ಚಿಕ್ಕಮಗಳೂರು:ಅವಲಕ್ಕಿ ಗಂಟಲಲ್ಲಿ ಸಿಲುಕಿ 1.5 ವರ್ಷದ ಮಗು ಸಾವು | Udayavani - ಉದಯವಾಣಿ
   CONNECT WITH US  
echo "sudina logo";

ಚಿಕ್ಕಮಗಳೂರು:ಅವಲಕ್ಕಿ ಗಂಟಲಲ್ಲಿ ಸಿಲುಕಿ 1.5 ವರ್ಷದ ಮಗು ಸಾವು

ಚಿಕ್ಕಮಗಳೂರು: ಗಂಟಲಲ್ಲಿ ಅವಲಕ್ಕಿ ಸಿಲುಕಿದ ಪರಿಣಾಮವಾಗಿ ಉಸಿರುಗಟ್ಟಿ 1.5 ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಶಿರಗುಂದ ಎಂಬಲ್ಲಿ ನಡೆದಿದೆ. 

ಪೂತ್ತೂರಿನ  ಸ್ವರ್ಗ-ಸೂರಂಬೈಲು ನಿವಾಸಿ ದುರ್ಗಾಪ್ರಸಾದ್‌ ಅವರ ಪುತ್ರ ಧ್ರುವ (1.5 ವರ್ಷ) ಸೋಮವಾರ ಬೆಳಗ್ಗೆ  ಅಜ್ಜಿ ಮನೆಗೆ ತೆರಳಿದ್ದ ಬೆಳಗ್ಗೆ ಕಾಫಿ- ತಿಂಡಿ ತಿನ್ನುತ್ತಿದ್ದ ವೇಳೆ ಹುಡಿ ಅವಲಕ್ಕಿ ಗಂಟಲಲ್ಲಿ ಸಿಲುಕಿ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. 

ಕಳೆದ 20 ವರ್ಷಗಳಿಂದ ಪುತ್ತೂರಿ ನಲ್ಲಿ ವಯೋಲಿನ್‌ ತರಬೇತಿ ನೀಡುತ್ತಿದ್ದ ವಿದ್ವಾನ್‌ ಪದ್ಮನಾಭ ಆಚಾರ್ಯರ
ಮೊಮ್ಮಗ ಧ್ರುವ. ರವಿವಾರವಷ್ಟೇ ಚಿಕ್ಕಮಗಳೂರಿನಲ್ಲಿರುವ ತನ್ನ ಅಜ್ಜಿ (ತಾಯಿಯ ತಾಯಿ) ಮನೆಗೆ ತೆರಳಿದ್ದರು.

ಶ್ವಾಸಕೋಶದಲ್ಲಿ ಅವಲಕ್ಕಿ ಸಿಕ್ಕಿಕೊಂಡ ಕಾರಣ, ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟದೆ.  

ಮೃತದೇಹವನ್ನು ಸ್ವರ್ಗದ ಸೂರಂಬೈಲಿಗೆ ತರಲಾಗಿದ್ದು ಅಜ್ಜ, ಅಜ್ಜಿ, ತಂದೆ, ತಾಯಿ, ಅಣ್ಣನನ್ನು ಅಗಲಿದ್ದಾರೆ.ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Trending videos

Back to Top