CONNECT WITH US  

ಪೊಲೀಸ್‌ ಮೇಲೆ ದಾಳಿ: ಇನ್ನೋರ್ವ ರೌಡಿ ಶೀಟರ್‌ ಕಾಲಿಗೆ ಗುಂಡು 

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ರೌಡಿ ಶೀಟರ್‌ಗಳು ಅಟ್ಟಹಾಸ ಮೆರೆಯಲು ಮುಂದಾಗಿ ಪೊಲೀಸರಿಂದ ಗುಂಡೇಟಿನ ರುಚಿ ಸವಿಯುತ್ತಿದ್ದಾರೆ. ಗುರುವಾರ ಮಹದೇವಪುರದ ಸಿಂಗಯ್ಯನ ಪಾಳ್ಯದಲ್ಲಿ ಇನ್ನೋರ್ವ ರೌಡಿಯ ಕಾಲಿಗೆ ಗುಂಡು ಹಾರಿಸಲಾಗಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಲು ತೆರಳಿದ್ದ ವೇಳೆ ರೌಡಿಶೀಟರ್‌ ಚರಣ್‌ ರಾಜ್‌ ಎಂಬಾತ ಪೇದೆಯ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪಿಎಸ್‌ಐ ನಾರಾಯಣಸ್ವಾಮಿ ಅವರು ಚರಣ್‌ ರಾಜ್‌ ಕಾಲಿಗೆ ಗುಂಡು ಹಾರಿಸಿದ್ದಾರೆ. 

ಹಲ್ಲೆಗೊಳಗಾದ ಪೇದೆ ಮತ್ತು ರೌಡಿ ಶೀಟರ್‌  ಚರಣ್‌ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 


Trending videos

Back to Top