ಪೊಲೀಸರ ಮೇಲೆ ಕಲ್ಲು ಎಸೆದ ಕಾಶ್ಮೀರದ ಫುಟ್ಬಾಲ್ ಆಟಗಾರ್ತಿ
Team Udayavani, May 11, 2017, 9:56 AM IST
ಕಾಶ್ಮೀರ: ಇತ್ತೀಚೆಗೆ ಕಾಶ್ಮೀರದಲ್ಲಿ ಪೊಲೀಸರ ಮೇಲೆ, ಸೈನಿಕರ ಮೇಲೆ ವಿದ್ಯಾರ್ಥಿಗಳು ಕಲ್ಲು ಎಸೆದಿದ್ದು, ದೊಡ್ಡ ಸುದ್ದಿಯಾಗಿತ್ತು. ಅದೇ ರೀತಿ ವಿದ್ಯಾರ್ಥಿಗಳಿಗೆ ಕಲ್ಲು ಎಸೆಯಲು ಹಣ ನೀಡಲಾಗುತ್ತಿದೆ ಎನ್ನುವ ವಿಷಯವೂ ಬೆಳಕಿಗೆ ಬಂದಿತ್ತು. ಆದರೆ ಪೊಲೀಸರ ಮೇಲೆ ಕಲ್ಲು ಎಸೆದ ಕಾಶ್ಮೀರ ಯುವತಿ ಅಫÏನ್ ಆಶಿಕ್ ಕಥೆ ಭಿನ್ನವಾಗಿದೆ.
12 ರಿಂದ 22 ವರ್ಷದೊಳಗಿನ 10 ರಿಂದ 15 ವಿದ್ಯಾರ್ಥಿನಿಯರು ಫುಟ್ಬಾಲ್ ಅಭ್ಯಾಸ ನಡೆಸುತ್ತಿದ್ದರು. ಅದಾಗಲೇ ಪಕ್ಕದ ಗಲ್ಲಿಯಲ್ಲಿ ಗಲಾಟೆ, ಕಲ್ಲು ತೂರಾಟ ನಡೆಯುತ್ತಿರುವುದು ವಿದ್ಯಾರ್ಥಿಗಳಿಗೆ ತಿಳಿದುಬಂದಿದೆ. ತತ್ಕ್ಷಣ ಆಶಿಕ್ ಸೇರಿದಂತೆ ಎಲ್ಲ ಯುವತಿಯರು ಮನೆಗೆ ಹೊರಡುತ್ತಿದ್ದರು. ಆಗ ಅಡ್ಡ ಬಂದ ಪೊಲೀಸ್ ಯುವತಿಯರನ್ನು ವಿಚಾರಿಸಿದ್ದಾನೆ. ಅದರಲ್ಲಿ ಒಬ್ಬ ಯುವತಿಗೆ ಕಪಾಳಮೋಕ್ಷ ಮಾಡಿದ್ದಾನೆ. ತತ್ಕ್ಷಣ ಕ್ರುದ್ಧರಾದ ಆಶಿಕ್, ನಾವು ಮಹಿಳೆಯರು ಹಾಗಂತ ಹೇಡಿಗಳಲ್ಲ ಎಂದು ಎಚ್ಚರಿಸಿದ್ದಾರೆ. ವಾದ ಮತ್ತಷ್ಟು ತಾರಕಕ್ಕೇರಿ ವಿದ್ಯಾರ್ಥಿನಿಯರು ಕಲ್ಲು ಎಸೆಯಲು ಆರಂಭಿಸಿದ್ದಾರೆ.