ಶ್ರೇಯಾ ಹೆಗ್ಡೆ, ಸಾಕ್ಷೀ ಶೆಟ್ಟಿ, ದಿಶಾ ಹೆಗ್ಡೆ, ಪ್ರಸ್ತುತಿ ಶೆಟ್ಟಿ, ಐಶ್ವರ್ಯಾ ಶೆಟ್ಟಿ, ಅದಿತಿ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮಮತಾ ದೇವಾಡಿಗ ವಂದಿಸಿದರು. ವಿಜೇತ ಮಕ್ಕಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು.

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.