ಸೌರಶಕ್ತಿ ಉತ್ಪಾದನೆ 6 ಸಾವಿರ ಮೆ.ವ್ಯಾ.ಗೆ ಹೆಚ್ಚಳ


Team Udayavani, Jan 11, 2017, 3:45 AM IST

10-SP-8.jpg

ಬೆಂಗಳೂರು: ಸೌರ ವಿದ್ಯುತ್‌ ಉತ್ಪಾದನೆಯ ಗುರಿ ಹೆಚ್ಚಿಸಲು ಹಾಗೂ ಸೌರ ವಿದ್ಯುತ್‌ ಉತ್ಪಾದನೆಗೆ ಅವಕಾಶವಿರುವ ರಾಜ್ಯದ ಪ್ರತಿ
ತಾಲೂಕಿನಲ್ಲೂ ಸೌರ ವಿದ್ಯುತ್‌ ಉತ್ಪಾದನಾ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹಾಲಿ ಚಾಲ್ತಿಯಲ್ಲಿರುವ
“ಕರ್ನಾಟಕ ಸೌರ ವಿದ್ಯುತ್‌ ನೀತಿ: 2014-21’ರ ನಿಯಮಗಳಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಲು ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ 
ತೆಗೆದುಕೊಳ್ಳಲಾಗಿದೆ ಎಂದು ಸಭೆ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು. ಸೌರ ವಿದ್ಯುತ್‌ ನೀತಿಯಡಿ 2021ರ ಮಾರ್ಚ್‌ ವೇಳೆಗೆ 2 ಸಾವಿರ ಮೆ. ವ್ಯಾ ವಿದ್ಯುತ್‌ ಉತ್ಪಾದನೆ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಅದನ್ನು
6 ಸಾವಿರ ಮೆ.ವ್ಯಾ. ಗೆ ಹೆಚ್ಚಿಸಲು ನಿಯಮಗಳಲ್ಲಿ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಅದೇ ರೀತಿ ಈಗಿರುವ ನೀತಿ ಅನ್ವಯ ಕೆಲ ತಾಲೂಕುಗಳಲ್ಲಿ ಮಾತ್ರ ಸೌರ ವಿದ್ಯುತ್‌ ಉತ್ಪಾದನೆಯ ಹೆಚ್ಚು ಪ್ರಸ್ತಾವನೆಗಳು ಬರುತ್ತಿದ್ದವು. ಅಲ್ಲದೇ ಉತ್ಪಾದನಾ ಮಿತಿಯು ನಿಗದಿ ಇರಲಿಲ್ಲ. ಆದ್ದರಿಂದ ಸೌರ ವಿದ್ಯುತ್‌ ಉತ್ಪಾದನೆಗೆ ಅವಕಾಶವಿರುವ ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ವಿದ್ಯುತ್‌
ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಮತ್ತು ಉತ್ಪಾದನಾ ಮಿತಿಯನ್ನು 200 ಮೆ.ವ್ಯಾ.
ನಿಗದಿಪಡಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು. 

ಅದೇ ರೀತಿ ಸೌರ ವಿದ್ಯುತ್‌ ನೀತಿಯಡಿ ಇಂಧನ ಇಲಾಖೆಯಿಂದ ಸ್ಥಾಪಿಸಲು ಉದ್ದೇಶಿಸಲಾಗಿದ್ದ “ಭೂ ಬ್ಯಾಂಕ್‌’ (ಲ್ಯಾಂಡ್‌ ಬ್ಯಾಂಕ್‌) ಪ್ರಸ್ತಾಪ ಕೈ ಬಿಡಲು ತೀರ್ಮಾನಿಸಲಾಗಿದೆ. ಜೊತೆಗೆ ಸೌರ ವಿದ್ಯುತ್‌ ಕ್ಷೇತ್ರದಲ್ಲಿ ಸಂಶೋಧನೆ, ಅವಿಷ್ಕಾರ, ಕೌಶಲ್ಯ ಅಭಿವೃದ್ದಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ರಾಜ್ಯ ಮಟ್ಟದ “ಸೋಲಾರ್‌ ಎನರ್ಜಿ ಸೆಂಟರ್‌ ಆಫ್ ಎಕ್ಸಲೆನ್ಸ್‌ ಆ್ಯಂಡ್‌ ಇನ್‌ಕ್ಯೂಬೆಷನ್‌
ಸೆಂಟರ್‌’ ಸ್ಥಾಪನೆಗೆ ಅವಕಾಶ ಆಗುವಂತೆ ಈಗಿರುವ ನೀತಿಯ ನಿಮಯಗಳಲ್ಲಿ ತಿದ್ದು ಪಡಿ ತರಲು ನಿರ್ಧರಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು. 

550 ಪಶು ವೈದ್ಯರ ನೇಮಕ: ಪಶು ವೈದ್ಯಕೀಯ ಇಲಾಖೆಯ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 100 ಬ್ಯಾಕ್‌ಲಾಗ್‌ ಹುದ್ದೆಗಳು ಹಾಗೂ ಪಶು ವೈದ್ಯರು ಸೇರಿದಂತೆ 550 ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಅರ್ಹತೆ ಹಾಗೂ ಮೀಸಲಾತಿ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳುವ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಗದಗ ಜಿಲ್ಲೆಯ ನರಗುಂದದ ಸರ್ಕಾರಿ ಇಂಜಿನಿಯರ್‌ ಕಾಲೇಜು ಕಟ್ಟಡ ನಿರ್ಮಾಣಕ್ಕೆ 58 ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕರ್ನಾಟಕ ರಾಜ್ಯ ಹಣಕಾಸು ನಿಗಮಕ್ಕೆ 75 ಕೋಟಿ ರೂ. ಶೇರು ಬಂಡವಾಳ ಕೊಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಜಯಚಂದ್ರ ತಿಳಿಸಿದರು.

ಪೊಲೀಸರ ಮನೆಗೆ 2272 ಕೋಟಿ: 
ಪೊಲೀಸ್‌ ಗೃಹ-2020 ಯೋಜನೆಯಡಿ 10 ಸಾವಿರ ವಸತಿಗೃಹಗಳ ನಿರ್ಮಾಣಕ್ಕೆ 1,818 ಕೋಟಿ ರೂ. ವೆಚ್ಚದ ಯೋಜನೆ
ರೂಪಿಸಲಾಗಿತ್ತು. ಆದರೆ, ಹೆಚ್ಚುವರಿ ಅನುದಾನದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಯೋಜನಾ ವೆಚ್ಚವನ್ನು 2,272.03 ಕೋಟಿ 
ರೂ. ಹೆಚ್ಚಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಕಾರಾಗೃಹವನ್ನು ಕೇಂದ್ರ ಕಾರಾಗೃಹವನ್ನಾಗಿ ಘೋಷಿಸಲು ಅಗತ್ಯವಿರುವ ವಿವಿಧ 134 ಹುದ್ದೆಗಳ ಭರ್ತಿ ಹಾಗೂ 18 ವಾಹನಗಳ ಖರೀದಿಗೆ ಸಚಿವ ಸಂಪುಟ ಅನುಮತಿ ನೀಡಿದೆ.

ಟೋಲ್‌ ರಸ್ತೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ-ಕೆಂಪಾಪುರ ರಾಜ್ಯ ಹೆದ್ದಾರಿ 96ರಲ್ಲಿ ವಿಜಯಪುರ ಹಾಗೂ
ವೇಮಗಲ್‌ ಮಾರ್ಗವಾಗಿ ದೇವನ ಹಳ್ಳಿಯಿಂದ ಕೋಲಾರದವರೆಗೆ 49 ಕಿ.ಮೀ ಉದ್ದದ ಟೋಲ್‌ ರಸ್ತೆಯನ್ನು 148 ಕೋಟಿ
ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. 

195 ಸೇತುವೆಗಳ ನಿರ್ಮಾಣ 
ಬೆಂಗಳೂರು: ರಾಜ್ಯದ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಮುಂದಿನ ಮೂರು ಆರ್ಥಿಕ ವರ್ಷಗಳಲ್ಲಿ ರಾಜ್ಯ ರಸ್ತೆ
ಅಭಿವೃದ್ದಿ ನಿಗಮದಿಂದ 1,395.58 ಕೋಟಿ ರೂ. ವೆಚ್ಚದಲ್ಲಿ ಒಟ್ಟು 195 ಸೇತುವೆಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸಚಿವ ಸಂಪುಟದ ಆಡಳಿತಾತ್ಮಕ ಅನುಮೋದ ನೆಯಂತೆ 2017-18ನೇ ಆರ್ಥಿಕ ವರ್ಷ ದಲ್ಲಿ 350 ಕೋಟಿ ರೂ. 2018-19ನೇ ಸಾಲಿನಲ್ಲಿ 450 ಕೋಟಿ ರೂ. ಹಾಗೂ 2019-20ರಲ್ಲಿ 495.98 ಕೋಟಿ ರೂ. ಗಳಂತೆ ಒಟ್ಟು 1,395.58 ಕೋಟಿ ರೂ. ವೆಚ್ಚ ಮಾಡಲಾಗುವುದು. ರಾಜ್ಯದ ಪ್ರಮುಖ ರಸ್ತೆಗಳಲ್ಲಿ ನೆಡುತೋಪು ಅಭಿವೃದ್ದಿಗೆ ರಸ್ತೆ ನಿರ್ಮಾಣದ ಒಟ್ಟು ಯೋಜನೆಯಲ್ಲಿ ಶೇ.1ರಷ್ಟು ಉಪಕ ರವನ್ನು ಸಂಗ್ರಹಿಸಿ ಅಭಿವೃದ್ದಿಪಡಿಸಲು ರಾಜ್ಯ ರಸ್ತೆ ಅಭಿವೃದ್ದಿ ನಿಗಮಕ್ಕೆ ಸಚಿವ ಸಂಪುಟ ಅನುಮತಿ ನೀಡಿದೆ.

ಐಟಿಐ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಶೂ-ಸಾಕ್ಸ್‌ 

ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಐಟಿಐಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 10,380 ಅಭ್ಯರ್ಥಿಗಳಿಗೆ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯ ಉಳಿಕೆ ಅನುದಾನದಲ್ಲಿ 10.22 ಕೋಟಿ ರೂ. ವೆಚ್ಚದಲ್ಲಿ ಉಚಿತವಾಗಿ ಶೂ ಹಾಗೂ ಸಾಕ್ಸ್‌ಗಳನ್ನು ವಿತರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದೇ ರೀತಿ 47.84 ಕೋಟಿ ರೂ. ವೆಚ್ಚದಲ್ಲಿ ಟೂಲ್‌ಕಿಟ್‌ ಗಳನ್ನು ವಿತರಿಸುವ ಪ್ರಸ್ತಾವನೆಗೆ ಸಂಪುಟ ಸಭೆ ಅನುಮೋದನೆ ಕೊಟ್ಟಿದೆ. 

ನಳಂದ ವಿವಿ ಸ್ಥಾಪನೆಗೆ 25 ಎಕರೆ ಜಮೀನು
ಬೆಂಗಳೂರು: ನಳಂದ ವಿಶ್ವವಿದ್ಯಾಲಯ ಸ್ಥಾಪನೆಗೆ ಚಾಮರಾಜನಗರದ ಇಂಟರ್‌ ನ್ಯಾಷನಲ್‌ ಬುದ್ದಿಸ್ಟ್‌ ಮಾಂಕ್ಸ್‌ ಚಾರಿಟೆಬಲ್‌ ಟ್ರಸ್ಟ್‌ ಇವರಿಗೆ ಚಾಮರಾಜನಗರ ಜಿಲ್ಲೆ ಉತ್ತುವಳ್ಳಿ ಗ್ರಾಮದ ಸರ್ವೆ ನಂಬರ್‌ 117ರಲ್ಲಿ ಇರುವ 464.36 ಎಕರೆ ಪೈಕಿ 25 ಎಕರೆ ಗೋಮಾಳ ಜಮೀನು ಮಂಜೂರು ಮಾಡಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

133 ಮಿನಿಬಸ್‌ಗಳ ಖರೀದಿ
ಬೆಂಗಳೂರು: ನಗರ ಪ್ರದೇಶಗಳ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನರ್ಮ್-2 ಯೋಜನೆಯಡಿ 32.23 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಿನಿ ಬಸ್‌ಗಳ ಖರೀದಿಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. 133 ಮಿನಿ ಬಸ್‌ಗಳ ಖರೀದಿಗೆ ಒಟ್ಟು 32.23 ಕೋಟಿ ರೂ. ವೆಚ್ಚ ಆಗಲಿದ್ದು, ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲು 60:40 ಇರಲಿದೆ. ಅದರಂತೆ ಕೇಂದ್ರ ಸರ್ಕಾರ 19.34 ಕೋಟಿ, ರಾಜ್ಯ ಸರ್ಕಾರ 9.67 ಕೋಟಿ ಹಾಗೂ ಸಾರಿಗೆ ಸಂಸ್ಥೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ 3.22 ಕೋಟಿ ರೂ. ವೆಚ್ಚ ಭರಿಸಲಾಗುವುದು. ಇದರಿಂದ ನಗರ ಪ್ರದೇಶಗಳಲ್ಲಿ ದೊಡ್ಡ ಬಸ್‌ಗಳ ಬದಲು ಮಿನಿ ಬಸ್‌ಗಳನ್ನು ಬಳಸಿಕೊಳ್ಳಲು
ಅನುಕೂಲವಾಗಲಿದೆ ಎಂದು ಸಭೆ ಬಳಿಕ ಜಯಚಂದ್ರ ತಿಳಿಸಿದರು.  

ಸಂಪುಟ ಇತರ ತೀರ್ಮಾನಗಳು
1. ಎನ್‌ಆರ್‌ಎಚ್‌ಎಂ ಯೋಜನೆಯಡಿ 103 ಕೋಟಿ ರೂ. ವೆಚ್ಚದಲ್ಲಿ ಡಯೋಗ್ನೊಸ್ಟಿಕ್‌ ಯಂತ್ರಗಳ ಖರೀದಿಗೆ ಒಪ್ಪಿಗೆ.

2.  ಕಲಬುರಗಿಯಲ್ಲಿ 47.10 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಭವನ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮತಿ.

3. ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಟ್ಟಡ ನಿರ್ಮಾಣಕ್ಕೆ ಹೆಚ್ಚುವರಿ 29.60 ಕೋಟಿ ರೂ. ಆನುದಾನ.

4. ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ 22 ಕೋಟಿ ರೂ. ವೆಚ್ಚದಲ್ಲಿ 3-ಡಿ ತಾರಾಲಯ ನಿರ್ಮಾಣಕ್ಕೆ ಅಸ್ತು

5. ನಾಡಪ್ರಭು ಕೇಂಪೇಗೌಡ ಪ್ರಾಧಿಕಾರಕ್ಕೆ ಉಪಾಧ್ಯಕ್ಷರಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ ನೇಮಕ.

6. ಸಂತ ಸೇವಾಲಾಲ್‌ ಜನ್ಮಸ್ಥಳ ಮಹಾಮಠ ಸಮಿತಿಗೆ 13.20 ಎಕರೆ ಜಮೀನು ಮಂಜೂರು.

ಟಾಪ್ ನ್ಯೂಸ್

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

ಖರ್ಗೆ

ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Jay Shah said that canceling the contract of Ishaan and Iyer was not his decision

BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

ಖರ್ಗೆ

ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.