ಅಭಿಮಾನಿಗೆ ಅನ್ಯದೇಶಕ್ಕೆ ಹೋಗಿ ಎಂದು ಬೈದ ಕೊಹ್ಲಿ!
Team Udayavani, Nov 8, 2018, 6:40 AM IST
ನವದೆಹಲಿ: ಸದ್ಯ ವಿಶ್ರಾಂತಿಯಲ್ಲಿರುವ ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಹೊಸತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಸಮಕಾಲೀನ ಕ್ರಿಕೆಟ್ನ ಸರ್ವಶ್ರೇಷ್ಠ ಬ್ಯಾಟ್ಸ್ಮನ್ ಎಂದು ಹೊಗಳಿಸಿಕೊಂಡಿರುವ ವಿರಾಟ್ ಮುಂದಿನ ಆಸ್ಟ್ರೇಲಿಯ ಪ್ರವಾಸಕ್ಕೆ ಸಜ್ಜಾಗುತ್ತಿದ್ದಾರೆ. ಇದರ ನಡುವೆ ಸಾಮಾಜಿಕ ತಾಣದಲ್ಲಿ ಅಭಿಮಾನಿಯೊಬ್ಬರಿಗೆ ಉತ್ತರ ಕೊಡುವ ಭರದಲ್ಲಿ, ದೇಶಬಿಟ್ಟು ಹೋಗಿ ಎನ್ನುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬರು, ಕೊಹ್ಲಿಯನ್ನು ಟೀಕಿಸಿದ್ದರು. ಕೊಹ್ಲಿ ಅಂತಹ ಆಟಗಾರನೇನಲ್ಲ. ಅವರನ್ನು ಅಗತ್ಯಕ್ಕಿಂತ ಹೆಚ್ಚಾಗಿ ಹೊಗಳಲಾಗಿದೆ. ನನಗೆ ಈ ಭಾರತೀಯರಿಗಿಂತ ಆಸ್ಟ್ರೇಲಿಯ, ಇಂಗ್ಲೆಂಡ್ ಬ್ಯಾಟ್ಸ್ಮನ್ಗಳೇ ಇಷ್ಟ ಎಂದಿದ್ದರು. ಇತ್ತೀಚೆಗೆ ತಮ್ಮದೇ ಆ್ಯಪ್ ಬಿಡುಗಡೆ ಮಾಡಿರುವ ಕೊಹ್ಲಿ, ಅದರಲ್ಲಿ ಪ್ರಕಟಿಸಿದ ವಿಡಿಯೊದಲ್ಲಿ ಈ ಅಭಿಮಾನಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.
“ನೀವು ಭಾರತದಲ್ಲಿ ಇರಬೇಕೆಂದು ನನಗನಿಸುವುದಿಲ್ಲ. ನೀವು ಭಾರತೀಯರಾಗಿದ್ದುಕೊಂಡು ಇನ್ನೊಂದು ದೇಶವನ್ನು ಇಷ್ಟಪಡುತ್ತೀರೆಂದರೆ ಭಾರತದ ಬದಲು ಬೇರೆ ದೇಶಗಳಿಗೆ ಹೋಗುವುದು ಒಳ್ಳೆಯದು’ ಎಂದು ಕಟುವಾಗಿ ನುಡಿದಿದ್ದಾರೆ. ಇದು ಟೀಕೆ, ಪ್ರತಿಟೀಕೆಗಳಿಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್