CONNECT WITH US  

ಸರಕಾರದಲ್ಲಿ ಸಮತೋಲಿತ ಅಭಿವೃದ್ಧಿಗೆ ಆದ್ಯತೆ

"ಸಹಸ್ರ ಪ್ರತಿಭಾ' ಯೋಜನೆ, ಕ್ರೀಡಾಂಗಣಗಳ ಅಭಿವೃದ್ಧಿ ಅಕಾಡೆಮಿ ಸ್ಥಾಪನೆ ನಮ್ಮ ಸಾಧನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದಲ್ಲಿ ಯುವ ಸಚಿವರ ಪೈಕಿ ಸದಾ ಚಟುವಟಿಕೆಯಿಂದ ಇರುವವರಲ್ಲಿ ಪ್ರಮೋದ್‌ ಮಧ್ವರಾಜ್‌ ಒಬ್ಬರು. ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಮೀನುಗಾರಿಕೆ ಸಚಿವರಾಗಿ ಎರಡು ವರ್ಷಗಳಲ್ಲಿ ಎರಡೂ ಇಲಾಖೆಗಳಿಗೆ ಕಾಯಕಲ್ಪ ಕಲ್ಪಿಸಿ ಹೊಸ ಯೋಜನೆ ಹಾಗೂ ಕಾರ್ಯಕ್ರಮ ರೂಪಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿರುವ ಪ್ರಮೋದ್‌ ಮಧ್ವರಾಜ್‌ ಉಡುಪಿ ಜಿಲ್ಲೆಯಲ್ಲಿ ರಾಜಕೀಯವಾಗಿಯೂ ಪ್ರಭಾವಿ. ಇತ್ತೀಚಿನ ದಿನಗಳಲ್ಲಿ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ಇವೆ. ಪ್ರಸಕ್ತ ರಾಜಕೀಯ ವಿಚಾರ, ರಾಜ್ಯ ಸರ್ಕಾರದ ಸಾಧನೆ ಕುರಿತು ಅವರೊಂದಿಗೆ "ಉದಯವಾಣಿ' ನೇರಾ-ನೇರ ಮಾತಿಗಿಳಿದಾಗ...

ನಿಮ್ಮ ಹೊಣೆಗಾರಿಕೆಯ ಇಲಾಖೆಗಳ ಸಾಧನೆ ಹೇಗಿದೆ?
ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಮೀನುಗಾರಿಕೆ ಇಲಾಖೆಗಳಲ್ಲಿ ಹೊಸ ಕಾರ್ಯಕ್ರಮ ರೂಪಿಸಿ ಅಗತ್ಯ ಇರುವ ನೈಜ ಫ‌ಲಾನುಭವಿಗಳಿಗೆ ತಲುಪುವಂತೆ ಮಾಡಿದ್ದೇನೆ. ಕ್ರೀಡಾ ಇಲಾಖೆ ವಿಚಾರದಲ್ಲಿ ಹೇಳಬೇಕಾದರೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗಿಯಾಗಲು ಬೇಕಾದ ತರಬೇತಿ, ಪೌಷ್ಠಿಕ ಆಹಾರ, ವಸತಿ ಸೇರಿ ಮೂಲಸೌಕರ್ಯ ಕೊರತೆ ಎಂದೂ ನಮ್ಮ ಕ್ರೀಡಾ ಪಟುಗಳನ್ನು ಕಾಡಬಾರದು ಎಂಬುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದೇನೆ.

 ಕ್ರೀಡಾ ಇಲಾಖೆಯಲ್ಲಿ ಅನುಷ್ಟಾನಗೊಂಡಿರುವ ಯೋಜನೆ ಹಾಗೂ ಕಾರ್ಯಕ್ರಮಗಳೇನು?
ಕ್ರೀಡಾ ಕ್ಷೇತ್ರದ ಒಂದು ಸಾವಿರ ಪ್ರತಿಭಾವಂತರನ್ನು ಹುಡುಕಿ ಅವರಿಗೆ ಊಟ, ಪಥ್ಯ, ವಸತಿ, ತರಬೇತಿ, ರಾಷ್ಟ್ರೀಯ- ಅಂತಾ ರಾಷ್ಟ್ರೀಯ ಕ್ರೀಡಾಕೂಟಗಳಿಗೆ ಹೋಗಲು ಆರ್ಥಿಕ ನೆರವು ನೀಡುವ "ಸಹಸ್ರ ಪ್ರತಿಭಾ' ಯೋಜನೆ ರೂಪಿಸಲಾಗಿದೆ. ರಾಜ್ಯ, ಕೇಂದ್ರ, ಕಾರ್ಪೊರೇಟ್‌ ವಲಯದಿಂದಲೂ ನೆರವು ಪಡೆಯಲಾಗಿದೆ. ಶೇ. 75ರಷ್ಟು 19 ವರ್ಷದೊಳಗಿನ ಕ್ರೀಡಾ ಪಟುಗಳಿಗೆ ಆದ್ಯತೆ ನೀಡಲಾಗಿದೆ. ದೇಶದಲ್ಲೇ ಇದು ಮೊದಲು. ಕೇಂದ್ರ ಸರ್ಕಾರವು ನಮ್ಮ ಮಾದರಿ ಅನುಸರಿಸು ತ್ತಿದೆ. ಕ್ರೀಡಾ ಅಕಾ ಡೆಮಿ ಸ್ಥಾಪಿಸಿ 
ಸರ್ಕಾರಿ ಹಾಸ್ಟೆಲ್‌ಗ‌ಳಲ್ಲಿ ಇರುವ ಕ್ರೀಡಾಪಟು ಗಳಿಗೆ ಉತ್ತಮ ತರಬೇತಿ ನೀಡಲು 100 ತರಬೇತುದಾರರನ್ನು ನೇಮಕ ಗೊಳಿಸಲು ಕ್ರಮ ಕೈಗೊಳ್ಳಲಾ ಗಿದೆ. ನಮ್ಮಲ್ಲಿ 300 ತರಬೇತು ದಾರರ ಹುದ್ದೆ ಇದ್ದು 100 ಮಾತ್ರ ಭರ್ತಿಯಾಗಿದೆ. ಇದೀಗ 100 ಭರ್ತಿ ಮಾಡಿ 200ಕ್ಕೆ ಏರಿಸಲಾಗಿದೆ.

ರಾಜ್ಯದ ಕ್ರೀಡಾಂಗಣಗಳ ಸ್ಥಿತಿಗತಿ ಹೇಗಿದೆ?
ರಾಜ್ಯದ 175 ತಾಲೂಕುಗಳ ಪೈಕಿ 141ರಲ್ಲಿ ತಾಲೂಕು ಕ್ರೀಡಾಂಗಣ, 30 ಜಿಲ್ಲೆಗಳಲ್ಲಿ ಜಿಲ್ಲಾ ಕ್ರೀಡಾಂಗಣ, ಈಜುಕೊಳ, ಎಲ್ಲ ವಸತಿ ಶಾಲೆಗಳಲ್ಲಿ ಜಿಮ್‌ ಸ್ಥಾಪನೆ ಮಾಡಲಾಗಿದೆ. ಎಲ್ಲಾ ಕ್ರೀಡಾಂಗಣ ಸಮಿತಿಗಳಿಗೆ ಜಿಲ್ಲಾ ಮಂತ್ರಿಗಳನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಹೀಗಾಗಿ ಅವರು ವಿವಿಧ ಇಲಾಖೆಗಳಿಂದ ಹೆಚ್ಚು ಅನುದಾನ ಪಡೆದುಕೊಳ್ಳಲು ಸಹಾಯವಾಗಿದೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಏಷ್ಯಾದಲ್ಲೇ ಅತ್ಯುತ್ತಮ ಕ್ರೀಡಾಂಗಣಗಳಲ್ಲಿ ಒಂದಾಗಿದೆ.

ಸರ್ಕಾರ ಹೊರುತಪಡಿಸಿ ಖಾಸಗಿ ವಲಯದಿಂದ ಕ್ರೀಡೆಗೆ ಪ್ರೋತ್ಸಾಹ ದೊರೆಯುತ್ತಿದೆಯಾ?
ಖಾಸಗಿ ವಲಯದಿಂದಲೂ ಕ್ರೀಡೆಗೆ ಪ್ರೋತ್ಸಾಹ ಸಿಗಬೇಕು. ಆ ನಿಟ್ಟಿನಲ್ಲಿ ಸರ್ಕಾರವೂ ಹಲವು ಉತ್ತೇಜನಕಾರಿ ಕ್ರಮ ಕೈಗೊಂಡಿದೆ. ಏಕಲವ್ಯ ಕ್ರೀಡಾರತ್ನ ಪ್ರಶಸ್ತಿ ಜತೆಗೆ ಕ್ರೀಡಾಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ಖಾಸಗಿ ಸಂಘ ಸಂಸ್ಥೆಗಳಿಗೆ ತಲಾ 5 ಲಕ್ಷ ರೂ. ಪ್ರಶಸ್ತಿ 10 ಸಂಘ -ಸಂಸ್ಥೆಗಳಿಗೆ ನೀಡಲಾಗುತ್ತಿದೆ.

ಗ್ರಾಮೀಣ ಕ್ರೀಡಾಪಟುಗಳಿಗೆ ಸರ್ಕಾರದ ಕಾರ್ಯಕ್ರಮಗಳೇನು?
ಯುವ ಚೈತನ್ಯ ಯೋಜನೆಯಡಿ ಗ್ರಾಮೀಣ ಕ್ರೀಡಾಪಟುಗಳಿಗೆ ನ್ಪೋರ್ಟ್ಸ್ ಕಿಟ್‌ ನೀಡಲಾಗಿದೆ. ಗ್ರಾಮಾಂತರ ಭಾಗದಲ್ಲೂ ಕ್ರೀಡಾಂಗಣ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗಿದೆ. ಖಾಸಗಿ ವಲಯಕ್ಕೆ ಹೋಗುತ್ತಿದ್ದ ಅನುದಾನ ನಿಲ್ಲಿಸಿ ಸರ್ಕಾರದಿಂದಲೇ ಕ್ರೀಡಾಪಟುಗಳಿಗೆ ಬೇಕಾದ ಸವಲತ್ತು ಒದಗಿಸಲಾಗುತ್ತಿದೆ. ತಾಲೂಕು ಕ್ರೀಡಾಂಗಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.  ದೇವನಹಳ್ಳಿಯಲ್ಲಿ 15 ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಲಾಗಿದೆ.

ಕ್ರೀಡಾ ಹಾಸ್ಟೆಲ್‌ಗ‌ಳಲ್ಲಿ ಸೌಲಭ್ಯ ಹೇಗಿದೆ?
32 ಕ್ರೀಡಾ ಹಾಸ್ಟೆಲ್‌ಗ‌ಳಲ್ಲೂ ಉತ್ತಮ ಮೂಲಸೌಕರ್ಯ, ಆಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ನಿರ್ವಹಣೆ, ಖಾಸಗಿಯವರಿಗೆ ಔಟ್‌ಸೋರ್ಸ್‌ ಕೊಡದೆ ಇಲಾಖೆಯಿಂದಲೇ ನಡೆಸಲಾಗು ತ್ತಿದೆ. ಏಕೆಂದರೆ ಗುತ್ತಿಗೆ ನೀಡಿದರೆ ಲಾಭ ಇಲ್ಲದೆ ಯಾರೂ ಮಾಡುವುದಿಲ್ಲ. ಆಗ, ಕ್ರೀಡಾಪಟುಗಳಿಗೆ ಪೌಷ್ಠಿಕ ಆಹಾರ ಸಮರ್ಪಕವಾಗಿ ಸಿಗದೇ ಹೋಗಬಹುದು ಎಂಬ ಕಾರಣಕ್ಕೆ ಸರ್ಕಾರವೇ ವಹಿಸಿಕೊಂಡಿದೆ.

ಹಾಗಾದರೆ ಕ್ರೀಡಾ ಹಾಸ್ಟೆಲ್‌ಗ‌ಳಲ್ಲಿ ಯಾವುದೇ ಸಮಸ್ಯೆ ಇಲ್ಲವೇ?
ನನಗೆ ಗೊತ್ತಿರುವ ಮಟ್ಟಿಗೆ ಇಲ್ಲ. ಒಂದೊಮ್ಮೆ ಇದ್ದರೂ ಕ್ರೀಡಾ ವಿದ್ಯಾರ್ಥಿಗಳು ನೇರವಾಗಿ ನನಗೆ ದೂರವಾಣಿ ಕರೆ ಮಾಡಿ ತಿಳಿಸಬಹುದು. ಕೆಲವು ದೂರುಗಳು ಬಂದಾಗ ಖುದ್ದು ಗಮನ ನೀಡಲಾಗಿದೆ. ಹೀಗಾಗಿಯೇ ಕ್ರೀಡಾ ಹಾಸ್ಟೆಲ್‌ಗ‌ಳಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಿರ್ದೇಶಕರು ಹಾಗೂ ನನ್ನ ಮೊಬೈಲ್‌ ದೂರವಾಣಿ ಸಂಖ್ಯೆಯ ಫ‌ಲಕ ಹಾಕಲಾಗಿದೆ. ದೂರು ನೇರ ಸಲ್ಲಿಸಬಹುದು. ಇದರ ಜತೆಗೆ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿದ್ದೇವೆ. ಸಹಾಯಕ ನಿರ್ದೇಶಕನಿಂದ ನಿರ್ದೇಶಕ, ಸಚಿವರವರೆಗೆ ಆ ಗ್ರೂಪ್‌ನಲ್ಲಿರುತ್ತಾರೆ. ಎಲ್ಲೆಲ್ಲಿ ಏನಾಗುತ್ತಿದೆಯೋ ತಕ್ಷಣ ಮಾಹಿತಿ ಬರುತ್ತದೆ. ಹೀಗಾಗಿ, ತಕ್ಷಣ ಸಮಸ್ಯೆಗೆ ಸ್ಪಂದಿಸುವ ಕೆಲಸ ಆಗುತ್ತಿದೆ.

ರಾಜ್ಯದ ಕ್ರೀಡಾಪಟುಗಳ ಸಾಧನೆ ಹೇಗಿದೆ?
ಉತ್ತಮವಾಗಿದೆ. ಈ ಸಲ ಖೇಲೋ ಇಂಡಿಯಾದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ ಬಂದಿದೆ. 

ಕ್ರೀಡಾ ಇಲಾಖೆಗೆ ಬಜೆಟ್‌ ಅನುದಾನ ಹೇಗಿದೆ?
ಕ್ರೀಡಾ ಇಲಾಖೆ ಬಜೆಟ್‌ ನಾನು ಮಂತ್ರಿಯಾಗುವಾಗ 145 ಕೋಟಿ ರೂ. ಇತ್ತು. ಈಗ 285 ಕೋಟಿ ರೂ.ಗೆ ಏರಿದೆ. ಎರಡು ವರ್ಷಗಳಲ್ಲಿ 537 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕಳೆದ ಬಾರಿ ಬಜೆಟ್‌ನಲ್ಲಿ ಘೋಷಿಸಿದ್ದ ಎಲ್ಲ ಕಾಮಗಾರಿಗಳ ಟೆಂಡರ್‌ ಅಂತಿಮಗೊಂಡಿದೆ.  

ಮೀನುಗಾರಿಕೆ ಇಲಾಖೆ ಹೊಣೆಗಾರಿಕೆಯೂ ನಿಮ್ಮದೇ. ಅಲ್ಲಿನ ಸಾಧನೆ ಹೇಗಿದೆ?
ನಾನು ಸಚಿವನಾದ ನಂತರ 1000 ಮೀನುಗಾರರಿಗೆ ಉಚಿತವಾಗಿ ದೃಢತೆ ಸಾಧ್ಯತಾ ಪ್ರಮಾಣ ಪತ್ರ ನೀಡಿ ಬೋಟ್‌ ನಿರ್ವಹಿಸಲು ಅನುವು ಮಾಡಿಕೊಟ್ಟಿದ್ದೇವೆ. ಮೊದಲು ದೃಢತೆ ಪ್ರಮಾಣ ಪತ್ರ 5-10 ಲಕ್ಷ ರೂ.ಗೆ ಮಾರಾಟವಾಗುತ್ತಿತ್ತು. ಅದಕ್ಕೆ ಕಡಿವಾಣ ಹಾಕಲಾಗಿದೆ. ಹೊಸದಾಗಿ ಬೋಟ್‌ ಮಾಡಿದವರಿಗೆ ಡೀಸೆಲ್‌ ಸಬ್ಸಿಡಿ ಕಾರ್ಡ್‌ ಕೊಟ್ಟಿದ್ದೇವೆ.

ಮೀನುಗಾರ ಮಹಿಳೆಯರಿಗೆ ಯಾವ ಕಾರ್ಯಕ್ರಮ ರೂಪಿಸಲಾಗಿದೆ?
ಮೀನುಗಾರ ಮಹಿಳೆಯರಿಗೆ ಶೇ.2 ರ ಬಡ್ಡಿ ದರದಲ್ಲಿ 50 ಸಾವಿರ ರೂ.ವರೆಗೆ 30 ಸಾವಿರ ಮಹಿಳೆಯರಿಗೆ ಸಾಲ ನೀಡಲಾಗಿದೆ. ಹಿಂದಿನ ಸಾಲದ ಬಡ್ಡಿ ಮನ್ನಾ ಮಾಡಲಾಗಿದೆ. ಸಮುದ್ರದಲ್ಲಿ ಮರಣ ಹೊಂದಿದ ಮೀನುಗಾರರಿಗೆ ಪರಿಹಾರ 2 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಲಾಗಿದೆ.

ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಯಾವ ಕ್ರಮ ಕೈಗೊಳ್ಳಲಾಗಿದೆ?
ಈ ಹಿಂದೆ ದೊಡ್ಡ ಜಲಾಶಯಗಳಲ್ಲಿ ಮೀನುಗಾರಿಕೆ ಟೆಂಡರ್‌ ಬಂಡವಾಳಶಾಹಿಗಳು ಪಡೆಯುತ್ತಿದ್ದರು. ಆದರೆ, ಅದನ್ನು ತಪ್ಪಿಸಿ ಅಲ್ಲಿನ 500 ಮೀನುಗಾರರಿಗೆ ಲೈಸೆನ್ಸ್‌ ಕೊಡುವ ಪದ್ಧತಿ ಜಾರಿಗೊಳಿಸಲಾಗಿದೆ. ಕೆಆರ್‌ಎಸ್‌ ಜಲಾಶಯದಲ್ಲಿ 30 ವರ್ಷಗಳಿಂದ ಮೀನುಗಾರರಿಗೆ ಲೈಸನ್ಸ್‌ ಕೊಡಬೇಕು ಎಂಬ ಬೇಡಿಕೆಯಿತ್ತು. ವರ್ಷಕ್ಕೆ 3000 ಲೈಸನ್ಸ್‌ ಶುಲ್ಕ ಕಟ್ಟಿದರೆ ಸಾಕು. 

ಹಳೇ ಮೈಸೂರು ಭಾಗದಲ್ಲಿ ಮೀನು ಕೃಷಿಗೆ ಯಾವ ಪ್ರೋತ್ಸಾಹ ದೊರೆಯುತ್ತಿದೆ? 
ಉತ್ತರ ಕರ್ನಾಟಕ ಭಾಗದಲ್ಲಿ ಕೃಷಿ ಮಾಡಲು ಸಾಧ್ಯವಾಗದ ಸವಳು ಜವಳು ಭೂಮಿಯಲ್ಲಿ ಮೀನುಗಾರಿಕೆಗೆ ಯೋಜನೆ ರೂಪಿಸಲಾಗಿದೆ. ಜೇವರ್ಗಿಯಲ್ಲಿ ಅದು ಆರಂಭವಾಗಿದ್ದು ವರ್ಷಕ್ಕೆ ಒಂದು ಎಕರೆಗೆ ಕಬ್ಬು ಬೆಳೆಸಿದರೆ 25 ಸಾವಿರ ರೂ. ಲಾಭ ಮಾಡುತ್ತಿದ್ದ ರೈತರು ಇಂದು ಮೀನು ಸಾಕಾಣಿಕೆಯಿಂದ ಒಂದೂವರೆ ಲಕ್ಷ ಲಾಭ ಪಡೆಯುತ್ತಿದ್ದಾರೆ.

ಇತ್ತೀಚೆಗೆ ನೀವು ಬಿಜೆಪಿ ಸೇರಿ¤àರಿ ಅಂತ ವದಂತಿ ಹರಿದಾಡುತ್ತಿದೆಯಲ್ಲ?
ನನ್ನ ಜಾತಕದಲ್ಲಿ ಕೋದಂಡರಾಹು ದೆಸೆ (ಯೋಗ) ನಡೆಯುತ್ತಿದೆ. ಈ ಯೋಗ ಹೊಂದಿರುವ ವ್ಯಕ್ತಿಗಳು ಸದಾ ಸುದ್ದಿಯಲ್ಲಿರುತ್ತಾರೆ. ಅದರ ಬಲಿಪಶು ನಾನಾಗಿದ್ದೇನೆ. ಉಡುಪಿ ಕ್ಷೇತ್ರದಲ್ಲಿ ನನ್ನ ಸಮುದಾಯದವರು ಬಿಜೆಪಿಯಲ್ಲಿದ್ದಾರೆ. ಅವರು ನಾನು ಬಿಜೆಪಿಗೆ ಬರಬೇಕು ಎಂದು ಆಸೆಪಡುತ್ತಿದ್ದಾರೆ. ಆದರೆ, ನನಗೆ ಆ ಆಸೆ ಇಲ್ಲ. ಬೇರೆ ಪಕ್ಷದವರಿಗೆ ನನ್ನನ್ನು ಕರೆಸಿಕೊಳ್ಳಬೇಕು ಎಂಬ ಆಸೆ ಇರುವುದರಿಂದಲೇ ಸದಾ ಸುದ್ದಿಯಾಗುತ್ತಿದೆ.

ಅಂತಹ ಸುದ್ದಿ ಹರಡಲು ಕಾರಣವೇನು?
ಸುದ್ದಿಯಲ್ಲಿ ಎರಡು ವಿಧ ಇದೆ. ಒಂದು ಸತ್ಯ ಸುದ್ದಿ, ಇನ್ನೊಂದು ಸುಳ್ಳು ಸುದ್ದಿ. ಅದನ್ನು ತಪ್ಪಿಸುವುದು ನಮ್ಮ ಕೈಯ್ಯಲ್ಲಿ ಇಲ್ಲ. ಈ ವಿಚಾರದಲ್ಲಿ ನಾವು ಅಸಹಾಯಕರು. ಹಾಗೆಂದು ಇದರಿಂದ ನನಗೇನೂ ತೊಂದರೆ ಆಗಿಲ್ಲ. ಏಕೆಂದರೆ, ನನ್ನಲ್ಲಿ ಕಾಂಗ್ರೆಸ್‌ ತೊರೆಯುವ ಬಗ್ಗೆಯಾಗಲೀ, ಬಿಜೆಪಿ ಸೇರುವ ಬಗ್ಗೆಯಾಗಲೀ ಯಾವುದೇ ಗೊಂದಲವಿಲ್ಲ.

ಇತ್ತೀಚೆಗೆ ಕರಾವಳಿ ಭಾಗದಲ್ಲಿ ವಾತಾವರಣ ಸ್ವಲ್ಪ ಬಿಗುವಾಗಿದೆಯಲ್ಲಾ?
ಕರಾವಳಿ ಜಿಲ್ಲೆಯ ಸಾಕಷ್ಟು ಕಡೆ ಕೋಮು ಸಂಘರ್ಷದಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದರೂ ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ಮೇಲೆ ಉಡುಪಿ ಜಿಲ್ಲೆಯಲ್ಲಿ ಇದು ವರೆಗೆ ಒಂದೇ ಒಂದು ಕೋಮು ಸಂಘರ್ಷ ನಡೆದಿಲ್ಲ. ಕಾನೂನು ಸುವ್ಯವಸ್ಥೆಯಲ್ಲಿ ನಮ್ಮ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಕಾರಣ, ತಾರತಮ್ಯವಿಲ್ಲದ ಆಡಳಿತ. ಕಾನೂನು ಕೈಗೆತ್ತಿಕೊಳ್ಳುವವರು ತಮ್ಮನ್ನು ರಕ್ಷಣೆ ಮಾಡುವವರು ಇ ದ್ದಾರೆ ಎಂದು ಗೊತ್ತಾದರೆ ಕೃತ್ಯ ಮುಂದು ವರಿಸುತ್ತಾರೆ. ನಾಯಕ ಬೆಂಬಲಿಸುವುದಿಲ್ಲ ಎಂದಾಗ ಸುಮ್ಮನಾಗುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಇಂಥವರನ್ನು ರಕ್ಷಣೆ ಮಾಡುವುದಿಲ್ಲ. ಅನೈತಿಕ ಚಟುವಟಿಕೆ, ಗುಂಡಾಗಿರಿ ಮಾಡುವುವರು, ಕಾನೂನು ಕೈಗೆತ್ತಿಕೊಳ್ಳುವವರು ಯಾವ ಪಕ್ಷಕ್ಕೇ ಸೇರಿರಲಿ, ಅವರು ಕಾಂಗ್ರೆಸ್‌ನವರೇ ಆಗಲಿ ಅಂಥವರನ್ನು ಬೆಂಬಲಿಸುವುದಿಲ್ಲ.  ಹೀಗಾಗಿ ಕಾನೂನು ಸುವ್ಯವಸ್ಥೆಯಲ್ಲಿ ಉಡುಪಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ.

ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಏನು ಹೇಳ್ತಿರಿ?
ಸಿಎಂ ಸಿದ್ದರಾಮಯ್ಯ ಅವರು ಸಮತೋಲಿತ ಅಭಿವೃದ್ಧಿಗೆ ಆದ್ಯತೆ ಕೊಡುತ್ತಾರೆ. ಎಲ್ಲಾ ಇಲಾಖೆಗಳನ್ನೂ ಸಮನಾಗಿ ಪರಿಗ ಣಿಸಿ ಅಭಿವೃದ್ಧಿ ಮಾಡುತ್ತಿದ್ದಾರೆ. ಅಭಿವೃದ್ಧಿಯನ್ನು ಯಾವುದೇ ವರ್ಗಕ್ಕೆ ಸೀಮಿತಗೊಳಿಸದೆ ಶೋಷಿತ ವರ್ಗಕ್ಕೂ ಅನುಕೂಲ ಮಾಡಿಕೊಡುತ್ತಿದ್ದಾರೆ. ಹಾಗೆಂದು ಬೇರೆಯವರಿಂದ ಕಿತ್ತು ಕೊಂಡು ಶೋಷಿತ ವರ್ಗಕ್ಕೆ ನೀಡುತ್ತಿದ್ದಾರೆ ಎಂದಲ್ಲ, ಅವರ ಪಾಲನ್ನು ಸರಿಯಾಗಿ ನೀಡುತ್ತಿದ್ದಾರೆ. ಉದಾಹರಣೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆಯಡಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ 86 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದು ಅವರ ಪಾಲೇ ಹೊರತು ಇತರೆ ಸಮುದಾಯದ ಹಣವಲ್ಲ.

ಸರ್ಕಾರ ಅಲ್ಪಸಂಖ್ಯಾತರ ಓಲೈಸುತ್ತಿದೆ ಅಂತಾರಲ್ಲಾ?
ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ದೇವಸ್ಥಾನಗಳಿಗೆ ನೀಡುತ್ತಿದ್ದ ತಸ್ತೀಕ್‌ ಮೊತ್ತ 15 ಸಾವಿರ ರೂ. ಇತ್ತು. ಸಿಎಂ ಸಿದ್ದರಾಮಯ್ಯ ಅವರು ಅದನ್ನು 15 ಸಾವಿರ ರೂ.ನಿಂದ 48 ಸಾವಿರ ರೂ.ಗೆ ಹೆಚ್ಚಿಸಿದರು. ಅವರು ಹಿಂದೂ ವಿರೋಧಿ, ದೇವಸ್ಥಾನಗಳ ವಿರೋಧಿ ಆಗಿದ್ದರೆ ತಸ್ತೀಕ್‌ ಮೊತ್ತವನ್ನು ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಿಸುತ್ತಿದ್ದರೇ? ಮುಖ್ಯಮಂತ್ರಿ ಗಳನ್ನು ಟೀಕೆ ಮಾಡುವವರು ಇದನ್ನು ಅರ್ಥಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳು ದೇವಸ್ಥಾನ ಮಾತ್ರವಲ್ಲ, ಚರ್ಚ್‌ ಗಳು, ಮಸೀದಿಗಳಲ್ಲಿ ಶಾದಿ ಮಹಲ್‌ ನಿರ್ಮಾಣ ಮುಂತಾದ ಎಲ್ಲಾ ಧರ್ಮೀಯರಿಗೂ ಅನುಕೂಲ ಮಾಡಿಕೊಡುತ್ತಿದ್ದಾರೆ. ಯಾರನ್ನೂ ನಿರ್ಲಕ್ಷ್ಯ ಮಾಡಿಲ್ಲ.

ನಾನು 24 ಗಂಟೆ ಜನಸೇವಕ
ಉದ್ಯಮ ನನ್ನ ಪತ್ನಿ ನೋಡಿಕೊಳ್ಳುತ್ತಾರೆ. ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹೀಗಾಗಿ, ನಾನು ದಿನದ 
24 ಗಂಟೆ ಜನಸೇವಕ. ರಾಜಕಾರಣ ಎಂಬುದು ನನ್ನ ರಕ್ತದಲ್ಲೇ ಇದೆ. ನಮ್ಮ ತಂದೆ ಶಾಸಕರಾಗಿದ್ದರು, ತಾಯಿ ಮನೋರಮಾ ಮಧ್ವರಾಜ್‌ ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಕೆಲಸ ಮಾಡಿದ್ದಾರೆ. ನಮ್ಮದು ರಾಜಕೀಯ ಹಾಗೂ ಜನಸೇವೆ ಹಿನ್ನೆಲೆಯ ಕುಟುಂಬ.

ಸಂದರ್ಶನ
ಎಸ್‌.ಲಕ್ಷ್ಮಿನಾರಾಯಣ/ ಪ್ರದೀಪ್‌ಕುಮಾರ್‌ ಎಂ.


Trending videos

Back to Top