CONNECT WITH US  

ವಿಶ್ವಕಪ್‌ ಹಾಕಿ: ಕಾಂಗರೂಗಳಿಗೆ ಕಂಚು

ಕಳೆದೆರಡು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ಈ ಬಾರಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿದೆ. ರವಿವಾರ ನಡೆದ ಸ್ಪರ್ಧೆಯಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ಕಾಂಗರೂ ಪಡೆ 8-1 ಗೋಲುಗಳಿಂದ ಇಂಗ್ಲೆಂಡನ್ನು ಮಣಿಸಿತು.

ಆಸ್ಟ್ರೇಲಿಯ ಪರ ಟಾಮ್‌ ಕ್ರೆಗ್‌ ಹ್ಯಾಟ್ರಿಕ್‌ ಗೋಲು ಹೊಡೆದು ಮಿಂಚಿದರು. ಜೆರೆಮಿ ಹೇವಾರ್ಡ್‌ 2 ಗೋಲು, ಬ್ಲೇಕ್‌ ಗೋವರ್, ಟ್ರೆಂಟ್‌ ಮಿಟ್ಟನ್‌ ಮತ್ತು ಟಿಮ್‌ ಬ್ರ್ಯಾಂಡ್‌ ತಲಾ ಒಂದೊಂದು ಗೋಲು ಬಾರಿಸಿದರು. ಇಂಗ್ಲೆಂಡಿನ ಏಕೈಕ ಗೋಲು 45ನೇ ನಿಮಿಷದಲ್ಲಿ ಬ್ಯಾರಿ ಮಿಡ್ಲ್ಟನ್‌ ಅವರಿಂದ ದಾಖಲಾಯಿತು.

Trending videos

Back to Top